ಅಣ್ಣಯ್ಯ ಚಿತ್ರದ ರವಿಚಂದ್ರನ್ ಹೀರೊಯಿನ್ ಮಧು ಹೇಗಾಗಿದ್ದಾರೆ ಈಗ ನೋಡಿ!
ತಮಿಳು ಮೂಲದ ಮಧುಬಾಲ ಉರ್ಫ್ ಮಧು ಬಹುಭಾಷಾ ನಟಿ. ಬಾಲಿವುಡ್ ಮತ್ತು ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಕನ್ನಡದ ಆಣ್ಣಯ್ಯ ಸಿನಿಮಾದಲ್ಲಿ ರವಿಚಂದ್ರನ್‌ಗೆ ನಾಯಕಿ ಆಗಿದ್ದರು ಇವರು. ಸುಮಾರು 30ಕ್ಕೂ ಹೆಚ್ಚು ಬಹು ಭಾಷಾ ಸಿನಿಮಾಗಳಲ್ಲಿ ನಟಿಸಿದ್ದರೂ ಇವರಿಗೆ ಫೇಮ್ ತಂದು ಕೊಟ್ಟಿದ್ದು ತಮಿಳಿನ ಸೂಪರ್ ಡೂಪರ್ ಹಿಟ್ ರೋಜಾ. ಇಂಡಸ್ಟ್ರಿಯಗೆ ವಿದಾಯ ಹೇಳಿರುವ ಮಧು ಈಗ ಹೇಗಿದ್ದಾರೆ ನೋಡಿ.
ಚೆನ್ನೈನಲ್ಲಿ ಜನಿಸಿದ ಮಧುಬಾಲ ಉರ್ಫ್ ಮಧು ಬಾಲಿವುಡ್ ಮತ್ತು ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ.
ಕನ್ನಡದ ಸೂಪರ್ ಹಿಟ್ ಆಣಯ್ಯ ಸಿನಿಮಾದಲ್ಲಿ ರವಿಚಂದ್ರನ್‌ಗೆ ನಾಯಕಿಯಾಗುವ ಮೂಲಕ ಕನ್ನಡ ಸಿನಿಮಾಕ್ಕೂ ಎಂಟ್ರಿ ಕೊಟ್ಟ ರೋಜಾ ಚೆಲುವೆ.
ಹಿಂದಿ ಸಿನಿಮಾದ ಫೇಮಸ್ ನಟಿ ಡ್ರೀಮ್‌ಗರ್ಲ್ ಹೇಮಮಾಲಿನಿ ಸಂಬಂಧಿ ಮಧು.
ಮಧು ಹಿಂದಿ, ತಮಿಳು, ಮಲೆಯಾಳಂ, ಕನ್ನಡ, ಮತ್ತು ತೆಲುಗು ಭಾಷೆಗಳ ಒಟ್ಟು 30 ಚಲನಚಿತ್ರಗಳಲ್ಲಿ ನಟಿಸಿರುವ ಕೀರ್ತಿ ಹೊಂದಿದ್ದಾರೆ.
ಮಲೆಯಾಳಂನ ಒಟ್ಟಾಯಲ್ ಪಟ್ಟಾಲಂ ಸಿನಿಮಾದೊಂದಿಗೆ ನಟನಾ ಕೆರಿಯರ್ ಆರಂಭ ಮಾಡಿದ ಮಧು.
ಫೂಲ್ ಔರ್ ಕಾಂಟೆ ಸಿನಿಮಾ ಇವರನ್ನು ಮೊದಲು ಬಾಲಿವುಡ್‌ಗೆ ಪರಿಚಯಸಿತು.
1992 ರ ತಮಿಳು ಸೂಪರ್ ಹಿಟ್ ಚಲನಚಿತ್ರ ರೋಜಾ ಪಾತ್ರದಿಂದ ರಾತ್ರೋರಾತ್ರಿ ಫೇಮಸ್ ಆದ ನಟಿ ಇವರು. ಈ ಚಿತ್ರವನ್ನು ಅನೇಕ ಭಾಷೆಗಳಲ್ಲಿ ಡಬ್ ಕೂಡ ಮಾಡಲಾಗಿದೆ.
ನಟಿ ಮಧುವಿನ ಇತರ ಜನಪ್ರಿಯ ರೀಲಿಸ್‌ಗಳಲ್ಲಿ ದಿಲ್ಜಲೆ, ಯಶ್ವಂತ್ ಮತ್ತು ಪೆಹ್ಚಾನ್ ಸಿನಿಮಾಗಳು ಸೇರಿದೆ.
ಶ್ರೀಮಂತ ಕೈಗಾರಿಕೋದ್ಯಮಿ ಫ್ಯಾಮಿಲಿಯ ಆನಂದ್ ಷಾ ಅವರನ್ನು ವಿವಾಹವಾಗಿ ಯು.ಎಸ್‌ಗೆ ಶಿಫ್ಟ್ ಆಗಿದ್ದ ಮಧು 2 ಮಕ್ಕಳನ್ನು ಹೊಂದಿದ್ದಾರೆ.
ಅಮೆಯಾ ಮತ್ತು ಕೇಲಾ ನಟಿ ಮಧುವಿನ ಮಕ್ಕಳು.
ಸಿನಿಮಾಗಳಷ್ಟೇ ಅಲ್ಲದೇ ಕಿರು ತೆರೆಯಲ್ಲೂ ಕೆಲಸ ಮಾಡಿದ್ದಾರೆ ಈ ನಟಿ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಇವರು ಫೋಟೋ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ಇತ್ತೀಚೆಗೆ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಪೋಟೋ.