ವೀಲ್ ಚೇರ್ ರೋಮಿಯೋ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿರುವುದು ಕೇಳಿ ಖುಷಿಯಾಗಿದೆ. ಇಡೀ ಚಿತ್ರತಂಡಕ್ಕೆ ಶುಭವಾಗಲಿ ಎಂದು ಬೆಸ್ಟ್ ವಿಶಸ್ ತಿಳಿಸಿದ್ದಾರೆ. ಕಿಚ್ಚನ ಶುಭ ಹಾರೈಕೆಗೆ ಚಿತ್ರತಂಡ ಧನ್ಯವಾದ ಅರ್ಪಿಸಿದೆ.

ಕಿಚ್ಚ ಸುದೀಪ್ ಅಂದ್ರೆ ಗೊತ್ತಲ್ಲ.. ಹೊಸಬರಾಗಿರಲಿ, ಪಳಗಿದವರಿರಲಿ, ಅದ್ಭುತವಾದ ಸಿನಿಮಾ ಮಾಡಿದ್ದಾರೆಂದರೆ ಅವರ ಬೆನ್ನು ತಟ್ಟದೆ ಇರುವುದಿಲ್ಲ. ಹಾಗೇ ಸಿನಿಮಾದ ಪ್ರಮೋಷನ್ ಗೆ ಯಾರೇ ಕರೆದರು ಅವರ ಹತ್ತಿರಕ್ಕೆ ಹೋಗಿ ಅರಸಿ ಬರುತ್ತಾರೆ. ಅಷ್ಟು ಸಪೋರ್ಟಿವ್ ಗುಣ ಇರುವವರು ಅಭಿನಯ ಚಕ್ರವರ್ತಿ.

Add Asianetnews Kannada as a Preferred SourcegooglePreferred

ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಿನಿಮಾವೊಂದು ಸದ್ದು ಮಾಡುತ್ತಿದೆ. ಇದೇ ತಿಂಗಳ 27 ರಂದು ರಿಲೀಸ್ ಆದ ಸಿನಿಮಾ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದೆ. ನೋಡಿದ ಪ್ರತಿಯೊಬ್ಬರು ಆ ಪ್ರೀತಿಯಲ್ಲಿ ಕರಗಿ ಮತ್ತೊಬ್ಬರಿಗೂ ಆ ಫೀಲ್ ಥಿಯೇಟರ್‌ನಲ್ಲಿಯೇ ಫೀಲ್ ಮಾಡುವಂತೆ ತಿಳಿಸುತ್ತಿದ್ದಾರೆ. ಕಂಟೆಂಟ್ ಒರಿಯೆಂಟೆಡ್ ಸಿನಿಮಾವಾಗಿರುವ ಕಾರಣ ಎಲ್ಲರ ಮನಸ್ಸಿಗೂ ಹತ್ತಿರವಾಗಿದೆ. ಮೌಥ್ ಟು ಮೌಥ್ ಪ್ರಮೋಷನ್ ಜೋರಾಗಿದೆ. ಇದನ್ನು ಗಮನಿಸಿರುವ ಕಿಚ್ಚ ಸುದೀಪದ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ವೀಲ್ ಚೇರ್ ರೋಮಿಯೋ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿರುವುದು ಕೇಳಿ ಖುಷಿಯಾಗಿದೆ. ಇಡೀ ಚಿತ್ರತಂಡಕ್ಕೆ ಶುಭವಾಗಲಿ ಎಂದು ಬೆಸ್ಟ್ ವಿಶಸ್ ತಿಳಿಸಿದ್ದಾರೆ. ಕಿಚ್ಚನ ಶುಭ ಹಾರೈಕೆಗೆ ಚಿತ್ರತಂಡ ಧನ್ಯವಾದ ಅರ್ಪಿಸಿದೆ.
ಸದ್ಯ ರಾಜ್ಯಾದ್ಯಂತ ರಿಲೀಸ್ ಆಗಿರುವ ವೀಲ್ ಚೇರ್ ರೋಮಿಯೋ ಕಥೆ, ಸಂಭಾಷಣೆಯಿಂದಲೇ ಮೆಚ್ಚುಗೆ ಗಳಿಸುತ್ತಿದೆ. ಗುರು ಕಶ್ಯಪ್ ಅವರ ಪಂಚ್ ಡೈಲಾಗ್ ಗಳೇ ಸಿನಿಮಾದಲ್ಲಿ ಹೈಲೇಟ್ ಆಗಿದೆ. ಇನ್ನು ನಟರಾಜ್ ಕೂಡ ಮೊದಲ ನಿರ್ದೇಶನದಲ್ಲಿಯೇ ಗೆದ್ದಿದ್ದಾರೆ. ಹಾಡುಗಳು ಮೊದಲೇ ಹಿಟ್ ಆಗಿದ್ದವು. ಬೆಳ್ಳಿ ಪರದೆ ಮೇಲೆ, ಸೌಂಡ್ ಸಿಸ್ಟಮ್ ಗಳ ನಡುವೆ ಇನ್ನಷ್ಟು ಮನಸ್ಸಿಗೆ ಮುದ ನೀಡಿವೆ. ಸಿನಿಮಾ ನೋಡಿದವರೆಲ್ಲಾ ಖುಷಿ ವ್ಯಕ್ತಪಡಿಸಿದ್ದಾರೆ.

ವೀಲ್ ಚೇರ್ ರೋಮಿಯೋ ಸಿನಿಮಾ ಒಂದು ಭಾವನಾತ್ಮಕವಾಗಿ ಕಟ್ಟಿ ಹಾಕುವಂತ ಕಥೆಯನ್ನು ಒಳಗೊಂಡಿದೆ. ಕಾಲಿಲ್ಲದ ನಾಯಕ ನಟನಿಗೆ ಕಣ್ಣಿಲ್ಲದ ಹುಡುಗಿ ಮೇಲೆ ಲವ್ವಾದಾಗ ಏನೆಲ್ಲಾ ಸಮಸ್ಯೆ ಎದುರಾಗುತ್ತೆ, ವೇಶ್ಯೆಯೊಬ್ಬಳು ವೀಲ್ ಚೇರ್ ರೋಮಿಯೋನನ್ನು ಒಪ್ಪಿಕೊಳ್ಳುತ್ತಾನಾ..? ಒಪ್ಪಿಸುವುದಕ್ಕೆ ಏನೆಲ್ಲಾ ಸಾಹಸಮಯ ಕೆಲಸಗಳನ್ನು ಮಾಡುತ್ತಾರೆ ಎಂಬುದೆಲ್ಲಾ ಸಿನಿಮಾದಲ್ಲಿ ಅಡಗಿದೆ.