Asianet Suvarna News Asianet Suvarna News

Ramachari 2: ಮಾರ್ಗರೇಟ್‌ ಆಗಿ 'ನನ್ನರಸಿ ರಾಧೆ' ನಟಿ ಕೌಸ್ತುಭ ಚಿತ್ರರಂಗಕ್ಕೆ!

ರಾಮಚಾರಿ 2 ಚಿತ್ರಕ್ಕೆ ಸಹಿ ಹಾಕಿದ ನಟಿ ಕೌಸ್ತುಭ. ಮೊದಲ ಚಿತ್ರದ ಬಗ್ಗೆ ನಟಿ ಹೇಳಿದ್ದಿಷ್ಟು.... 

Kannada Kaustubha Mani signs debut Ramachari 2 film projects vcs
Author
Bangalore, First Published Dec 2, 2021, 10:59 AM IST

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನನ್ನರಸಿ ರಾಧೆ' (Nanarasi Radhe) ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ಇಂಚರಾ (Inchara) ಅಲಿಯಾಸ್ ಕೌಸ್ತುಭ ಮಣಿ (Kaustubha Mani) ಇದೀಗ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ರಾಮಚಾರಿ ಚಿತ್ರದಲ್ಲಿ ಮಾರ್ಗರೇಟ್ ಪಾತ್ರಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಇದರ ಬಗ್ಗೆ ಕೌಸ್ತುಭ ಏನು ಹೇಳುತ್ತಾರೆ? ಕೌಸ್ತುಭ ಬ್ಯಾಗ್ರೌಂಡ್ ಏನು? ಎಲ್ಲದರ ಮಾಹಿತಿ ಇಲ್ಲಿದೆ...... 

ಯುವನಟ ತೇಜ್ (Tej) ನಟಿಸಿ, ನಿರ್ದೇಶನ ಮಾಡುತ್ತಿರುವ 'ರಾಮಚಾರಿ 2.o'(Ramachari 2.o) ಚಿತ್ರಕ್ಕೆ ಕೌಸ್ತುಭ ನಾಯಿಕಿಯಾಗಿದ್ದಾರೆ.  ಈ ಚಿತ್ರದಲ್ಲಿ ಕೌಸ್ತುಭ ಮಾರ್ಗರೇಟ್ (Margreth) ಆಗಿ ಮಿಂಚಲಿದ್ದಾರೆ. ಸಿನಿಮಾ ತಂಡ ಶೀಘ್ರದಲ್ಲಿಯೇ ಚಿತ್ರೀಕರಣ ಆರಂಭಿಸುವುದಾಗಿ ಹೇಳಿದ್ದಾರೆ. 

ಸಾಲುತಿಲ್ಲವೇ ಹಾಡಿಗೆ ನನ್ನರಸಿ ರಾಧೆ ನಟಿ ಜೊತೆ ಹೆಜ್ಜೆ ಹಾಕಿದ ಸುದೀಪ್

'ರಾಮಚಾರಿ ಮತ್ತು ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ (Mr and Ms. Ramachari) ಚಿತ್ರದ ಮಾರ್ಗರೇಟ್ ಪಾತ್ರ ಜನರ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದಿದೆ. ಸಿನಿಮಾಗಳಲ್ಲಿ ಅಭಿನಯಿಸುವಂತೆ ನನಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಲೇ ಇದ್ದವು. ಆದರೆ ಮಾರ್ಗರೇಟ್ ಹೆಸರು ಮತ್ತು ಪಾತ್ರ ಕೇಳಿ ಹಿಂದು ಮುಂದೂ ನೋಡದೇ ನಾನು ಒಪ್ಪಿಕೊಂಡೆ. ನಾನು ಸ್ಯಾಂಡಲ್‌ವುಡ್‌ಗೆ (Sandalwood) ಲಾಂಚ್ ಆಗೋದಕ್ಕೆ ಇದೇ ಪರ್ಫೆಕ್ಟ್‌ ಸಿನಿಮಾ, ಅಂತ ನನಗೆ ಅನಿಸಿತ್ತು. ನನ್ನರಸಿ ರಾಧೆ ಧಾರಾವಾಹಿ ಪಾತ್ರಕ್ಕಿಂತ ಇದು ವಿಭಿನ್ನವಾಗಿದೆ. ಸೀರಿಯಲ್ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕಿದೆ. ನನ್ನ ಹೆಸರಿಗಿಂತ ಜನ ನನ್ನನ್ನು ಇಂಚರಾ ಅಂತಲೇ ಗುರುತಿಸುತ್ತಾರೆ. ಇದು ನನಗೆ ಖುಷಿ ನೀಡಿದೆ,' ಎಂದು ಕೌಸ್ತುಭ ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

Kannada Kaustubha Mani signs debut Ramachari 2 film projects vcs

ಬೆಂಗಳೂರಿನ (Bengaluru) ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿಕಾಂ (Bcom) ವ್ಯಾಸಂಗ ಮಾಡಿರುವ ಕೌಸ್ತುಭ, ಕೆಲವು ವರ್ಷಗಳ ಕಾಲ ನಾರ್ತ್ ಆಪರೇಷನ್ ಸರ್ವಿಸ್‌ನಲ್ಲಿ ಕೆಲಸ ಮಾಡಿದ್ದಾರೆ.  ಆನಂತರ ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿಯೂ (Beauty Compition) ಭಾಗವಹಿಸಿದ್ದಾರೆ. ಹೀಗೆ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ, ಚಿತ್ರರಂಗದ ಖ್ಯಾತ ನಟಿಯೊಬ್ಬರು ಇವರ ಪ್ರತಿಭೆಯನ್ನು ಗುರುತಿಸಿ ಬಣ್ಣದ ಜರ್ನಿ ಆರಂಭಿಸಲು ಸಹಾಯ ಮಾಡಿದ್ದಂತೆ. 

ಹೌದು! ಕೌಸ್ತುಭ ಮಣಿಗೆ ಬಣ್ಣದ ಜರ್ನಿ ಆರಂಭಿಸಲು ಅವಕಾಶ ಕೊಡೆಸಿದ್ದು ಟಗರು ಪುಟ್ಟಿ ಮಾನ್ವಿತಾ ಹರೀಶ್ (Manvitha Harish). ಸೌಂದರ್ಯ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಆಗಮಿಸಿದ್ದ ಮಾನ್ವಿತಾ, ಕೌಸ್ತುಭ ಅವರ ನಂಬರ್ ಪಡೆದುಕೊಂಡು ಆನಂತರ ಧಾರಾವಾಹಿಯಲ್ಲಿ ಅವಕಾಶ ಕೊಡಿಸಿದ್ದಾರೆ. ಒಂದೆರಡು ಲುಕ್ ಟೆಸ್ಟ್ (Look test) ನಡೆದ ನಂತರ ಧಾರಾವಾಹಿಗೆ ಆಯ್ಕೆ ಆದರು ಈ ಕಲಾವಿದೆ. ಇದೀಗ ಕನ್ನಡ ಚಿತ್ರರಂಗಕ್ಕೂ ಎಂಟ್ರಿ ಕೊಡುತ್ತಿದ್ದಾರೆ. 

'ನನ್ನರಸಿ ರಾಧೆ'ಯ ಮಾತಿನ ಮಲ್ಲಿ ಅಸಲಿ ಮುಖವಿದು...

ಕೌಸ್ತುಭ ರಿಯಲ್ ಲೈಫ್‌ನಲ್ಲಿ ತುಂಬಾನೇ ಸೈಲೆಂಟ್ ಹುಡಗಿ. ಆದರೆ ಇಂಚರಾ ಪಾತ್ರಕ್ಕೆ ಮಾತ್ರ ಬಜಾರಿ ಹುಡುಗಿ ರೀತಿ ಅಭಿನಯಿಸುತ್ತಿದ್ದಾರೆ. ಧಾರಾವಾಹಿಯಿಂದ ಜನಪ್ರಿಯತೆ ಸಿಗುತ್ತಿದ್ದಂತೆ, ಪರಭಾಷೆಯಿಂದ ಅವಕಾಶಗಳು ಬರುತ್ತಿವೆ. ಆದರೆ ಸದ್ಯಕ್ಕೆ ಯಾವುದೂ ಒಪ್ಪಿಕೊಂಡಿಲ್ಲ. ಇಂಗ್ಲಿಷ್ (English), ಕನ್ನಡ, ತಮಿಳು (Tamil), ತೆಲುಗು (Telugu) ಮತ್ತು ಹಿಂದಿಯನ್ನು ಸ್ಪಷ್ಟವಾಗಿ ಮಾತನಾಡುತ್ತಾರಂತೆ. ತಾವು ಒಪ್ಪಿಕೊಂಡಿರುವ ಚಿತ್ರದ ಚಿತ್ರಕತೆ ಮತ್ತು ಚಿತ್ರೀಕರಣ ಸ್ಥಳಗಳ ಬಗ್ಗೆ ಮಾಹಿತಿ ರಿವೀಲ್ ಆಗಿಲ್ಲ ಆದರೆ ಇಡೀ ತಂಡ ತುಂಬಾನೇ ಎಕ್ಸೈಟ್ ಆಗಿದ್ದಾರೆ. 

ಧಾರಾವಾಹಿಯಲ್ಲಿ ಇಂಚರಾಳನ್ನು ವೀಕ್ಷಕರು ವಿಭಿನ್ನ ಶೇಡ್‌ನಲ್ಲಿ ನೋಡುತ್ತಿದ್ದಾರೆ. ಆರಂಭದಲ್ಲಿ ಬಜಾರಿ ಆಗಿದ್ದ ಇಂಚರಾ ಮದುವೆ ಆದ್ಮೇಲೆ ಮೌನಿಯಾಗುತ್ತಾಳೆ.  ತಾಯಿ (Mother) ವಿರುದ್ಧ ನಡೆದು, ಮನೆಯಿಂದ ಹೊರ ಬಂದು ಅತ್ತೆ ಮನೆ ಸೇರುತ್ತಿದ್ದಂತೆ ಮತ್ತೆ ಬಜಾರಿ ಆಗುತ್ತಾಳೆ. ಗಂಡನಿಗೆ ತೊಂದರೆ ಕೊಟ್ಟವರಿಗೆ ಸೈಲೆಂಟ್ ಆಗಿ ಪಾಠ ಕಳಿಸುತ್ತಾರೆ. ಅಷ್ಟೇ ಅಲ್ಲದೇ ಅಗಸ್ತ್ಯನ (Agasthya) ತಾಯಿ ಯಾರು, ಅವರ ಹಿನ್ನೆಲೆ ಏನು ಎಂದು ಕೂಡ ತಿಳಿದುಕೊಂಡು, ಮೌನಿಯಾಗಿದ್ದಾಳೆ. ಮಾವನ ಸಹಾಯದಿಂದ ಪರಿಸ್ಥಿತಿಯನ್ನು ಗಂಡನಿಗೆ ಅರ್ಥ ಮಾಡಿಸಿ, ಸುಖ ಸಂಸಾರ ನಡೆಸುತ್ತಿದ್ದಾರೆ. ಕೆಲವು ದಿನಗಳಿಂದ ಅಗಸ್ತ್ಯ ಮತ್ತು ಇಂಚರಾ ನಡುವೆ ಕೊಂಚ ರೊಮ್ಯಾನ್ಸ್ ಶುರುವಾಗಿದೆ. ಆ ಮೂಲಕ ಈ ಧಾರಾವಾಹಿ ವೀಕ್ಷಕರನ್ನು ಸೆಳೆದಿಡಿವಲ್ಲಿ ಯಶಸ್ವಿಯಾಗಿದೆ.

Follow Us:
Download App:
  • android
  • ios