Asianet Suvarna News Asianet Suvarna News

ನೋಡ್ರಪ್ಪಾ! ಇವರಿಗೆ ಕೊರೋನಾ ಭಯನೇ ಇಲ್ವಂತೆ?

ಶಾಲೆ​ಗ​ಳು, ಮಾಲ್‌​, ಚಿತ್ರ​ಮಂದಿ​ರ​ಗಳು ಸೇರಿ​ದಂತೆ ಜನ​ಸಂದ​ಣಿಯ ಪ್ರದೇ​ಶ​ಗಳು ಬಿಕೋ ಎನ್ನು​ತ್ತಿವೆ. ಒಟ್ಟಾಗಿ ನೂರು ಜನ ಸೇರಕ್ಕೂ ಹೆದ​ರು​ವಂತೆ ಕೊರೋನಾ ಭೀತಿ ಹುಟ್ಟಿ​ಸಿದೆ. ಕೇರಳ​ದಲ್ಲಿ ಚಿತ್ರ​ಮಂದಿ​ರ​ಗ​ಳನ್ನು ತಾತ್ಕಾ​ಲಿ​ಕ​ವಾಗಿ ಮುಚ್ಚು​ವಂತೆ ಸರ್ಕಾರವೇ ಆದೇಶ ನೀಡಿದೆ.

Kannada films to hit screen on 13 march
Author
Bangalore, First Published Mar 12, 2020, 8:39 AM IST

 ಕರ್ನಾ​ಟ​ಕ​ದಲ್ಲಿ ಚಿತ್ರ​ಮಂದಿ​ರ​ಗಳು ಬಾಗಿಲು ಹಾಕ​ದಿ​ದ್ದರೂ ಜನ ಸಿನಿಮಾ ನೋಡಲು ಬರುತ್ತಿಲ್ಲ ಎಂಬುದು ಖಾಲಿ ಚಿತ್ರ​ಮಂದಿ​ರ​ಗಳೇ ಹೇಳು​ತ್ತಿವೆ. ರಾಜ್ಯಕ್ಕೂ ಕೊರೋನಾ ಭೀತಿ ಗಾಢ​ವಾಗಿ ತಟ್ಟಿ​ದರೂ ಈ ವಾರ ತೆರೆಗೆ ಸಜ್ಜಾ​ಗಿ​ರುವ ಚಿತ್ರ​ಗ​ಳಿಗೂ ಇದ್ಯಾ​ವುದು ಲೆಕ್ಕ​ಕ್ಕಿಲ್ಲ ಎನ್ನು​ವಂತಿದೆ. ಹೀಗಾಗಿ ಕೊರೋ​ನಾಗೂ ಕ್ಯಾರೆ ಎನ್ನದೆ ಮಾಚ್‌ರ್‍ 12 ಮತ್ತು 13ಕ್ಕೆ ಐದಾರು ಸಿನಿ​ಮಾ​ಗಳು ಕನ್ನ​ಡ​ದಲ್ಲಿ ತೆರೆಗೆ ಬರು​ತ್ತಿವೆ.

ನಂಜನಗೂಡಿನಲ್ಲಿ ರಾಕಿ.. ಮುಡಿ ಕೊಟ್ಟಿದ್ದಕ್ಕೆ ಅಪ್ಪನ ಮೇಲೆ ಮುನಿಸಿಕೊಂಡ ಐರಾ!

ಚಿರಂಜೀವಿ ಸರ್ಜಾ ನಟ​ನೆಯ ‘ಶಿವಾ​ರ್ಜು​ನ’, ಶುಭಾ ​ಪೂಂಜಾ, ರಕ್ಷಾ… ಜೋಡಿಯ ‘ನಗ​ರ​ಗುಂದ ಬಂಡಾ​ಯ’, ಹೊಸ​ಬರ ಚಿತ್ರ​ಗ​ಳಾ​ದ ‘ಅಂಬಾ​ನಿ​ಪು​ತ್ರ’ ಹಾಗೂ ‘5 ಅಡಿ 7 ಅಂಗು​ಲ’, ನೇಹಾ ಪಾಟೀಲ್‌ ನಟ​ನೆಯ ‘ಹುಲಿ​ದು​ರ್ಗ’ ಚಿತ್ರ​ಗಳು ತೆರೆ ಮೇಲೆ ಕಾಣಿಸಿಕೊಳ್ಳಲಿವೆ. ಕಮ​ರ್ಷಿ​ಯಲ್‌ ಕತೆ, ರೈತನ ಬಯೋ​ಗ್ರಫಿ, ಕ್ರೈಮ್‌ ಥ್ರಿಲ್ಲರ್‌ ಹಾಗೂ ಪ್ರೇಮ ಕತೆಯನ್ನು ಒಳ​ಗೊಂಡಿ​ರುವ ಚಿತ್ರ​ಗಳಿವು. ಇವು​ಗಳ ಜತೆಗೆ ಮತ್ತೆ​ರಡು ಚಿತ್ರ​ಗಳು ಬಿಡು​ಗ​ಡೆಗೆ ಜತೆ​ಯಾ​ಗುವ ಸಾಧ್ಯತೆಗಳಿವೆ.

ಕೊರೋನಾ ವೈರಸ್‌ ಭೀತಿ​ಯಿಂದ ಬೇರೆ ರಾಜ್ಯ​ಗ​ಳಲ್ಲಿ ತಾತ್ಕಾ​ಲಿ​ಕ​ವಾಗಿ ಚಿತ್ರ​ಮಂದಿ​ರ​ಗಳು ಮುಚ್ಚಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಕರ್ನಾ​ಟ​ಕ​ದಲ್ಲಿ ಚಿತ್ರ​ಮಂದಿ​ರ​ಗಳು ಮುಚ್ಚ​ಬೇಕು ಎನ್ನುವ ಯಾವುದೇ ಆದೇ​ಶ​ವನ್ನು ಕರ್ನಾ​ಟಕ ಚಲ​ನ​ಚಿ​ತ್ರ ವಾಣಿಜ್ಯ ಮಂಡಳಿಯಿಂದ ಮಾಡಿಲ್ಲ. ಒಂದು ವೇಳೆ ಸರ್ಕಾರ ಆದೇಶ ಕೊಟ್ಟರೆ ಖಂಡಿತಾ ಅದನ್ನು ಪಾಲಿ​ಸು​ತ್ತೇವೆ. ಸರ್ಕಾರದ ಆದೇಶ ಇಲ್ಲದೆ ಥಿಯೇ​ಟರ್‌​ಗ​ಳಿಗೆ ಬಾಗಿಲು ಹಾಕಿ ಎನ್ನ​ಲಾ​ಗದು.- ಜೈರಾಜ್‌,ಕರ್ನಾ​ಟಕ ಚಲ​ನ​ಚಿತ್ರ ವಾಣಿಜ್ಯ ಮಂಡ​ಳಿ ಅಧ್ಯ​ಕ್ಷ​ರು

‘ರಾಜ್ಯ​ದಲ್ಲಿ ಕೊರೋನಾ ಭೀತಿ ಅಷ್ಟಾಗಿ ಇಲ್ಲ. ಒಳ್ಳೆಯ ಸಿನಿಮಾ ಆದರೆ ಜನ ನೋಡಲು ಬರು​ತ್ತಾರೆ’ ಎಂಬುದು ಆಯಾ ಚಿತ್ರ​ತಂಡ​ದ​ವರ ಅಭಿ​ಪ್ರಾ​ಯ.

ತೆರೆ​ ಕಾ​ಣು​ತ್ತಿ​ರು​ವ ಚಿತ್ರ​ಗಳು

1. ಶಿವಾ​ರ್ಜು​ನ

2. ನಗ​ರ​ಗುಂದ ಬಂಡಾ​ಯ

3. ಅಂಬಾನಿ ಪುತ್ರ

4. 5 ಅಡಿ 7 ಅಂಗು​ಲ

5. ಹುಲಿ​ದು​ರ್ಗ

ಸಿನಿಮಾ ಬಿಡು​ಗಡೆ ದಿನಾಂಕ​ವನ್ನು ನಾವು ಮೊದಲೇ ಘೋಷಣೆ ಮಾಡಿದ್ವಿ. ಒಂದು ಸಲ ಬಿಡು​ಗಡೆ ದಿನಾಂಕ ಪ್ರಕ​ಟಿ​ಸಿ ಥಿಯೇ​ಟರ್‌ ವ್ಯವಸ್ಥೆ ಮಾಡಿ​ಕೊಂಡು ಪ್ರಚಾರ ಶುರು ಮಾಡಕ್ಕೆ 50 ರಿಂದ 60 ಲಕ್ಷ ವೆಚ್ಚ​ವಾ​ಗ​ತ್ತದೆ. ಇದ್ದಕ್ಕಿ​ದ್ದಂತೆ ಬಿಡು​ಗಡೆ ದಿನಾಂಕ ಮುಂದೂ​ಡಿ​ದರೆ ದೊಡ್ಡ ಮಟ್ಟ​ದಲ್ಲಿ ನಷ್ಟ​ವಾ​ಗು​ತ್ತದೆ. ಮತ್ತೆ ಇದೇ ಥಿಯೇ​ಟರ್‌ ಸೆಟಪ್‌ ಸಿಗೋದು ಕಷ್ಟ. ಹೀಗಾಗಿ ಈಗ ಚಿತ್ರದ ಬಿಡು​ಗ​ಡೆ​ ಮುಂದೂ​ಡ​ಲಾ​ಗದು.- ಶಿವಾ​ರ್ಜುನ್‌, ನಿರ್ಮಾ​ಪ​ಕ

 

Follow Us:
Download App:
  • android
  • ios