ಒಂದು ವಿಭಿನ್ನವಾದ ಕತೆಯನ್ನು ಒಳಗೊಂಡಿರುವ ಸಿನಿಮಾ ‘ತ್ರಿಕೋನ’. ಕನ್ನಡದ ಜತೆಗೆ ತೆಲುಗು ಹಾಗೂ ತಮಿಳಿನಲ್ಲೂ ಈ ಸಿನಿಮಾ ತೆರೆಗೆ ಬರುತ್ತಿದೆ.

 ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಪಿ ಪ್ಲಸ್‌ ಮ್ಯೂಜಿಕ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಒಂದು ಮಿಲಿಯನ್‌ ಹಿಟ್ಸ್‌ ಪಡೆದುಕೊಂಡಿದೆ. ಮೂರು ತಲೆಮಾರಿನ ಕತೆಯನ್ನು ಒಳಗೊಂಡಿರುವ ಚಿತ್ರ ಇದಾಗಿದೆ. ಅಂದರೆ 65ರ ಇಳಿವಯಸ್ಸಿನ ಅನುಭವ, 45ರ ಅಹಂ, 25ರ ವಯಸ್ಸಿನ ಶಕ್ತಿ ಈ ಮೂರು ವಯಸ್ಸಿನ ಹಿನ್ನೆಲೆಯಲ್ಲಿ ಚಿತ್ರದ ಕತೆ ಸಾಗಲಿದೆ. ಈ ಹಿಂದೆ ‘143’ ಹೆಸರಿನಲ್ಲಿ ಸಿನಿಮಾ ನಿರ್ದೇಶಿಸಿ ಗಮನ ಸೆಳೆದಿದ್ದ ಚಂದ್ರಕಾಂತ್‌, ‘ತ್ರಿಕೋನ’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ರಾಜಶೇಖರ್‌ ಚಿತ್ರದ ನಿರ್ಮಾಪಕರು. ಜತೆಗೆ ಚಿತ್ರಕ್ಕೆ ಇವರದ್ದೇ ಕತೆ ಕೂಡ.

300 ಚಿತ್ರಮಂದಿರಗಳಲ್ಲಿ 'ಯುವರತ್ನ'; ಮುಂಗಡ ಬುಕ್ಕಿಂಗ್‌ನಲ್ಲೂ ಯುವ ಸಂಭ್ರಮ! 

ಏಪ್ರಿಲ್‌ ತಿಂಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಹಿರಿಯ ನಟಿ ಲಕ್ಷ್ಮೀ, ಸುರೇಶ್‌ ಹೆಬ್ಳಿಕರ್‌, ಅಚ್ಯುತ್‌ ಕುಮಾರ್‌, ಸಾಧು ಕೋಕಿಲ, ಸುಧಾರಾಣಿ ಮುಂತಾದವರು ನಟಿಸಿದ್ದಾರೆ. ಜತೆಗೆ ಹೊಸ ಪ್ರತಿಭೆಗಳಾದ ರಾಜವೀರ್‌ ಹಾಗೂ ಮಾರುತೇಶ್‌ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

'ಬಂಗಾರದ ಮನುಷ್ಯ' ಉದ್ಯಾನ ಉದ್ಘಾಟಿಸಿದ ದುನಿಯಾ ವಿಜಯ್; ಅಣ್ಣಾವ್ರ ಪುತ್ಥಳಿ ಹೇಗಿದೆ ನೋಡಿ 

ಮನುಷ್ಯ ಜೀವನದಲ್ಲಿ ತಾಳ್ಮೆ ಇದ್ರೆ ಏನೆಲ್ಲ ಸಂಪಾದನೆ ಮಾಡ್ತಾನೆ, ತಾಳ್ಮೆ ಇಲ್ಲದಿದ್ದರೆ ಏನೆಲ್ಲ ಕಳೆದುಕೊಳ್ಳುತ್ತಾನೆ ಎಂಬುದನ್ನು ಈ ಸಿನಿಮಾದಲ್ಲಿ ನಿರ್ದೇಶಕರು ಹೇಳಹೊರಟಿದ್ದಾರೆ. ಬೆಂಗಳೂರು, ತುಮಕೂರು, ಹಾಸನ, ಸಕಲೇಶಪುರ, ಸುಬ್ರಮಣ್ಯ, ಮಂಗಳೂರು, ಚಾರ್ಮಾಡಿ ಘಾಟ್‌, ಶಿರಾಡಿ ಘಾಟ್‌, ಕೂಡ್ಲು ತೀರ್ಥದಲ್ಲಿ ಸಿನಿಮಾ ಚಿತ್ರೀಕರಣವಾಗಿದೆ. ಶ್ರೀನಿವಾಸ್‌ ವಿನ್ನಕೋಟ್‌ ಕ್ಯಾಮೆರಾ, ಸುರೇಂದ್ರನಾಥ್‌ ಪಿ ಆರ್‌ ಸಂಗೀತ ಚಿತ್ರಕ್ಕಿದೆ. ಕನ್ನಡದಲ್ಲಿ ‘ತ್ರಿಕೋನ’, ತೆಲುಗಿನಲ್ಲಿ ‘ತ್ರಿಕೋನಂ’ ಹಾಗೂ ತಮಿಳಿನಲ್ಲಿ ‘ಗೋಸುಲೋ’ ಹೆಸರಿನಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ.