Asianet Suvarna News Asianet Suvarna News

ಚಿತ್ರರಂಗದಲ್ಲಿ 1000 ಕೋಟಿ ರೂ. ಲಾಕ್; ಕೋಟಿಗಳ ಗಡಿ ದಾಟಿದ ಸಿನಿಮಾ ನಷ್ಟದ ಲೆಕ್ಕಾಚಾರ!

ಕಳೆದ ಒಂದು ವರ್ಷದಿಂದ ಚಿತ್ರರಂಗದ ಎಕಾನಾಮಿಕ್‌ಸ್ ಪಾತಾಳಕ್ಕೆ ಇಳಿದಿದೆ. ಒಂದೆರಡು ಸಿನಿಮಾಗಳು ತೆರೆಕಂಡು ಇನ್ನೇನು ಚೇತರಿಸಿಕೊಳ್ಳುತ್ತದೆ ಎಂದುಕೊಳ್ಳುವಾಗಲೇ ಮತ್ತೊಮ್ಮೆ ಕೊರೋನಾ ತನ್ನ ಅಟ್ಟಹಾಸ ಮೆರೆಯಿತು. ಈಗ ಮತ್ತಷ್ಟು ಲೆಕ್ಕಾಚಾರ ಉಲ್ಟಾ ಆಗಿದೆ. ಅಲ್ಲದೆ ಸ್ಟಾರ್ ನಟರು ಸುಮ್ಮನೆ ಕೂತಿದ್ದಾರೆ. ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ.
 

Kannada film industry faces massive financial lock in Covid19 second-wave lockdown vcs
Author
Bangalore, First Published Jun 4, 2021, 12:16 PM IST | Last Updated Jun 4, 2021, 12:29 PM IST

ಸ್ಟಾರ್ ನಟರು ಹೀಗೆ ಖಾಲಿ ಕೂತಿರುವುದು ಸೇರಿದರೆ ಒಂದು ವರ್ಷದಲ್ಲಿ ಚಿತ್ರರಂಗದಲ್ಲಿ ನಿಂತ ವಹಿವಾಟು, ಚಿತೊ್ರೀದ್ಯಮಕ್ಕೆ ಆದ ನಷ್ಟ ಎಷ್ಟು ಎಂಬುದನ್ನು ನೋಡಿದರೆ ಕೋಟಿಗಳ ಗಡಿ ದಾಟುತ್ತದೆ. ಸ್ಟಾರ್ ನಟರ ಸಂಭಾವನೆ ಹಾಗೂ ಚಿತ್ರರಂಗದ ಆಯಾ ಸಿನಿಮಾದ ವೆಚ್ಚ ಸೇರಿದರೆ ಈ ಒಂದು ವರ್ಷದಲ್ಲಿ ಒಟ್ಟು 1000 ಸಾವಿರ ಕೋಟಿ ವಹಿವಾಟು ನಿಂತಿದೆ.

ಸಿನಿಮಾ ಕಲಾವಿದರಿಗೆ ಸಹಾಯ ಮಾಡಲು ಮುಂದಾದ ಯಶ್! 

ಒಂದು ವರ್ಷಕ್ಕೆ 250 ರಿಂದ 300ಕ್ಕೂ ಹೆಚ್ಚು ಚಿತ್ರಗಳು ಕನ್ನಡದಲ್ಲಿ ತೆರೆಗೆ ಬರುತ್ತಿದ್ದವು. ಇದರಲ್ಲಿ ಸ್ಟಾರ್ ನಟರು ಒಪ್ಪಿಕೊಳ್ಳುವ ಒಂದು ಚಿತ್ರಕ್ಕೆ ಅಂದಾಜು 25 ರಿಂದ 30 ಕೋಟಿ ವೆಚ್ಚ ಆಗುತ್ತದೆ. ಇನ್ನೂ ಎರಡನೇ ಸಾಲಿನ ಹೀರೋಗಳ ಪ್ರತಿ ಚಿತ್ರಕ್ಕೂ 3 ರಿಂದ 5 ಕೋಟಿ ವೆಚ್ಚ ಆಗುತ್ತದೆ.

Kannada film industry faces massive financial lock in Covid19 second-wave lockdown vcs

ಈಗ ಸ್ಟಾರ್‌ಗಳ ಕೈಯಲ್ಲಿ ಎರಡರಿಂದ ಮೂರು ಸಿನಿಮಾಗಳಿವೆ. ಈ ಪೈಕಿ ಎರಡು ಸಿನಿಮಾಗಳು ತೆರೆಗೆ ಬರುತ್ತಿದ್ದವು. ಉಳಿದ ನಟರ ಕೈಯಲ್ಲಿ 4 ರಿಂದ 5 ಸಿನಿಮಾಗಳು ಇದ್ದು, ಮೂರು ಚಿತ್ರಗಳಾದರೂ ಬಿಡುಗಡೆಯಾಗುತ್ತಿದ್ದವು. ಆದರೆ, ಈ ಸಿನಿಮಾಗಳು ಈ ವರ್ಷ ಬರಲಿಲ್ಲ. ಈ ಲೆಕ್ಕದಲ್ಲಿ ಸ್ಟಾರ್ ನಟರು ಸೇರಿದರೆ ಎಲ್ಲ ನಟರ ಸಿನಿಮಾಗಳು ಸೆಟ್ಟೇರದೆ, ಯಾವುದೇ ವಹಿವಾಟು ಕೂಡ ನಡೆಯದೆ ಕೇವಲ ಒಂದೇ ವರ್ಷ ಕನ್ನಡ ಚಿತ್ರರಂಗದಲ್ಲಿ ರು.1000 ಕೋಟಿ ವಹಿವಾಟು ನಿಂತಿದೆ ಎಂಬುದು ಚಿತ್ರರಂಗದ ಲೆಕ್ಕಾಚಾರ.

ಕೊರೋನಾ ರೋಗಿಗಳ ಸೇವೆಗಾಗಿ ಆಕ್ಸಿಜನ್ ವ್ಯಾನ್ ನೀಡಿದ ಅರುಣ್ ಗೌಡ! 

ಚಿತ್ರರಂಗದ ಒಂದು ವರ್ಷದ ವಹಿವಾಟು ಅಂದರೆ ವೆಚ್ಚದ ಹೊರತಾಗಿ ಆದಾಯದ ಲೆಕ್ಕ ನೋಡಿದರೆ ನೋಡಿದರೆ ರು.300 ಕೋಟಿ ನಷ್ಟ ಆಗಿದೆ. ವೆಚ್ಚ ಮತ್ತು ಆದಾಯ ಎರಡು ಸೇರಿದರೆ ಕಳೆದ ವರ್ಷ ಏಪ್ರಿಲ್ ತಿಂಗಳಿನಿಂದ ಈ ವರ್ಷದ ಏಪ್ರಿಲ್‌ವರೆಗೂ ಒಟ್ಟು ಒಂದು ಸಾವಿರದ ಮುನ್ನೂರು ಕೋಟಿಯಷ್ಟು ಚಿತ್ರರಂಗದ ಪಾಲಿಗೆ ಲಾಕ್ ಆಗಿದೆ. ಇಷ್ಟು ದೊಡ್ಡ ಮೊತ್ತವನ್ನು ಕೊರೋನಾ ಸಂಕಷ್ಟವು ಲಾಕ್ ಮಾಡಿದ್ದಲ್ಲದೆ, ಒಂದು ಸಿನಿಮಾ ಸೆಟ್ಟೇರಿದರೆ ಕನಿಷ್ಠ 50 ರಿಂದ 70 ಮಂದಿ ಕೆಲಸ ಮಾಡುತ್ತಿದ್ದರು. ಅಷ್ಟೂ ಮಂದಿಯ ದಿನದ ಉದ್ಯೋಗ ಕಿತ್ತುಕೊಂಡಿದೆ.
 

Latest Videos
Follow Us:
Download App:
  • android
  • ios