ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ಹೇಳಿದ ಸಿನಿಮಾ ಪಾಠಗಳು

ಏಕ್‌ಲವ್‌ಯಾ ಸಿನಿಮಾದ ಅನುಭದಿಂದಾಗಿ ಜೋಗಿ ಪ್ರೇಮ್‌ ಕೆಲವು ಪಾಠಗಳನ್ನು ಕಲಿತಿದ್ದಾರೆ. ಸ್ವಲ್ಪ ಖಾರವಾಗಿ, ನೇರವಾಗಿ ಅವರು ಹೇಳಿದ ಮಾತುಗಳಿವು. ಒಪ್ಪಿಸಿಕೊಳ್ಳಿ.

1. ಸಿನಿಮಾ ಅಂದ್ರೆ ಬ್ಯುಸಿನೆಸ್‌. ನನ್ನ ನಂಬಿದ ನಿರ್ಮಾಪಕರಿಗೆ ಕಾಸು ವಾಪಸ್‌ ಬರಬೇಕು. ಅದು ನನ್ನ ಮೊದಲ ಆದ್ಯತೆ. ಹಾಗಾಗಿ ಏಕ್‌ಲವ್‌ಯಾ ಚಿತ್ರವನ್ನು 300 ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದೆ. ಅಷ್ಟೊಂದು ಥಿಯೇಟರ್‌ ಯಾಕೆ ಎಂದರು ಕೆಲವರು. ಜೋಗಯ್ಯ ಸಿನಿಮಾ ಬಂದಾಗಲೂ ಜಾಸ್ತಿ ಚಿತ್ರಮಂದಿರದಲ್ಲಿ ರಿಲೀಸ್‌ ಮಾಡಿದ್ದೆ. ಯಾಕೆಂದರೆ ಈಗ ಯಾವ ಸ್ಟಾರ್‌ ಸಿನಿಮಾ ಆದರೂ ಒಂದೇ ವಾರ. 50 ದಿನ, 100 ದಿನದಲ್ಲಿ ನಂಬಿಕೆ ಇಲ್ಲ. ಮೊದಲ ವಾರ ಬಂದಷ್ಟುಬಂತು. ಎರಡನೇ ವಾರ ಕಾಲು ಭಾಗ ಕಲೆಕ್ಷನ್‌ ಬರುತ್ತದೆ. ಮೂರನೇ ವಾರ ಥಿಯೇಟರ್‌ ಬಾಡಿಗೆ ಕಟ್ಟಬಹುದಷ್ಟೇ.

2. ಏಕ್‌ಲವ್‌ಯಾ ಚಿತ್ರದ ವಿತರಣೆ ನಾನೇ ಮಾಡಿದ್ದೇನೆ. ಅನೇಕರು ಕೇಳಿದರೂ ಕೊಡಲಿಲ್ಲ. ಯಾಕೆಂದರೆ ಡಿಸ್ಟ್ರಿಬ್ಯೂಷನ್‌ ವಿಚಾರ ನಾನು ಕಲಿಯಬೇಕಿತ್ತು. ಎಲ್ಲಿಂದ ಎಷ್ಟುದುಡ್ಡು ಬರುತ್ತದೆ ಎಂದು ತಿಳಿಯಬೇಕಿತ್ತು. ಈಗ ಗೊತ್ತಾಗಿದೆ. ನಮ್ಮ ಮುಂದಿನ ಚಿತ್ರವನ್ನೂ ನಾನೇ ವಿತರಣೆ ಮಾಡುತ್ತೇನೆ.

ಬಳ್ಳಾರಿಯ ಹೊಸಪೇಟೆಯಲ್ಲಿ ಪ್ರೇಮ್ ಸಿನಿಮಾ ಅಂದರೆ ಮಧ್ಯ ರಾತ್ರಿ ಚಿತ್ರ ನೋಡುವ ಅಭಿಮಾನಿಗಳು ಇದ್ದಾರೆ. ಪ್ರೇಮ್ ಹೊಸ ಕಟೆಂಟ್ ಕೊಟ್ಟಿದ್ದಾರೆ ಅಂತಾ ಚಿತ್ರ ನೋಡುತ್ತಿದ್ದಾರೆ. ಚಿತ್ರದಲ್ಲಿನ ಸಂಗೀತ ಪೇಕ್ಷಕರಿಗೆ ಇಷ್ಟವಾಗಿದೆ. ಚಿತ್ರದ ಕಲೆಕ್ಷನ್ ಕೂಡಾ ಚೆನ್ನಾಗಿದೆ. ನಮ್ಮ ಮ್ಯಾನೇಜರ್ ಇನ್ನೂ ಲೆಕ್ಕ ಕೊಟ್ಟಿಲ್ಲ ಎಂದು ರಕ್ಷಿತಾ ತಿಳಿಸಿದ್ದಾರೆ.

3. ಪೈರಸಿ ಒಂದು ಶಾಪ. ನಾವು ನಮ್ಮ ಸಿನಿಮಾದ 1040 ಲಿಂಕುಗಳನ್ನು ಡಿಲೀಟ್‌ ಮಾಡಿಸಿದ್ದೇವೆ. ಇದನ್ನು ನಾವು ತಪ್ಪಿಸಲು ಆಗುವುದಿಲ್ಲ. ಸರ್ಕಾರ ಮನಸ್ಸು ಮಾಡಿದರೆ ಆಗುತ್ತದೆ. ನಾವು ವಾಣಿಜ್ಯ ಮಂಡಳಿಗೆ ಹೋಗುತ್ತೇವೆ. ಅವರು ಕ್ರೈಂಬ್ರಾಂಚ್‌ಗೆ ದೂರು ಕೊಡುತ್ತಾರೆ. ಅವರು ನಾಳೆ ನಾಡಿದ್ದು ಮಾಡೋಣ ಎನ್ನುತ್ತಾರೆ. ವಾಣಿಜ್ಯ ಮಂಡಳಿ ಪಟ್ಟು ಹಿಡಿದು ಸರ್ಕಾರದಿಂದ ಕ್ರಮ ಕೈಗೊಳ್ಳುವಂತೆ ಮಾಡಬೇಕು.

Ek Love Ya ಯಶಸ್ಸಿನ ಜೊತೆ ಮತ್ತೊಂದು ಕುತೂಹಲ ಹುಟ್ಟಿಸಿದ ಪ್ರೇಮ್!

4. ಯಾರೂ ಸಪೋರ್ಟ್‌ ಮಾಡಲ್ಲ. ಹೀಗಿರುವಾಗ ಒಗ್ಗಟ್ಟಾಗಿ ಹೋಗೋಣ ಅಂತ ಸುಮ್ಮನೆ ಭಾಷಣ ಮಾಡಬಾರದು. ನಮ್ಮವರೇ ಪೈರಸಿ ಲಿಂಕ್‌ ಶೇರ್‌ ಮಾಡುತ್ತಾರೆ. ಯಾರದೋ ಹೀರೋಗಳ ಹೆಸರು ಹಾಕಿ ಜಗಳ ಹಚ್ಚುತ್ತಾರೆ. ಅಭಿಮಾನಿಗಳಲ್ಲಿ ಒಂದು ವಿನಂತಿ, ಇಬ್ಬರ ನಡುವೆ ತಂದಿಕ್ಕುವ ಕೆಲಸ ಮಾಡಬೇಡಿ.