ಹೊಟ್ಟೆತುಂಬಿದವರಿಗಿಂತ ಹಸಿದವರ ಪರ ನಿಲ್ಲೋದು ದೊಡ್ಡದು: ಸುದೀಪ್
- ಹೊಟ್ಟೆತುಂಬಿದವರಿಗಿಂತ ಹಸಿದವರ ಪರ ನಿಲ್ಲೋದು ದೊಡ್ಡದು
- ಡೈಮಂಡ್ ಕ್ರಾಸ್ ಚಿತ್ರದ ಟ್ರೇಲರ್ ಬಿಡುಗಡೆ
‘ಅಹಂಕಾರಿಯಾಗಿರೋದು ತಪ್ಪಲ್ಲ. ಆದರೆ ಆ ಅಹಂನಿಂದ ಇನ್ನೊಬ್ಬರಿಗೆ ನೋವುಂಟು ಮಾಡೋದು ತಪ್ಪು. ಹೊಟ್ಟೆತುಂಬಿದವರ ಪರ ನಿಲ್ಲೋದಕ್ಕಿಂತ ಹಸಿದವರ ಪರ ನಿಲ್ಲೋದು ದೊಡ್ಡದು’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ನಾಗತಿಹಳ್ಳಿ ಸಿನಿ ಕ್ರಿಯೇಶನ್ಸ್ ನಿರ್ಮಾಣದ ರಾಮ್‌ದೀಪ್ ನಿರ್ದೇಶನದ ‘ಡೈಮಂಡ್ ಕ್ರಾಸ್’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಸುದೀಪ್ ಮಾತನಾಡಿದರು.
‘ಹಣಕ್ಕಿಂತ ಐಡಿಯಾಗೆ ಹೆಚ್ಚು ಬೆಲೆ. ಉತ್ತಮ ಐಡಿಯಾ ಇದ್ದರೆ ಸಾಮ್ರಾಜ್ಯ ಕಟ್ಟಬಹುದು. ಬುಜ್‌ರ್ ಖಲೀಫಾದ ಎತ್ತರಕ್ಕೆ ಏರಬಹುದು. ಡೈಮಂಡ್ ಕ್ರಾಸ್ ಚಿತ್ರವನ್ನು ಕಡಿಮೆ ಹಣದಲ್ಲಿ ಮಾಡಿದರೂ ಐಡಿಯಾ, ತಾಂತ್ರಿಕತೆ ಚೆನ್ನಾಗಿರುವ ಕಾರಣ ಹೈ ಬಜೆಟ್ ಸಿನಿಮಾದ ಫೀಲನ್ನೇ ನೀಡುತ್ತಿದೆ. ವಿಷ್ಣುವರ್ಧನ್ ಅವರಂಥಾ ನಟರೊಂದಿಗೆ ನಟಿಸಲು ನನಗೆ ಅವಕಾಶ ನೀಡಿದವರು ನಾಗತಿಹಳ್ಳಿ ಚಂದ್ರಶೇಖರ್. ಅದಕ್ಕೆ ಸದಾ ಋುಣಿ’ ಎಂದರು.
ಈ ಇಬ್ಬರು ನಿರ್ದೇಶಕರು ನನಗೆ ತುಂಬಾ ಫೇವರಿಟ್; ಸುದೀಪ್ನಾಗತಿಹಳ್ಳಿ ಚಂದ್ರಶೇಖರ್, ‘ಡೈಮಂಡ್ ಕ್ರಾಸ್ ಚಿತ್ರ ಹೊಸ ಬಗೆಯ ಸಿನಿಮಾ ಪರಂಪರೆಯ ಭಾಗವಾಗಿ ಹೊರಬರುತ್ತಿದೆ. ಆರು ವರ್ಷಗಳ ಕೆಳಗೆ ನಮ್ಮ ಟೆಂಟ್ ಸಿನಿಮಾದ ಗ್ಯಾರೇಜ್ ಜಾಗದಲ್ಲಿ ಎಸ್‌ಎಲ್‌ವಿ ತಿಂಡಿ ತಿನ್ನುತ್ತಾ ಈ ಸಿನಿಮಾ ಚರ್ಚೆ ಶುರು ಮಾಡಿದ್ದೆವು. ಈಗ ಚಿತ್ರ ಈ ಮಟ್ಟಕ್ಕೆ ಬೆಳೆದು ನಿಂತಿರೋದಕ್ಕೆ ಖುಷಿ ಇದೆ’ ಎಂದರು.
ಚಿತ್ರದ ನಿರ್ದೇಶಕ ರಾಮ್‌ದೀಪ್, ‘ಸೈಬರ್ ಜಗತ್ತು ಹೇಗೆ ಸಮಾಜದ ಒಳ್ಳೆಯದಕ್ಕೂ ಕೆಟ್ಟದಕ್ಕೂ ಕಾರಣವಾಗುತ್ತದೆ ಅನ್ನೋದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ’ ಎಂದರು. ರೋಜರ್ ನಾರಾಯಣ್, ರಜತ್ ಅಣ್ಣಪ್ಪ, ರೂಪಿಕಾ ಹಾಗೂ ಮನು ಕೆ ಎಂ ಚಿತ್ರದ ಮುಖ್ಯಪಾತ್ರಗಳಲ್ಲಿದ್ದಾರೆ. ಲೇಖನ್ ಸಂಗೀತ, ರಾಮಚಂದ್ರ ಬಾಬು ಅವರ ಕತೆ, ಚಿತ್ರಕತೆ, ಸಂಭಾಷಣೆ, ಸಂತೋಷ್ ರಾಧಾಕೃಷ್ಣನ್ ಛಾಯಾಗ್ರಹಣ ಚಿತ್ರಕ್ಕಿದೆ.
ಸುದೀಪ್ ಬಗ್ಗೆ ಆರ್‌ಜಿವಿ ಮಾತು:
'ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಕೆಲವು 3ಡಿ ಫೂಟೇಜ್ ನೋಡುವ ಭಾಗ್ಯ ಸಿಕ್ಕುತ್ತು. ಇದು ನೆಕ್ಸ್ಟ್ ಲೆವೆಲ್ ಸಿನಿಮಾ. ಅದ್ಭುತವಾಗಿದೆ. ಜುಲೈ 28ರಂದು ಬರ್ತಿರುವ ಈ ಸಿನಿಮಾವನ್ನು ನೋಡಲು ನಾನು ಕಾಯುತ್ತಿದ್ದೀನಿ' ಎಂದು ಹೇಳಿದ್ದಾರೆ. RGV ಟ್ವೀಟ್ ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿ ಧನ್ಯವಾದ ತಿಳಿಸಿದ್ದಾರೆ.
'ವಿಕ್ರಾಂತ್ ರೋಣ' ಟೀಸರ್ ಡೈಲಾಗ್‌ನಲ್ಲಿ RCB ತಂಡದ ಗ್ಲೆನ್ ಮ್ಯಾಕ್ಸ್ವೆಲ್ ..!ಸುದೀಪ್- ಜಗ್ಗೇಶ್ ಮಾತು:
‘ಜಗ್ಗೇಶ್ ಹೇಳೋ ಥರದ ಡೈಲಾಗ್ ನಾನು ಹೇಳಿದ್ರೆ ಯಾವ ರೇಂಜ್‌ಗೆ ಟ್ರೋಲ್ ಆಗಬಹುದು ಅಂತ ಯೋಚಿಸ್ತಿದ್ದೆ. ನಾನು ಜಗ್ಗೇಶ್ ಥರ ಡೈಲಾಗ್ ಹೊಡೆದ್ರೂ ನ್ಯೂಸಲ್ಲಿರ್ತೀನಿ, ಯಾರಿಗೋ ಸಪೋರ್ಚ್ ಮಾಡಿಲ್ಲಾಂದ್ರೂ ನ್ಯೂಸಲ್ಲಿರ್ತೀನಿ’ ಎಂದು ಮಾರ್ಮಿಕವಾಗಿ ಹೇಳಿದ್ದು ಸುದೀಪ್.