Asianet Suvarna News Asianet Suvarna News

ದರ್ಶನ್ ಫ್ರೆಂಡ್, ಕಾಟೇರ ನಿರ್ದೇಶಕ ತರುಣ್ ಸುಧೀರ್ ಪಟ್ಟಣಗೆರೆ ಶೆಡ್‌ ಹತ್ತಿರವೇ ಮದುವೆ ಆಗ್ತಿರೋದಾ?

ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ತರುಣ್-ಸೋನಲ್. ಮದುವೆ ಛತ್ರದ ಅಡ್ರೆಸ್ ಕೇಳಿ ಎಲ್ಲರೂ ಶಾಕ್.....

Kannada director Tharun Sudhir Sonal to tie knot in poornima palace pattanagere main road vcs
Author
First Published Aug 10, 2024, 12:29 PM IST | Last Updated Aug 10, 2024, 12:52 PM IST

ಕನ್ನಡ ಚಿತ್ರರಂಗದ ಅದ್ಭುತ ನಟ ಹಾಗೂ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್‌ ಮೊಂಥೆರೋ ಆಗಸ್ಟ್‌ 10 ಮತ್ತು 11ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅಗಸ್ಟ್‌ 9ರಂದು ಅರಿಶಿಣ ಶಾಸ್ತ್ರ ನಡೆದಿದೆ. ಅಲ್ಲದೆ ಸೋನಲ್‌ಗೆ ತಾಯಿ ಮತ್ತು ಸಹೋದರಿಯರು ಸೇರಿಕೊಂಡು ಸರ್ಪ್ರೈಸ್‌ ಬ್ಯಾಚುಲರ್ ಪಾರ್ಟಿ ನೀಡಿದ್ದಾರೆ. ಯಾವುದೇ ಆಡಂಬರ ಇಲ್ಲದೆ ಮಾಡಿಸಿರುವ ಮದುವೆ ಕಾರ್ಡ್‌ ಕೂಡ ಸಖತ್ ವೈರಲ್ ಆಗುತ್ತಿತ್ತು. ಮದುವೆ ಮಾತುಕತೆ ಶುರುವಾಗುತ್ತಿದ್ದಂತೆ ತರುಣ್‌ ತಮ್ಮ ಆಪ್ತ ಸ್ನೇಹಿತ ದರ್ಶನ್‌ರನ್ನು ಪರಪ್ಪನ ಅಗ್ರಹಾರದ ಜೈಲಿನಲ್ಲಿ ಭೇಟಿ ಮಾಡಿದ್ದರ.

ತರುಣ್ ಸುಧೀರ್ ನಿರ್ದೇಶನ ಮಾಡಿರುವ ಕಾಟೇರ ಸಿನಿಮಾದಲ್ಲಿ ನಟ ದರ್ಶನ್ ಅಭಿನಯಿಸಿದ್ದಾರೆ. ಅಲ್ಲದೆ ತರುಣ್ ಸದ್ಯ ಆಕ್ಷನ್ ಕಟ್ ಹೇಳುತ್ತಿರುವ ಡೆವಿಲ್ ಚಿತ್ರದಲ್ಲೂ ದರ್ಶನ್ ನಾಯಕ, ಚಿತ್ರದ ಬಹುತೇಕ ಕೆಲಸ ನಡೆದಿದೆ. ತರುಣ್ ಮತ್ತು ದರ್ಶನ್ ಮಾತ್ರವಲ್ಲ ಅವರ ತಂದೆಯಂದಿರಾದ ಸುಧೀರ್ ಮತ್ತು ತೂಗುದೀಪ ಶ್ರೀನಿವಾಸರವರು ಕೂಡ ರಂಗಭೂಮಿಯಿಂದ ಆಪ್ತ ಸ್ನೇಹಿತರು. ಹೀಗಾಗಿ ಇಬ್ಬರು ಕುಟುಂಬದವರು ಒಳ್ಳೆಯ ಒಡನಾಟ ಹೊಂದಿದ್ದಾರೆ. ಅಲ್ಲದೆ ತರುಣ್ ಮತ್ತು ಸೋನಲ್ ಲವ್‌ ಸ್ಟೋರಿಗೆ ಬಿಗ್ ಸಪೋರ್ಟ್ ಆಗಿ ನಿಂತಿದ್ದು ಗೆಳೆಯ ದರ್ಶನ್. 

ಜಿಂಗಲಕಾ ಲಕಾ ಬರೋ ಬರೋ....; ದುನಿಯಾ ವಿಜಯ್ 'ಭೀಮಾ' ಫಸ್ಟ್‌ ಡೇ ಕಲೆಕ್ಷನ್‌ ನೋಡಿ ಶಾಕ್ ಆಗಿ!

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ದರ್ಶನ್ ಪರಪ್ಪನ ಅಗ್ರಹಾರ ಸೇರಿದ್ದಾರೆ. ಸುಮಾರು 55 ದಿನಗಳಿಂದ ಜೈಲಿನಲ್ಲಿರುವ ದರ್ಶನ್‌ನ ನೋಡಲು ಸೆಲೆಬ್ರಿಟಿಗಳು ವಾರಕ್ಕೊಮ್ಮೆ ಆಗಮಿಸುತ್ತಾರೆ. ತರುಣ್ ಕೂಡ ಭೇಟಿ ಮಾಡಿದ್ದು ಮದುವೆ ವಿಚಾರಗಳನ್ನು ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ನೆಟ್ಟಿಗರು ಗಮನಿಸಿರುವ ವಿಚಾರ ಏನೆಂದರೆ ತರುಣ್ ಮದುವೆ ಆಗುತ್ತಿರುವ ಛತ್ರದ ಹೆಸರು ಪೂರ್ಣಿಮಾ ಪ್ಯಾಲೆನ್ಸ್‌ ಕನ್ವೆಷನ್ ಸೆಂಟರ್‌ನಲ್ಲಿ. ಇದು ಇರುವುದು ಪಟ್ಟಣಗೆರೆಯ ಮುಖ್ಯರಸ್ತೆಯಲ್ಲಿ. ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದ್ರೆ ಛತ್ರದಿಂದ ಸುಮಾರು ಪಟ್ಟಣಗೆರೆ ಶೆಡ್‌ಗೂ ಸುಮಾರು 15-20 ನಿಮಿಷ ದೂರದಲ್ಲಿ ಇದೆ. 

ಮನೆಯಲ್ಲಿಯೇ ಮಿಲನಾ ನಾಗರಾಜ್‌ ಅದ್ಧೂರಿ ಸೀಮಂತ; ನೇರಳೆ ಸೀರೆಯಲ್ಲಿ ಮಿಂಚಿದ ನಿಧಿಮಾ!

ದರ್ಶನ್‌ ಮತ್ತು ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರ ಪಟ್ಟಣಗೆರೆ ಶೆಡ್‌ ಗೂಗಲ್‌ ಮ್ಯಾಪ್‌ ಸೇರಿಕೊಂಡಿದೆ. ಅಲ್ಲಿಂದ ದರ್ಶನ್ ಅಭಿಮಾನಿಗಳು ಮತ್ತು ನೆಟ್ಟಿಗರು ಗೂಗಲ್‌ ಮ್ಯಾಪ್‌ನಲ್ಲಿ ಪಟ್ಟಣಗೆರೆ ಶೆಡ್‌ಗೆ ರಿವ್ಯೂ ಬರೆದಿದ್ದಾರೆ. ಡೀಲಿಂಗ್, ಮಾತುಕಥೆ ಮತ್ತು ಫೈಟಿಂಗ್ ಸೀನ್ ಶೂಟಿಂಗ್  ಮಾಡಲು ಬೆಸ್ಟ್‌ ಜಾಗ, ಯಾವುದೇ ಡೀಲಿಂಗ್ ಇದ್ದರೂ ಶೆಡ್‌ನಲ್ಲಿ ಪರಿಹಾರ ನೀಡಲಾಗುತ್ತದೆ ಎಂದು ಹಾಸ್ಯಸ್ಪದವಾಗಿ ಕಾಮೆಂಟ್ ಮಾಡಿದ್ದರು. ತರುಣ್ ಯಾಕೆ ಪಟ್ಟಣಗೆರೆ ಮುಖ್ಯರಸ್ತೆಯಲ್ಲಿ ಇರುವ ಈ ಛತ್ರವನ್ನು ಆಯ್ಕೆ ಮಾಡಿದ್ದಾರೆ ಎಂದು ಅನೇಕರ ಪ್ರಶ್ನೆಯಾಗಿದೆ. ತರುಣ್ ಅಥವಾ ಸೋನಲ್‌ ನಿವಾಸಕ್ಕೆ ಹತ್ತಿರ ಇರಬಹುದು ಅಥವಾ ಛತ್ರ ದೊಡ್ಡದಾಗಿದೆ ಎಷ್ಟೇ ಜನರು ಬಂದರೂ ಸೇರಿದಬಹುದು ಅನ್ನೋ ಲೆಕ್ಕಾಚಾರ ಇರಬಹುದು. 

Latest Videos
Follow Us:
Download App:
  • android
  • ios