ಮನೆಯಲ್ಲಿಯೇ ಮಿಲನಾ ನಾಗರಾಜ್ ಅದ್ಧೂರಿ ಸೀಮಂತ; ನೇರಳೆ ಸೀರೆಯಲ್ಲಿ ಮಿಂಚಿದ ನಿಧಿಮಾ!
ಡಾಲಿಂಗ್ ಕುಟುಂಬದಲ್ಲಿ ಸಂಭ್ರಮವೋ ಸಂಭ್ರಮ....ಅದ್ಧೂರಿಯಾಗಿ ನಡೆಯಿತ್ತು ಸೀಮಂತ.....

ಸ್ಯಾಂಡಲ್‌ವುಡ್ ಸೆಲೆಬ್ರಿಟಿ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬರ ಮಾಡಿಕೊಳ್ಳಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಆಗಸ್ಟ್ 9ರಂದು ಡಾಲಿಂಗ್ ಕೃಷ್ಣ ತಮ್ಮ ನಿವಾಸದಲ್ಲಿ ಪತ್ನಿಗಾಗಿ ಇಡೀ ಮನೆಯನ್ನು ಅದ್ಧೂರಿಯಾಗಿ ಅಲಂಕಾರ ಮಾಡಿಸಿ, ಸೀಮಂತ ಮಾಡಿದ್ದಾರೆ.
ನೀರಳೆ ಬಣ್ಣದ ರೇಶ್ಮೆ ಸೀರೆಯನ್ನು ಮಿಲನಾ ನಾಗರಾಜ್ ಧರಿಸಿದ್ದಾರೆ, ರೇಶ್ಮೆ ಪಂಚೆ ಶರ್ಟ್‌ನಲ್ಲಿ ಡಾರ್ಲಿಂಗ್ ಕೃಷ್ಣ ಮಿಂಚಿದ್ದಾರೆ. ಇವರ ಕ್ಯೂಟ್ ಶ್ವಾನ ಕೂಡ ಫೋಟೋಶೂಟ್ ಮಾಡಿಸಿದೆ.
ಒಂದೆರಡು ಒಡವೆಗಳು, ಸಿಂಪಲ್ ಹೇರ್‌ಸ್ಟೈಲ್ ಹಾಗೂ ಸೀರೆಯಲ್ಲಿ ಡಿಸೈನ್ ಮಾಡಿರುವ ಡಾಬು....ಮಿಲನಾ ನಾಗರರಾಜ್ ಸಿಂಪಲ್ ಲುಕ್‌ನ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ನಮಗೆ ಜ್ಯೂನಿಯರ್ ಕೃಷ್ಣ ಬಂದರೂ ಓಕೆ, ಜ್ಯೂನಿಯರ್ ಮಿಲನಾ ಬಂದರೂ ಓಕೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಮಗುವನ್ನು ಗೆಸ್ ಮಾಡುತ್ತಿದ್ದಾರೆ.
ಕೇವಲ ಮೂರು ತಿಂಗಳು ಮಾತ್ರ ಬಾಣಂತನ ಮಾಡಿಸಿಕೊಳ್ಳುವುದು ಆಮೇಲೆ ಮತ್ತೆ ಸಿನಿಮಾ ಸೆಟ್‌ಗೆ ಬರಬೇಕು ಏಕೆಂದರೆ ಲವ್ ಮಾಕ್ಟೇಲ್ 3 ಶುರುವಾಗಲಿ ಎಂದು ಮಿಲನಾ ಈ ಹಿಂದೆ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.