MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ನಟರ ಬಂಡವಾಳ ಬಯಲು ಮಾಡ್ತೇನೆಂದು Kishore​ ಹೀಗೆಲ್ಲಾ ಹೇಳೋದಾ?: ಫ್ಯಾನ್ಸ್​ ಶಾಕ್​, ಸಿನಿ ಇಂಡಸ್ಟ್ರಿ ಶೇಕ್​

ನಟರ ಬಂಡವಾಳ ಬಯಲು ಮಾಡ್ತೇನೆಂದು Kishore​ ಹೀಗೆಲ್ಲಾ ಹೇಳೋದಾ?: ಫ್ಯಾನ್ಸ್​ ಶಾಕ್​, ಸಿನಿ ಇಂಡಸ್ಟ್ರಿ ಶೇಕ್​

ನಟ ಕಿಶೋರ್ ಅವರು ಸಿನಿಮಾ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, ನಟರು ತಮ್ಮ ಅಭಿಮಾನಿಗಳನ್ನು ಉದ್ದೇಶಪೂರ್ವಕವಾಗಿ ಮೂರ್ಖರನ್ನಾಗಿಸುತ್ತಾರೆ ಎಂದಿದ್ದಾರೆ. ಅಭಿಮಾನಿಗಳನ್ನು ಹಾಲಿನ ಅಭಿಷೇಕ ಮಾಡಿಸಿಕೊಳ್ಳಲು ಸೀಮಿತಗೊಳಿಸುತ್ತಾರೆ ಎಂದು ಕಿಶೋರ್ ಆರೋಪಿಸಿದ್ದಾರೆ. 

2 Min read
Author : Suchethana D
Published : Mar 05 2026, 12:08 PM IST
Share this Photo Gallery
  • FB
  • TW
  • Linkdin
  • Whatsapp
16
ಸಿನಿಮಾ ನಟರ ಬಗ್ಗೆ ಕಿಶೋರ್​
Image Credit : Social Media

ಸಿನಿಮಾ ನಟರ ಬಗ್ಗೆ ಕಿಶೋರ್​

ಕನ್ನಡ, ತಮಿಳು ತೆಲುಗು, ಮಲಯಾಳ ಭಾಷೆಗಳ ಸಿನಿಮಾಗಳಲ್ಲಿ ಹೆಚ್ಚಾಗಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟ ಕಿಶೋರ್​, ಸದಾ ಸುದ್ದಿಯಲ್ಲಿ ಇರುವ ನಟ. ಸೋಷಿಯಲ್​ ಮೀಡಿಯಾದಿಂದ ಹಿಡಿದು ಭಾಷಣಗಳಲ್ಲಿ ಅವರು ಆಡುವ ಮಾತುಗಳು ಕಾಂಟ್ರವರ್ಸಿಯಾಗುವುದೇ ಹೆಚ್ಚು. ರಾಜಕೀಯದಿಂದ ಹಿಡಿದು ಸಿನಿಮಾ ರಂಗದವರೆಗೂ ಅವರು, ತಮ್ಮದೇ ಆದ ಅಭಿಪ್ರಾಯವನ್ನು ಹಂಚಿಕೊಂಡು ಪ್ರಚಾರದಲ್ಲಿ ಇರುವುದನ್ನೇ ಬಯಸುವವರು. ಅದರಲ್ಲಿಯೂ ಬಿಜೆಪಿ, ಆರ್​ಎಸ್​ಎಸ್​, ಪ್ರಧಾನಿ ಮೋದಿ ಅವರ ಬಗ್ಗೆಯಂತೂ ನೆಗೆಟಿವ್​ ಮಾತನಾಡಿರುವ ಮೂಲಕ ಚಾಲ್ತಿಯಲ್ಲಿ ಇರುವ ನಟ ಕಿಶೋರ್​.

26
ಸಿನಿ ಇಂಡಸ್ಟ್ರಿಯಲ್ಲಿ ಹಲ್​ಚಲ್​
Image Credit : Social Media

ಸಿನಿ ಇಂಡಸ್ಟ್ರಿಯಲ್ಲಿ ಹಲ್​ಚಲ್​

ಆದರೆ, ಇದೀಗ ಸಿನಿಮಾ ​ ನಟರ ಬಗ್ಗೆ ಅವರು ಆಡಿರುವ ಮಾತುಗಳು ಸಿನಿ ಇಂಡಸ್ಟ್ರಿಯಲ್ಲಿ ಹಲ್​ಚಲ್​ ಸೃಷ್ಟಿಸುತ್ತಿದೆ. ಅದೂ ಅವರು ಸಿನಿಮಾ ನಟರು ಹೇಗೆ ಅಭಿಮಾನಿಗಳನ್ನು ಮೂರ್ಖರನ್ನಾಗಿ ಮಾಡುತ್ತಾರೆ ಎಂದು ಹೇಳಿದ್ದಾರೆ. theuniquedeva ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಿಕೊಳ್ಳಲಾಗಿದೆ. ಸತ್ಯವಾದ ಮಾತು ಸರ್​ ಎಂದು ಶೀರ್ಷಿಕೆ ಕೊಟ್ಟು ಇದನ್ನು ಶೇರ್​ ಮಾಡಲಾಗಿದೆ.

Related Articles

Related image1
ಸಿಎಂ ಬಂದ್ರೂ ಡಿಲೀಟ್​ ಮಾಡಲ್ಲ, ಅವ್ರಾ- ನಾನಾ ನೋಡ್ತೇನೆ, ನಾನು ಮೀಟರ್​ ಇರೋನು ಎಂದ Dog Satish
Related image2
ಕಿಚ್ಚ ಅಂದ್ರೆ ಏನು? ತಲೆ ಕೆಡಿಸಿಕೊಂಡ ಸುದೀಪ್! ಕಾಲೇಜಲ್ಲೂ ಹುಚ್ಚು ಹಿಡಿಸಿದ ಶಬ್ದಕ್ಕೆ ಕೊನೆಗೂ ಸಿಕ್ತು ಉತ್ತರ
36
ಬಂಡವಾಳ ಬಯಲು ಮಾಡ್ತಾರೆ
Image Credit : Instagram

ಬಂಡವಾಳ ಬಯಲು ಮಾಡ್ತಾರೆ

ಸಿನಿಮಾಗಳು ಯಾಕೆ ಯಾರನ್ನೂ ಎಜುಕೇಟ್​ ಮಾಡಲ್ಲ ಎಂದು ಹಲವರು ಕೇಳ್ತಾರೆ. ಆದರೆ ನಟರು ಅಭಿಮಾನಿಗಳನ್ನು ಎಜುಕೇಟ್​ ಮಾಡಿಬಿಟ್ಟರೆ, ಅಭಿಮಾನಿಗಳು ತಿರ್ಗಾ ಅವರನ್ನೇ ಪ್ರಶ್ನಿಸ್ತಾರೆ. ಉದಾಹರಣೆಗೆ, ಸಿನಿಮಾಗಳಲ್ಲಿ ಕನ್ನಡ ಕನ್ನಡ ಅಂತಾರೆ. ಅದನ್ನು ನೋಡಿದ ಅಭಿಮಾನಿಗಳು ನೀನೇನು ನಿಜ ಜೀವನದಲ್ಲಿ ಕನ್ನಡಕ್ಕಾಗಿ ಹೋರಾಡ್ತಿಯಾ, ಸುಮ್ನೆ ಸಿನಿಮಾದಲ್ಲಿ ರೀಲ್​ ಬಿಡಲ್ಲ ಅಂತ ಪ್ರಶ್ನೆ ಮಾಡಲ್ವಾ, ಅದಕ್ಕಾಗಿ ಈ ನಟರು ಯಾವತ್ತಿಗೂ ಅಭಿಮಾನಿಗಳನ್ನು ಎಜುಕೇಟ್​ ಮಾಡಲು ಹೋಗೋದೇ ಇಲ್ಲ ಎಂದಿದ್ದಾರೆ.

46
ಹಾಲಿನ ಅಭಿಷೇಕ ಆಗ್ಬೇಕು ಅಷ್ಟೇ...
Image Credit : Instagram

ಹಾಲಿನ ಅಭಿಷೇಕ ಆಗ್ಬೇಕು ಅಷ್ಟೇ...

ಈ ನಟರಿಗೆ ಏನು ಬೇಕು ಎಂದರೆ, ಫ್ಯಾನ್ಸ್ ಫಾಲೋವರ್ಸ್​ ಹೆಚ್ಚಾಗಬೇಕು. ಹಾಲಿನ ಅಭಿಷೇಕ ಮಾಡ್ತಾ ಇರಬೇಕು. ನೀನೇ ನನ್ನ ದೇವರು ಅಂತಾ ಇರಬೇಕು. ಇದೇ ನಟರ ಬಂಡವಾಳ ಎಂದಿದ್ದಾರೆ ನಟ ಕಿಶೋರ್​. ಜನರನ್ನು ಮೂರ್ಖರನ್ನಾಗಿ ಮಾಡುವುದು ಇವರ ಕೆಲಸ ಅಷ್ಟೇ. ಅಭಿಮಾನಿಗಳ ಬಾಯಿ ಮುಚ್ಚಿಸಿಕೊಂಡು ಹಾಲಿನ ಅಭಿಷೇಕ ಮಾಡಿಸಿಕೊಳ್ತಾ ಇರ್ತಾರೆ. ಅಭಿಮಾನಿಗಳನ್ನು ಹೆಚ್ಚು ಎಜುಕೇಟ್​ ಮಾಡಿದ್ರೆ ನೀವೇನು ಮಹಾ ಎಂದು ಫ್ಯಾನ್ಸ್​ ಕೇಳಿದ್ರೆ ಅದಕ್ಕೆ ಇವರ ಬಳಿ ಉತ್ತರ ಇರಲ್ವಲ್ಲಾ ಎಂದು ಟಾಂಗ್​ ಕೊಟ್ಟಿದ್ದಾರೆ ಇವರು.

56
ನನ್ನ ದುಡ್ಡಲ್ಲೇ ನೀನು...
Image Credit : Social Media

ನನ್ನ ದುಡ್ಡಲ್ಲೇ ನೀನು...

ಒಂದು ವೇಳೆ ಫ್ಯಾನ್ಸ್​ಗೆ ಮಾತನಾಡಲು ಬಿಟ್ಟರೆ, ಬಾಯಿ ಮುಚ್ಚಿಕೊಂಡಿರು, ನನ್ನ ದುಡ್ಡಲ್ಲೇ ನೀನು ಕೆಲ್ಸ ಮಾಡೋದು ಅನ್ನೋ ಮಟ್ಟಿಗೆ ಹೋಗಿ ಬಿಡ್ತಾರೆ. ಅದಕ್ಕಾಗಿಯೇ ನಟರು ಅವರಿಗೆ ಹೆಚ್ಚು ಶಿಕ್ಷಣ ಕೊಡುವಂತ ಏನನ್ನೂ ಸಿನಿಮಾಗಳಲ್ಲಿ ತೋರಿಸುವುದಿಲ್ಲ ಎಂದು ಕಾಂಟ್ರವರ್ಸಿಯ ಮಾತನಾಡಿದ್ದಾರೆ.

66
ಶಾಕ್​ ತಂದ ಹೇಳಿಕೆ
Image Credit : Social Media

ಶಾಕ್​ ತಂದ ಹೇಳಿಕೆ

ಇದನ್ನು ಕೇಳಿ ಹಲವರು ವಿಭಿನ್ನ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಏಕೆಂದರೆ ಎಷ್ಟೋ ಜನರಿಗೆ ಸಿನಿಮಾ ನಟರು ಎಂದರೆ ದೇವರಿಗೆ ಸಮಾನ. ಅವರು ತೋರಿಸುವುದನ್ನು ಕಣ್ಮುಚ್ಚಿ ಮಾಡುತ್ತಾರೆ. ಅವರಂತೆ ತಾವು ಕಾಣಬೇಕು ಎಂದು ಅವರ ಸ್ಟೈಲ್​, ಮಾತು ಎಲ್ಲವನ್ನೂ ಅನುಸರಿಸುವ ದೊಡ್ಡ ವರ್ಗವೇ ಇದೆ. ಎಷ್ಟೋ ಬಾರಿ ಈ ನಟರಿಗಾಗಿ ತಮ್ಮ ಜೀವವನ್ನೇ ಕೊಟ್ಟವರೂ ಇದ್ದಾರೆ. ನಟರ ಒಂದು ಝಲಕ್​ ನೋಡಲು ಪ್ರಾಣವನ್ನೇ ಒತ್ತೆ ಇಡುವವರೂ ಇದ್ದಾರೆ. ಇವರೆಲ್ಲರಿಗೂ ಈ ಸ್ಟೇಟ್​ಮೆಂಟ್​ ಶಾಕ್​ ತಂದಿದೆ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ಟಿವಿ ಶೋ
ಸಾಮಾಜಿಕ ಮಾಧ್ಯಮ

Latest Videos
Recommended Stories
Recommended image1
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್: ಕೊನೆಗೂ ಕಂಡುಬಂತು 'ಕೊಡವ' ಸೊಗಡು!
Recommended image2
ಸೂಪರ್ ಹಿಟ್ 'ಜನುಮದ ಜೋಡಿ' ಸಿನಿಮಾದಲ್ಲಿ ಶಿಲ್ಪಾ ಬದಲು ಸೌಂದರ್ಯ ನಟಿಸಬೇಕಿತ್ತು.. ಆದರೆ, ಅದಕ್ಕೆ ಅಡ್ಡಗಾಲಾಗಿದ್ದು ಏನು?
Recommended image3
ಒಂದು ಮದುವೆ ಮುರಿದುಬಿದ್ದರೂ ಮತ್ತೊಂದು ಕೈಹಿಡಿದಿದ್ದು ಹೇಗೆ? ಇದು ಯಾರಿಗೂ ಗೊತ್ತಿಲ್ಲದ ರಶ್ಮಿಕಾ ಮಂದಣ್ಣ ಗುಟ್ಟು..!
Related Stories
Recommended image1
ಸಿಎಂ ಬಂದ್ರೂ ಡಿಲೀಟ್​ ಮಾಡಲ್ಲ, ಅವ್ರಾ- ನಾನಾ ನೋಡ್ತೇನೆ, ನಾನು ಮೀಟರ್​ ಇರೋನು ಎಂದ Dog Satish
Recommended image2
ಕಿಚ್ಚ ಅಂದ್ರೆ ಏನು? ತಲೆ ಕೆಡಿಸಿಕೊಂಡ ಸುದೀಪ್! ಕಾಲೇಜಲ್ಲೂ ಹುಚ್ಚು ಹಿಡಿಸಿದ ಶಬ್ದಕ್ಕೆ ಕೊನೆಗೂ ಸಿಕ್ತು ಉತ್ತರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved