ದರ್ಶನ್‌ಗೆ ಗಂಡಾಂತರ ಇರೋದು ಮೊದ್ಲೇ ಗೊತ್ತಿತ್ತು; ದೊಡ್ಡ ಜ್ಯೋತಿಷಿ ಹತ್ರ ವಿಜಯಲಕ್ಷ್ಮಿ ಕೇಳ್ತಾರೆ: ಲತಾ ಜಯಪ್ರಕಾಶ್
ದರ್ಶನ್‌ಗೆ ಗಂಡಾಂತರ ಇರುವುದು ಮೊದಲೇ ಗೊತ್ತಿತ್ತು. ಮೇ ತಿಂಗಳಿನಲ್ಲಿ ನನ್ನ ತಮ್ಮ ಹೇಳಿದ್ದ......ಎಂದು ಬಂಡಿಮಹಾ ಕಾಳಿ ಗುಡಿಯ ಮುಖ್ಯಸ್ಥೆ....
ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ಜೈಲಿನಲ್ಲಿರುವ ದರ್ಶನ್ ಬಗ್ಗೆ ಬಂಡಿಮಹಾಕಾಳಿ ದೇವಸ್ಥಾನದ ಮುಖ್ಯಸ್ಥೆ ಮಾತನಾಡಿದ್ದಾರೆ. ಸುಮಾರು 9 ವರ್ಷಗಳಿಂದ ತಿಂಗಳಿಗೊಮ್ಮೆ ಆದರೂ ದರ್ಶನ್ ಬಂಡಿಮಹಾಕಾಳಿ ದರ್ಶನ ಪಡೆದು ತಡೆ ಹೊಡೆಸಿಕೊಂಡು ಹೋಗುತ್ತಿದ್ದರು. ಅಲ್ಲದೆ ದೇವಿ ಮುಂದೆ ನಿಂತು ವಿಜಯಲಕ್ಷ್ಮಿ ಪ್ರಾರ್ಥನೆ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಈ ಫೋಟೋ ಎರಡು ಮೂರು ತಿಂಗಳ ಹಳೆ ಫೋಟೋ ಎಂದು ಲತಾ ಜೈಪ್ರಕಾಶ್ ಸ್ಪಷ್ಟನೆ ಕೊಟ್ಟಿದ್ದರು.
'ದರ್ಶನ್ ಕುಟುಂಬದವರು ದೈವ ಭಕ್ತರಾಗಿದ್ದು ಈ ರೀತಿ ಘಟನೆ ಎದುರಿಸುತ್ತಿದ್ದಾರೆ ಅಂದ್ರೆ ಆಶ್ಚರ್ಯವಾಗುತ್ತದೆ. ಹೆಣ್ಣು ಮಕ್ಕಳನ್ನು ಗೌರವಿಸುವ ರೀತಿ, ಮಾತನಾಡಿಸುವ ರೀತಿ ದರ್ಶನ್ ಮುಗ್ಧ ಮನಸ್ಸಿಗೆ ಮಾತ್ರ ಇರುವುದು. ಜೈಲಿನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊರ ಬರುವಾಗ ಉತ್ತಮ ಸ್ಟಾರ್ ಆಗಿ ಹೊರ ಬರಲು ಅವರ ಪತ್ನಿ ವಿಜಯಲಕ್ಷ್ಮಿನೇ ಕಾರಣ. ಬಂಡಿಮಹಾಕಾಳಿ ದೇವಸ್ಥಾನಕ್ಕೆ ಬಂದು ಭವಿಷ್ಯ ಕೇಳಿರಲಿಲ್ಲ...ನನ್ನ ತಂದೆ ಮತ್ತು ಮಗನದ್ದು ಮಕರ ರಾಶಿ ಶ್ರವಣ ನಕ್ಷತ್ರ ಇದೆ ದರ್ಶನ್ ಅವರದ್ದು ಅದೇ ಆಗಿರುವ ಕಾರಣ ನಾನು ಆಗಾಗ ನೋಡುತ್ತಿದ್ದರೆ. ಅವರಿಗೆ ಸಮಸ್ಯೆ ಇರುವು ಗೊತ್ತಿತ್ತು... ಅವರು ಯಾವತ್ತಿದ್ದರೂ ಕಾಳಿ ಅಮ್ಮ ಆರಾಧನೆ ಮಾಡಬೇಕು ಮೊದಲಿನಿಂದಲೂ ಚಾಮುಂಡೇಶ್ವರಿ ಆರಾಧನೆ ಮಾಡಿಕೊಂಡು ಬಂದಿದ್ದಾರೆ ಸುಮಾರು 2015-16ರಿಂದ ಬಂಡಿಮಹಾಕಾಳಿ ಪೂಜೆ ಮಾಡಲು ಶುರು ಮಾಡಿದರು' ಎಂದು ಲತಾ ಜೈಪ್ರಕಾಶ್ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಈ ಕಾರಣಕ್ಕೆ 20 ವರ್ಷಗಳಿಂದ ವಾಸಿಸುತ್ತಿದ್ದ ಸ್ವಂತ ಮನೆಯಿಂದ ಹೊರ ಬಂದ ಸುಂದರ್ ರಾಜ್ ಕುಟುಂಬ!
'ನನ್ನ ತಮ್ಮ ಮತ್ತು ದರ್ಶನ್ ತುಂಬಾ ಕ್ಲೋಸ್ ಇದ್ದಾರೆ ಆಗ ಕೂಡ ಹೇಳಿದ್ದರು, ವಿಜಯಲಕ್ಷ್ಮಿ ಅವರನ್ನು ಒಮ್ಮೆ ಭೇಟಿ ಮಾಡಿದಾಗ ನಾನು ಇದನ್ನು ವಿವರಿಸಿದ್ದೆ. ಆ ಸಮಯದಿಂದ ಪ್ರತಿಯೊಂದು ಪೂಜೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಮೇ ತಿಂಗಳಿನಲ್ಲಿ ಹೇಳಿದ್ದು ನವೆಂಬರ್ ತಿಂಗಳಿನವರೂ ಸರಿ ಇಲ್ಲ ಅಂತ ಆದರೂ ಹೇಗೆ ಇದರ ಬಗ್ಗೆ ಯೋಚನೆ ಮಾಡದೇ ಮಾಡಿದ್ದಾರೆ ಅನ್ನೋದು ಅರ್ಥವಾಗುತ್ತಿಲ್ಲ. ದೊಡ್ಡ ಜ್ಯೋತಿಷಿ ಹತ್ರ ವಿಜಯಲಕ್ಷ್ಮಿ ಸಂಪರ್ಕದಲ್ಲಿ ಇದ್ದಾರೆ ಹೀಗಾಗಿ ಶನಿ ಮಹಾತ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ' ಎಂದು ಲತಾ ಜೈಪ್ರಕಾಶ್ ಹೇಳಿದ್ದಾರೆ.
ನಿಜ ಹೇಳಿ ಇದು ಜಾತ್ರೆ ಕನ್ನಡಕ ಅಲ್ವಾ?; 'ಕಾವೇರಿ ಕನ್ನಡ ಮೀಡಿಯಂ' ಪ್ರಿಯಾ ಆಚಾರ್ ಕಾಲೆಳೆದ ನೆಟ್ಟಿಗರು!
'ಕಲಾಸಿಪಾಳ್ಯ ಸಮಯ ಚಿತ್ರೀಕರಣದಲ್ಲಿ ದರ್ಶನ್ ಒಮ್ಮೆ ಬಂದಿದ್ದರು, ಅಂಬರೀಶ ಸಿನಿಮಾ ಸಮಯದಲ್ಲಿ ಬಂದ್ರು......ಅದಾದ ಮೇಲೆ ಕ್ಲೋಸ್ ಆದರು. ಏನಾದರೂ ನೆಗೆಟಿವ್ ಫೀಲ್ ಆದರೆ ತಡೆ ಹೊಡಯಲು ಬೆಂಗಳೂರಿನ ಮನೆ ಅಥವಾ ಮೈಸೂರಿಗೆ ಕರೆಸಿಕೊಳ್ಳುತ್ತಾರೆ' ಎಂದಿದ್ದಾರೆ ಲತಾ ಜೈಪ್ರಕಾಶ್.