ಮುಂಗಾರು ಮಳೆ 2 ಸಿನಿಮಾ ಮಾಡಿ ದೊಡ್ಡ ತಪ್ಪು ಮಾಡ್ಬಿಟ್ಟೆ: ಶಶಾಂಕ್ ಬೇಸರ
ಗೋಲ್ಡನ್ ಸ್ಟಾರ್ ಸಿನಿಮಾ ಸೋಲಲು ಕಾರಣವೇನು? ಭಾಗ 1 ಮತ್ತು ಭಾಗ 2ಕ್ಕೆ ಯಾಕೆ ಸಂಬಂಧ ಇಲ್ಲ?

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಶಶಾಂಕ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಮುಂಗಾರು ಮಳೆ 2 ಸಿನಿಮಾ ನಿರೀಕ್ಷೆ ಹಂತ ಮುಟ್ಟಲಿಲ್ಲ. ಮುಂಗಾರು ಮಳೆ ರೀತಿನೇ ಸಿನಿಮಾ ಇದೆ ಅಂದ್ಕೊಂಡ ಜನರೇ ಹೆಚ್ಚು ಆದರೆ ಸಿನಿಮಾ ಬಿಗ್ ಫ್ಲಾಪ್ ಆಗಿತ್ತು. ಈ ವಿಚಾರದ ಬಗ್ಗೆ ನಿರ್ದೇಶಕ ಶಶಾಂಕ್ ಸ್ಪಷ್ಟನೆ ಕೊಟ್ಟಿದ್ದಾರೆ.
'ಮುಂಗಾರು ಮಳೆ 2 ಸಿನಿಮಾ ಮಾಡಿದ ದೊಡ್ಡ ತಪ್ಪು ಮಾಡಿಬಿಟ್ಟೆ. ಮಾಡಬಾರದಂತ ಸಿನಿಮಾಗೆ ಕೈ ಹಾಕಿದ್ದೆ. ಯಾಕೆ ಹೀಗೆ ಮಾಡಿದೆ ಅಂದ್ರೆ ಪ್ರೀತಿಗೋಸ್ಕರ ಮಾಡಿದ ಸಿನಿಮಾ ಮುಂಗಾರು ಮಳೆ 2. ನಿಜ ಹೇಳಬೇಕು ಅಂದ್ರೆ ನನಗೆ ಇಷ್ಟ ಇರಲಿಲ್ಲ. ಗಂಗಾಧರ್ ನನಗೆ ತುಂಬಾ ಆತ್ಮೀಯರು ಮೊಗ್ಗಿನ ಮನಸ್ಸು ಚಿತ್ರಕ್ಕೆ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿದ್ದರು. ಆರಂಭದಲ್ಲೂ ಕೇಳಿದಾಗ ಬೇಡ ಅಂತ ಹೇಳಿದೆ ಒತ್ತಾಯ ಮಾಡಿದಕ್ಕೆ ಒಪ್ಪಿಕೊಂಡೆ. ಗಣೇಶ್ ಅವರನ್ನು ಸಂಪರ್ಕ ಮಾಡಿದಾಗ ಅವರು ಕೂಡ ಸರ್ ಮಾಡೋಣ ಅಂದ್ರು. ಯೋಗರಾಜ್ ಭಟ್ ಅವರು ಎರಡನೇ ಭಾಗ ಮಾಡುವುದಿಲ್ಲ ಎಂದು ಹೇಳಿಬಿಟ್ಟಿದ್ದರಂತೆ. ಡೇಟ್ ಸಿಕ್ಕಿತ್ತು ಕಥೆ ಚೆನ್ನಾಗಿತ್ತು ಅಂದಕ್ಕೆ ಮಾಡಲು ಮುಂದಾದೆ' ಎಂದು ಶಶಾಂಕ್ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಭೇಟಿ ಮಾಡಲು ಬಂಪರ್ ಅವಕಾಶ; ಬಹಿರಂಗವಾಗಿ ಮನೆ ವಿಳಾಸ ಕೊಟ್ಟ ನಟಿ!
'ಸಿನಿಮಾ ನಡುವಲ್ಲಿ ಗೊಂದಲ ಆಗಿ ಏನ್ ಏನೋ ಬದಲಾಗಿಬಿಟ್ಟಿತ್ತು. ಒಂದು ಕಥೆ ಮೊದಲು ರೆಡಿಯಾಗಿತ್ತು ಅದು ಮುಂಗಾರು ಮಳೆ 2 ಆಗಬೇಕು ಅಂತಿರಲಿಲ್ಲ ಆದರೆ ಏನ್ ಏನೋ ಆಯ್ತು. ಸಿನಿಮಾ ಸ್ಟೋರಿ ಸದ್ಭುತವಾಗಿ ಈಗಲೂ ಅದನ್ನು ಬೇರೆ ಟೈಟಲ್‌ನಲ್ಲಿ ಸಿನಿಮಾ ಮಾಡಿದರೆ ಸೂಪರ್ ಹಿಟ್ ಆಗುತ್ತಿತ್ತು ಆದರೆ ಕಥೆಗೂ ಮುಂಗಾರು ಮಳೆ ಟೈಟಲ್‌ಗೂ ಏನ್ ಸಂಬಂಧ? ಟೈಟಲ್ ಬೇರೆ ಇಡೋಣ ಅಂದ್ರೆ ಯಾರೂ ಕೇಳಲಿಲ್ಲ. ಮುಂಗಾರು ಮಳೆ 2 ಭಾಗದಲ್ಲಿ ಮಳೆನೇ ಇಲ್ಲ. ಮಳೆನೇ ಬೇಡ. ಪ್ರೀತಿಯ ಒತ್ತಾಯದಿಂದ ಮುಂಗಾರು ಮಳೆ 2 ಸಿನಿಮಾ ಮಾಡಿದೆ. ಈ ಕಥೆನಾ ಇಟ್ಕೊಂಡು ಉಜ್ಜಿ ಉಜ್ಜಿ ಏನೋ ಆಯ್ತು. ಮೊದಲ ಭಾಗಕ್ಕೆ ಲಿಂಕ್ ಮಾಡಲು ಹೋಗಿ ಏನ್ ಏನೋ ಬದಲಾವಣೆಗಳು ಆಯ್ತು' ಎಂದು ಶಶಾಂಕ್ ಹೇಳಿದ್ದಾರೆ.
ಅಪಾರ್ಟ್ಮೆಂಟ್ ಇದೆ ಕೋಟಿ ದುಡ್ಡಿದೆ ಅಂತ ಗುರುತಿಸಿಕೊಂಡಿಲ್ಲ; ವರ್ತೂರು ಸಂತೋಷ್ ಆದಾಯ ಎಷ್ಟು?
'ಭಾಗ 2 ಅಂದ್ರೆ ಜನರಿಗೆ ಇರುವ ನಿರೀಕ್ಷೆನೇ ಬೇರೆ ಆಗಿತ್ತು. ಜನರು ಯೋಚನೆ ಮಾಡುವ ರೀತಿ ತಪ್ಪಲ್ಲ ಅವರ ದೃಷ್ಟಿ ಸರಿಯಾಗಿರುತ್ತದೆ. ಆದರೆ ನಾವು ತೆಗೆದುಕೊಳ್ಳುವ ನಿರ್ಧಾರಗಳು ಫ್ಲಾಪ್ ಮಾಡಿಸಿತ್ತು. ಮುಂಗಾರು ಮಳೆ 2 ಆದ್ಮೇಲೆ ತಾಯಿಗೆ ತಕ್ಕ ಮಗ ಸಿನಿಮಾ ಮಾಡಿದ್ದು. ನಿರ್ಮಾಣ ಸಂಸ್ಥೆ ತೆರೆಯಬೇಕು ಅನ್ನೋ ದೃಷ್ಟಿಯಲ್ಲಿ ಕಥೆ ಮಾಡಿದ್ದು ಅಲ್ಲೂ ಸಮಸ್ಯೆ ಆಗಿ ನಾನೇ ಮುಂದುವರೆಸಿದೆ ಅದು ಕೂಡ ಸರಿ ಆಗಲಿಲ್ಲ. ಅನಿವಾರ್ಯದಿಂದ ಸಿನಿಮಾ ಮಾಡಿದೆ ಆದರೆ ಶಶಾಂಕ್ ಸಿನಿಮಾ ಅಂದ್ರೆ ಜನರಿಗೆ ನಿರೀಕ್ಷೆ ಇರುತ್ತದೆ. ತಾಯಿಗೆ ತಕ್ಕ ಮಗ ಸಿನಿಮಾ ಸೋತಿದೆ' ಎಂದಿದ್ದಾರೆ ಶಶಾಂಕ್.