ರಾಧಿಕಾ ಕುಮಾರಸ್ವಾಮಿ ಭೇಟಿ ಮಾಡಲು ಬಂಪರ್ ಅವಕಾಶ; ಬಹಿರಂಗವಾಗಿ ಮನೆ ವಿಳಾಸ ಕೊಟ್ಟ ನಟಿ!
ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಧಿಕಾ ಕುಮಾರಸ್ವಾಮಿ. ಮನೆ ಮುಂದೆ ಪಕ್ಕಾ ಇರ್ತೀವಿ ಎಂದ ಅಭಿಮಾನಿಗಳು...
ಕನ್ನಡ ಚಿತ್ರರಂಗದ ಅದ್ಭುತ ನಟಿ ರಾಧಿಕಾ ಕುಮಾರಸ್ವಾಮಿ ಈ ವರ್ಷ ಹುಟ್ಟುಹಬ್ಬವನ್ನು ಮತ್ತಷ್ಟು ಸ್ಪೆಷಲ್ ಮಾಡಲು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿದ್ದಾರೆ.
'ಎಲ್ಲರಿಗೂ ನಮಸ್ಕಾರ. ಎಷ್ಟೋ ವರ್ಷಗಳಿಂದ ನನ್ನ ಅಭಿಮಾನಿಗಳನ್ನು ಭೇಟಿ ಮಾಡಲು ಅಗುತ್ತಿರಲಿಲ್ಲ. ಅದಿಕ್ಕೆ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ನಿಮ್ಮ ಜೊತೆ ನನ್ನ ಮನೆಯಲ್ಲಿ ಆಚರಿಸಿಕೊಳ್ಳಬೇಕು ಅಂತ ನಿರ್ಧಾರ ಮಾಡಿದ್ದೀನಿ'
ಇದೇ ನವೆಂಬರ್ 11ರಂದು ಶನಿವಾರ ಸಂಜೆ 6.30ರಿಂದ 9 ಗಂಟೆವರೆಗೂ ನಾನು ನನ್ನ ಹುಟ್ಟುಹಬ್ಬವನ್ನು ನಿಮ್ಮ ಜೊತೆ ಆಚರಿಸಿಕೊಳ್ಳುತ್ತಿರುವೆ. ತಪ್ಪದೆ ಶನಿವಾರ ಸಿಗೋಣ. ಲವ್ ಯು. ಬೈ..ನಮಸ್ಕಾರ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.
ಮನೆ ವಿಳಾಸ: 10/11 2ನೇ ಮೇನ್ 2ನೇ ಮುಖ್ಯ ರಸ್ತೆ ಆರ್‌ಎಮ್‌ವಿ 2ನೇ ಹಂತ 3ನೇ ಬ್ಲಾಕ್ BEL ರಸ್ತೆ ಡಾಲರ್ಸ್ ಕಾಲೋನಿ ಬೆಂಗಳೂರು 560094
ಮೊದಲ ಸಲ ನಮ್ಮ ನೆಚ್ಚಿನ ನಟಿಯನ್ನು ಭೇಟಿ ಮಾಡಲು ಅವಕಾಶ ಸಿಗುತ್ತಿರುವುದು ಮಿಸ್ ಮಾಡಿಕೊಳ್ಳುವುದಿಲ್ಲ ಕೇಕ್ ಹಾರ ಹಿಡಿದು ಮನೆ ಮುಂದೆ ಇರ್ತೀವಿ ಅಂತಾರೆ ಫ್ಯಾನ್ಸ್.
ರಾಧಿಕಾ ಕುಮಾರಸ್ವಾಮಿ ನಟಿಸಿರುವ ದಮಯಂತಿ, ಒಪ್ಪಂದ ಮತ್ತು ರವಿ ಬೋಪಣ್ಣ ಸಿನಿಮಾ ಅದ್ಭುತ ಪ್ರತಿಕ್ರಿಯೆ ಪಡೆದಿದೆ. ಇನ್ನು ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು ಅನ್ನೋದು ಅಭಿಮಾನಿಗಳ ಆಸೆ