ಕನ್ನಡ ದ ಕ್ರಿಯೆಟಿವ್ ನಿರ್ದೇಶಕ, ಹೊಸ ಹೊಸ ಪ್ರಯೋಗಗಳಿಗೆ ಹೆಸರಾದ ಭರವಸೆಯ ನಿರ್ದೇಶಕ ರಿಷಬ್ ಶೆಟ್ಟಿ ಹೊಸದೊಂದು ಪ್ರಯೋಗಕ್ಕೆ ಕೈ ಹಾಕಿದ್ದಾರೆ. '7 ಕಥೆಗಳನ್ನು ಇಟ್ಟುಕೊಂಡು 'ಕಥಾ ಸಂಗಮ' ಎನ್ನುವ ಸಿನಿಮಾವನ್ನು ಮಾಡುತ್ತಿದ್ದಾರೆ.  ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಅದಕ್ಕೂ ಮುನ್ನ ಪುಟ್ಟಣ್ಣ ಕಣಗಾಲ್ ಕುಟುಂಬದವರು ಹಾಗೂ ಅವರ ಜೊತೆ ಕೆಲಸ ಮಾಡಿದವರಿಗಾಗಿ ವಿಶೇಷ ಪ್ರದರ್ಶನ ಆಯೋಜಿಸಿದ್ದರು. 

ಕಾರು ಬಿಟ್ಟು ಜಾವಾ ಬೈಕ್ ಏರಿದ ಕಿಚ್ಚ ಸುದೀಪ್!

ಈ ಸಂದರ್ಭದಲ್ಲಿ ಪುಟ್ಟಣ್ಣ ಕಣಗಾಲ್ ಕುಟುಂಬ ರಿಷಬ್ ಶೆಟ್ಟಿಗೆ ಪುಟ್ಟಣ್ಣ ಬಳಸುತ್ತಿದ್ದ ಟೈಯನ್ನು ಗಿಫ್ಟ್ ಆಗಿ ಕೊಟ್ಟಿದೆ. 

 

'ಕಥಾ ಸಂಗಮ'  ಪುಟ್ಟಣ್ಣ ಕಣಗಾಲ್ ಅವರ ಹೊಸ ಪ್ರಯೋಗ. 1976 ರಲ್ಲಿ ಬಂದ ಈ ಸಿನಿಮಾ ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ದಾಖಲೆಯನ್ನೇ ಬರೆದಿತ್ತು. ಅಂದು ಪುಟ್ಟಣ್ಗ ಮೂರು ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದರು. ಆ ಸಿನಿಮಾ ಎವರ್ ಗ್ರೀನ್ ಎನಿಸಿಕೊಂಡಿದೆ. 

ರಾಕಿಂಗ್ ಪ್ರಿನ್ಸಸ್ Ayra 'ಕ್ಯಾಂಡಿ' ಥೀಮ್ ಬರ್ತಡೇ ಫೋಟೋಗಳಿವು!

ಇಂದು ರಿಷಬ್ ಶೆಟ್ಟಿ ಅದೇ ರೀತಿ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ.  ಏಳು ವಿಭಿನ್ನ ಕಥೆಗಳನ್ನು ಇಟ್ಟುಕೊಂಡು 'ಕಥಾ ಸಂಗಮ' ಎನ್ನುವ ಸಿನಿಮಾ ಮಾಡಿದ್ದಾರೆ.  ಕಿರಣ್ ರಾಜ್, ಕೆ ಶಶಿಕುಮಾರ್, ಚಂದ್ರಜಿತ್ ಬೆಳ್ಳಿಯಪ್ಪ, ರಾಹುಲ್ ಪಿ ಕೆ, ಜೈ ಶಂಕರ್, ಕರಣ್ ಅನಂತ್, ಜಮದಗ್ನಿ ಮನೋಜ್  ನಿರ್ದೇಶನ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ, ಹರಿಪ್ರಿಯಾ, ಅವಿನಾಶ್, ಪ್ರಕಾಶ್ ಬೆಳವಾಡಿ, ಕಿಶೋರ್, ಪ್ರಮೋದ್ ಶೆಟ್ಟಿ, ಯಜ್ಞಾ ಶೆಟ್ಟಿ ಬಾಲಾಜಿ ಮನೋಹರ್ ಒಂದೊಂದು ಕಥೆಯಲ್ಲಿ ಕಾಣಿಸಿಕೊಂಡಿದ್ದಾರೆ.