ದಬಾಂಗ್ -3 ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ ಕಿಚ್ಚ ಸುದೀಪ್. ಚಿತ್ರತಂಡ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದ್ದು ಈ ಟೈಮಲ್ಲಿ ಸುದೀಪ್ ಜಾವಾ ಬೈಕ್ ಏರಿ ಪೋಸ್ ಕೊಟ್ಟಿದ್ದಾರೆ.
ಬಾಲಿವುಡ್‌ನಲ್ಲಿ ದಬಾಂಗ್ -3 ಮೂಲಕ ಹವಾ ಎಬ್ಬಿಸಲು ಕಿಚ್ಚ ಸುದೀಪ್ ರೆಡಿಯಾಗಿದ್ದಾರೆ. ಬಾಲಿವುಡ್ ಸುಲ್ತಾನ್ ಜೊತೆ ಕರುನಾಡ ಚಕ್ರವರ್ತಿ ಸೇರಿದರೆ ಅದರ ಗಮ್ಮತ್ತೇ ಬೇರೆ. ಸುಲ್ತಾನ್‌ಗೆ ತೊಡೆ ತಟ್ಟುವ ಸುದೀಪ್‌ರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೇ ತಿಂಗಳ 20 ರಂದು ದಬಾಂಗ್-3 ತೆರೆ ಮೇಲೆ ಬರಲಿದ್ದಾರೆ.
ದಬಾಂಗ್- 3 ರಿಲೀಸ್‌ಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಚಿತ್ರತಂಡ ಈಗಾಗಲೇ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದೆ. ಸುದೀಪ್ ಕೂಡ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಟೈಮಲ್ಲಿ ಜಾವಾ ಬೈಕ್ ಏರಿ ಸಂತಸಪಟ್ಟಿದ್ದಾರೆ. ಜಾವಾ ಬೈಕ್ ಮೇಲೆ ಕುಳಿತು ಪೋಸ್ ಕೊಟ್ಟಿದ್ದಾರೆ.
ಕಿಚ್ಚ ಸುದೀಪ್ ಸದ್ಯ ಮುಂಬೈನಲ್ಲಿ ಕೋಟಿಗೊಬ್ಬ 3 ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 4, 2019, 5:12 PM IST