Director Nagashekar Files Complaint: ನಿರ್ದೇಶಕರಿಗೆ 50 ಲಕ್ಷ ವಂಚಿಸಿ ದಂಪತಿ ಪರಾರಿ!
ಮನೆ ಕೊಡುವುದಾಗಿ ಅಗ್ರೀಮೆಂಟ್ ಮಾಡಿಕೊಂಡ ದಂಪತಿ ನಾಪತ್ತೆ, ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಸ್ಟಾರ್ ನಿರ್ದೇಶಕ ನಾಗಶೇಖರ್.
ಕನ್ನಡ ಚಿತ್ರರಂಗಕ್ಕೆ (Sandalwood) ಸೂಪರ್ ಹಿಟ್, 100 ಡೇಸ್ ಸಿನಿಮಾಗಳನ್ನು ನೀಡಿರುವ ಸ್ಟಾರ್ ನಿರ್ದೇಶಕ ನಾಗಶೇಖರ್ (Nagashekar) ಅವರಿಗೆ ರಾಜರಾಜೇಶ್ವರಿ ನಗರ (RajaRajeshwari Nagar) ದಂಪತಿ ಮನೆ ಕೊಡುವುದಾಗಿ ಅಗ್ರೀಮೆಂಟ್ ಮಾಡಿಕೊಂಡು ಮೋಸ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೌದು! ನಿರ್ದೇಶಕ ನಾಗೇಶಖರ್ ಅವರು ಆರ್‌ಆರ್ ನಗರ (RR Nagar) ನಿವಾಸಿಗಳಾದ ಮೀನಾ (Meena) ಮತ್ತು ರಾಜ್ ಕುಮಾರ್ (Raj Kumar) ಎಂಬುವರ ವಿರುದ್ಧ ದೂರು ದಾಖಲಿಸಿದ್ದಾರೆ. ಆರ್‌ಆರ್ ನಗರದ ಜಯಣ್ಣ ಲೇಔಟ್‌ನಲ್ಲಿರುವ (Jayanna Layout) ಮನೆ ಖರೀದಿಸಲು ನಾಗಶೇಖರ್ ಮುಂದಾಗಿದ್ದರು. ಮಾತುಕತೆ ನಡೆದು ಹಂತ ಹಂತವಾಗಿ ಹಣ ವರ್ಗಾವಣೆ (Money Transfer) ಕೂಡ ಮಾಡಿದ್ದಾರೆ. ಈ ಮನೆಯ ಬೆಲೆ 2 ಕೋಟಿ 70 ಲಕ್ಷ ರೂ.ಗೆ ಫೈನಲ್ ಮಾಡಿ ಮಾತುಕತೆ ಮಾಡಿದ್ದರು.
Low Interest Rate Fraud: ಕಡಿಮೆ ಬಡ್ಡಿ ಆಸೆ ತೋರಿಸಿ 6 ಕೋಟಿ ವಂಚನೆ2020ರ ಆಗಸ್ಟ್ (August) ತಿಂಗಳಿನಲ್ಲಿ ಮನೆ ಖರೀದಿಗೆಂದು ಮೀನಾರ ಜೊತೆ ಸೇಲ್ ಅಗ್ರೀಮೆಂಟ್ (Sale Agreement) ಮಾಡಿಕೊಂಡಿದ್ದರು ನಿರ್ದೇಶಕ ನಾಗಶೇಖರ್. ಅಗ್ರೀಮೆಂಟ್ ಆಗುತ್ತಿದ್ದಂತೆ ಹಂತ ಹಂತವಾಗಿ ಮೀನಾರ ಬ್ಯಾಂಕ್ ಖಾತೆಗೆ 50 ಲಕ್ಷ ವರ್ಗಾಯಿಸಿದ್ದಾರೆ. ಸೇಲ್ ಅಗ್ರೀಮೆಂಟ್ ನಂತರವೂ ಮೀನಾ ಮತ್ತು ರಾಜ್‌ಕುಮಾರ್ ಮನೆಯನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ನಾಗಶೇಖರ್ ಅವರು ನೀಡಿರುವ 50 ಲಕ್ಷ ಹಣವನ್ನು ಕೂಡ ಹಿಂತಿರುಗಿಸಿಲ್ಲ ಎಂದು ಆರೋಪ ಮಾಡಿದ್ದಾರೆ.
ಘಟನೆ ಬಗ್ಗೆ ನಿರ್ದೇಶಕರು ಆರ್‌ಆರ್ ನಗರದ ಪೊಲೀಸರು (Police Complaint) ದೂರು ದಾಖಲಿಸಿದ್ದಾರೆ. ಮೀನಾ ಮತ್ತು ರಾಜ್ ಕುಮಾರ್ ವಿರುದ್ಧ ಎಫ್‌ಐಆರ್ (FIR) ಮತ್ತು 420 ಸೆಕ್ಷನ್ ದಾಖಲಾಗುತ್ತಿದ್ದಂತೆ ದಂಪತಿಗಳು ಪರಾರಿ (Escape) ಆಗಿದ್ದಾರೆ. ಅತ್ತ ದುಡ್ಡು ಇಲ್ಲದೆ ಇತ್ತ ಮನೆನೂ ಇಲ್ಲದೆ ನಾಗಶೇಖರ್ ಕಂಗಾಲಾಗಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ (Ganesh) ನಟನೆಯ ಅರಮನೆ (Aramane) ಸಿನಿಮಾ, ಚೇತನ್ (Chetan Kumar) ಮತ್ತು ನಿತ್ಯಾ ಮೆನನ್ (Nithya Menon) ನಟನೆಯ ಮೈನಾ (Myna) ಸಿನಿಮಾ, ಶ್ರೀನಗರ ಕಿಟ್ಟಿ (Sri Nagar Kitty) ಮತ್ತು ಮೋಹಕ ತಾರೆ ರಮ್ಯಾ (Ramya) ನಟನೆಯ ಸಂಜು ವೆಡ್ಸ್ ಗೀತಾ (Sanju weds Geetha) ಸಿನಿಮಾ, ದುನಿಯಾ ವಿಜಯ್ (Duniya Vijay) ನಟನೆಯ ಮಾಸ್ತಿಗುಡಿ (Mastigudi) ಸಿನಿಮಾ, ಅಭಿಷೇಕ್ ಅಂಬರೀಶ್ (Abhishek Ambareesh) ನಟನೆಯ ಅಮರ್ (Amar) ಸಿನಿಮಾ ನಿರ್ದೇಶನ ಮಾಡಿದ್ದಾರೆ ನಾಗಶೇಖರ್.
'ಮಾಸ್ತಿಗುಡಿ' ನಿರ್ದೇಶಕ ನಾಗಶೇಖರ್‌ಗೆ ಇದೆಂಥಾ ಸ್ಥಿತಿ ಬಂತು?ಕನ್ನಡ ಮಾತ್ರವಲ್ಲದೆ ಲವ್ ಮಾಕ್ಟೇಲ್ (Love Mocktail) ಸಿನಿಮಾ ಮೂಲಕ ತಮಿಳು (Tollywood) ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ಇದರ ಜೊತೆ ಮಝೈಯಿಲ್ ನಾನುಮ್ ಅವಲುಮ್ (Mazhaiyil Naanum Avalum) ಚಿತ್ರದ ಮೂಲಕ ತಮಿಳು (Kollywood) ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ತಮ್ಮ ನಿರ್ದೇಶಕದ ಶ್ರೀಕೃಷ್ಣ ಅಟ್ ಜಿಮೇಲ್ ಡಾಟ್ ಕಾಮ್ (SriKrishna@gmail.com) ಸಿನಿಮಾ ಕನ್ನಡ ಮತ್ತು ಮಲಯಾಳಂನಲ್ಲಿ (Mollywood) ಬಿಡುಗಡೆ ಮಾಡಿದ್ದರು. ನಿರೀಕ್ಷೆ ಮಟ್ಟದಲ್ಲಿ ವೀಕ್ಷಣೆ ಪಡೆದಿಲ್ಲವಾದರೂ ಹಾಕಿದ ಬಂಡವಾಳಕ್ಕೆ ಮೋಸವಿಲ್ಲ ಎಂದು ಮಾತುಗಳು ಕೇಳಿ ಬಂದಿತ್ತು.
ಪರಭಾಷೆಗಳಲ್ಲೂ ತಮ್ಮ ಛಾಪು ತೋರಿಸಿರುವ ನಾಗಶೇಖರ್ ಇದೀಗ ಬಾಲಿವುಡ್ (Bollywood) ಚಿತ್ರರಂಗಕ್ಕೂ ಕಾಲಿಡುವುದಾಗಿ ಈ ಹಿಂದೆ ತಿಳಿಸಿದ್ದರು. ಝೈದ್ ಖಾನ್ (Zaid Khan), ರಾಜಕಾರಣಿ (Politician) ಜಮೀರ್ ಅಹ್ಮದ್ ಖಾನ್ (Zameer Ahmed Khan) ಅವರ ಮಗನ ಸಿನಿಮಾವನ್ನು ಕನ್ನಡ ಮತ್ತು ಹಿಂದಿಯಲ್ಲಿ ಬಿಡುಗಡೆ ಮಾಡುವ ಪ್ಲಾನಿಂಗ್ ನಡೆಯುತ್ತಿದೆ.