Low Interest Rate Fraud: ಕಡಿಮೆ ಬಡ್ಡಿ ಆಸೆ ತೋರಿಸಿ 6 ಕೋಟಿ ವಂಚನೆ
* 400 ಕೋಟಿ ಸಾಲ ಕೊಡಿಸುವುದಾಗಿ ಉದ್ಯಮಿಗಳಿವೆ ಧೋಖಾ
* ಐವರು ಆರೋಫಪಿಗಳನ್ನ ಬಂಧಿಸಿ ಪೊಲೀಸರು
* ಸುಳಿವು ಕೊಟ್ಟ ಸಿಸಿಟಿವಿ, ಕರೆ
ಬೆಂಗಳೂರು(ಡಿ.25): ಕಡಿಮೆ ಬಡ್ಡಿಗೆ 400 ಕೋಟಿ ಸಾಲ(Loan) ಕೊಡಿಸುವುದಾಗಿ ನಂಬಿಸಿ ಇಬ್ಬರು ಉದ್ಯಮಿಗಳಿಂದ ಮುಂಗಡವಾಗಿ 5.85 ಕೋಟಿ ಹಣ ಪಡೆದು ಟೋಪಿ ಹಾಕಿದ್ದ ಐವರು ವಂಚಕರನ್ನು ಸದ್ದುಗುಂಟೆಪಾಳ್ಯ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.
ಕೇರಳ ಮೂಲದ ಸೈಯ್ಯದ್ ಇಬ್ರಾಹಿಂ ಅಲಿಯಾಸ್ ಡ್ಯಾನಿಯಲ್ ಆಮ್ಸಸ್ಟ್ರಾಂಗ್, ಕೊಯಮತ್ತೂರಿನ ವಿವೇಕ್ ಅಲಿಯಾಸ್ ವಿಕ್ಕಿ ಅಲಿಯಾಸ್ ವಿವೇಕಾನಂದ, ಕ್ರಿಸ್ಟೋಪರ್ ಅಲಿಯಾಸ್ ರಾಘವನ್, ರಘುವರನ್ ಅಲಿಯಾಸ್ ರಘು, ಶಿವರಾಮನ್ ಅಲಿಯಾಸ್ ನಾಗರಾಜು ಬಂಧಿತರು(Arrest). ಆರೋಪಿಗಳಿಂದ(accused) 4.10 ಕೋಟಿ ಮೌಲ್ಯದ 8.215 ಕೆ.ಜಿ. ಚಿನ್ನಾಭರಣ, 35 ಲಕ್ಷ ಮೌಲ್ಯದ ಬಿಎಂಡಬ್ಲ್ಯೂ ಕಾರು, 10 ಲಕ್ಷ ಬೆಲೆಯ ಎರ್ಟಿಗಾ, .36.6 ಲಕ್ಷ ನಗದು ಹಾಗೂ ಅವರ ಖಾತೆಯಲ್ಲಿ 1.86 ಲಕ್ಷ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
Cybercrime: ಬೇಡಿಕೆಗೆ ಬಗ್ಗದ ಮಹಿಳೆಯನ್ನು ಕಾಲ್ ಗರ್ಲ್ ಮಾಡಿದ ಸ್ಟುಡೆಂಟ್!
ಇತ್ತೀಚಿಗೆ ತಮಿಳುನಾಡು(Tamil Nadu) ಮೂಲದ ಉದ್ಯಮಿಗಳನ್ನು ನಗರಕ್ಕೆ ಕರೆಸಿ ಆರೋಪಿಗಳು ವಂಚಿಸಿದ್ದರು(Fraud). ಈ ಬಗ್ಗೆ ತನಿಖೆ ನಡೆಸಿದ ಮೈಕೋ ಲೇಔಟ್ ಉಪ ವಿಭಾಗದ ಎಸಿಪಿ ಕರಿ ಬಸವೇಗೌಡ ಹಾಗೂ ಇನ್ಸ್‌ಪೆಕ್ಟರ್ ನಟರಾಜ್ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುಜರಿ ವ್ಯಾಪಾರಿಯ ವಂಚನೆ ಜಾಲ:
ಗುಜರಿ ವ್ಯಾಪಾರಿ ಸೈಯದ್, ಕೆಲ ದಿನಗಳ ಹಿಂದೆ ಸದ್ದುಗುಂಟೆಪಾಳ್ಯದ ಕೃಷ್ಣ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ‘ಏಸ್ ವೆಂಚರ್ಸ್ ಕ್ಯಾಪಿಟಲ್’ ಹಾಗೂ ‘ಎಂಓಯು ಗ್ರೂಪ್ ಆಫ್ ಕಂಪನಿಸ್’ ಎಂಬ ವಂಚಕ ಕಂಪನಿಗಳನ್ನು ಆರಂಭಿಸಿದ್ದ. ಕಡಿಮೆ ಬೆಲೆಗೆ ಕೋಟ್ಯಂತರ ರು. ಸಾಲ ಕೊಡಿಸುವುದಾಗಿ ಪ್ರಕಟಿಸಿದ್ದ. 150 ಕೋಟಿ ಸಾಲಕ್ಕೆ ರಿಯಲ್ ಎಸ್ಟೇಟ್ ಉದ್ಯಮಿ ಗಿರೀಶ್ ಹಾಗೂ .250 ಕೋಟಿ ಸಾಲಕ್ಕೆ ಪಿ.ಬಿ ಕಂಪನಿಯ ಮಾಲಿಕ ಅರುಣಾಚಲದ ಪನಿ ತರಾಮ್ ಸಂಪರ್ಕಿಸಿದ್ದರು. ತಮ್ಮ ಗಾಳಕ್ಕೆ ಸಿಲುಕಿದ ಉದ್ಯಮಿಗಳಿಗೆ ನಾಜೂಕಿನ ಮಾತಿನಿಂದ ಮೋಡಿ ಮಾಡಿದ ಅವರು, ಸಾಲ ಮಂಜೂರಾತಿಗೂ ಮುನ್ನ ಮುಂಗಡವಾಗಿ 3 ತಿಂಗಳ ಬಡ್ಡಿ(Interest) ಪಾವತಿಸಬೇಕಿದೆ ಎಂದಿದ್ದರು.
ಈ ಮಾತು ನಂಬಿದ ಗಿರೀಶ್ ನ.15ರಂದು 2.25 ಕೋಟಿ ಪಾವತಿಸಿದರೆ, ತರಾಮ್ 3.6 ಕೋಟಿ ಅನ್ನು ಆರೋಪಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. ಮರುದಿನ ತಮ್ಮ ಕಚೇರಿಗೆ ಬರುವಂತೆ ಉದ್ಯಮಿಗಳಿಗೆ ವಂಚಕರು ಹೇಳಿದ್ದರು. ಅಂತೆಯೇ ಕಚೇರಿಗೆ ಸಾಲದ ಹಣ ಪಡೆಯಲು ತೆರಳಿದ್ದ ಉದ್ಯಮಿಗಳನ್ನು ಕಚೇರಿಯಲ್ಲೇ ಕುರಿಸಿ, ಮೊಬೈಲ್‌ನಲ್ಲಿ ಮಾತನಾಡುವ ನೆಪದಲ್ಲಿ ಕಚೇರಿಯಿಂದ ಹೊರಬಂದು ಮೊಬೈಲ್ ಕಾರ್ಯಸ್ಥಗಿತಗೊಳಿಸಿ ಆರೋಪಿಗಳು ಪರಾರಿಯಾಗಿದ್ದರು. ಕೊನೆಗೆ ತಾವು ಮೋಸ ಹೋಗಿರುವುದು ಅರಿವಾಗಿ ಸದ್ದುಗುಂಟೆಪಾಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಸುಳಿವು ಕೊಟ್ಟ ಸಿಸಿಟಿವಿ, ಕರೆ
ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತ 200ಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಆರೋಪಿಗಳ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ವಂಚಕರ ಸುಳಿವು ಸಿಕ್ಕಿತು. ಈ ಮಾಹಿತಿ ಮೇರೆಗೆ ಕಾರ್ಯಾಚರಣೆ ಮುಂದುವರೆಸಿದ ಪೊಲೀಸರು, ಮೊದಲು ಕೇರಳದಲ್ಲಿ ಸೈಯದ್‌ನನ್ನು ಸೆರೆ ಹಿಡಿದರು. ಬಳಿಕ ಆತ ನೀಡಿದ ಮಾಹಿತಿ ಮೇರೆಗೆ ಇನ್ನುಳಿದವರು ಸಿಕ್ಕಿಬಿದ್ದರು ಎಂದು ಪೊಲೀಸರು ಹೇಳಿದ್ದಾರೆ.
Crime News: ಅಂಗಡಿಯವನಿಗೆ ಅಂಕಲ್ ಅಂದಿದ್ದೆ ತಪ್ಪಾಯ್ತು, ಯುವತಿ ಆಸ್ಪತ್ರೆಗೆ!
11 ಕೆ.ಜಿ. ಚಿನ್ನ ಖರೀದಿ
ಈ ವಂಚನೆಯಿಂದ ಸಂಪಾದಿಸಿದ ಹಣದಲ್ಲಿ ಬೆಂಗಳೂರು ಹಾಗೂ ಚೆನ್ನೈನ ಪ್ರತಿಷ್ಠಿತ ಬಂಗಾರ ಮಾರಾಟ ಮಳಿಗೆಗಳಲ್ಲಿ 11.497 ಕೆ.ಜಿ. ಚಿನ್ನವನ್ನು ಆರೋಪಿಗಳು ಖರೀದಿಸಿದ್ದರು. ಬಳಿಕ ತಮಿಳುನಾಡಿನ ಸೇಲಂ ನಗರದ ಹೋಟೆಲ್‌ನಲ್ಲಿ ಈ ಬಂಗಾರವನ್ನು ಐವರು ಸಮವಾಗಿ ಹಂಚಿಕೊಂಡಿದ್ದರು. ಈ ಚಿನ್ನ ಖರೀದಿಗೆ 33 ಲಕ್ಷ ಜಿಎಸ್‌ಟಿ ಹಾಗೂ ಸಿಎಸ್‌ಟಿ ಪಾವತಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ತೆಲುಗು ಗಾಯಕಿ ತಂದೆ ಸಾವಿಗೆ ಕಾರಣ?
ಇತ್ತೀಚಿಗೆ ಯಲಹಂಕ ಸಮೀಪದ ನಿಗೂಢವಾಗಿ ಸಾವನ್ನಪ್ಪಿದ್ದ ತೆಲುಗು ಚಿತ್ರರಂಗದ(Tollywood) ಖ್ಯಾತ ಗಾಯಕಿ(Singer) ಹರಿಣಿ(Harini) ತಂದೆ ನಿವೃತ್ತ ಪ್ರೊ.ಎ.ಕೆ.ರಾವ್ ಅವರ ಸಾವಿಗೆ ಕೂಡಾ ಈ ವಂಚನೆ ಜಾಲ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ತಮಗೆ ಪರಿಚಯವಿದ್ದ ಉದ್ಯಮಿಗಳನ್ನು ಸೈಯದ್ ತಂಡಕ್ಕೆ ರಾವ್ ಹಾಗೂ ಅವರ ಸ್ನೇಹಿತ ಮುರಳಿ ಪರಿಚಯಿಸಿದ್ದರು. ಬಳಿಕ ರಾವ್ ಅವರ ಸ್ನೇಹಿತ ಉದ್ಯಮಿಗಳಿಗೆ ಸಹ ಆರೋಪಿಗಳು ಕೋಟ್ಯಂತರ ರು. ವಂಚಿಸಿದ್ದರು. ಇದರಿಂದ ಬೇಸರಗೊಂಡು ರಾವ್, ಯಲಹಂಕ ಸಮೀಪ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.