ಕನ್ನಡದಲ್ಲೂ ತಮ್ಮ ಪಾತ್ರಕ್ಕೆ ಸಲ್ಮಾನ್ ಖಾನ್ ಅವರೇ ವಾಯ್ಸ್ ನೀಡಲಿದ್ದಾರೆಂಬ ಸುದ್ದಿಯಲ್ಲಿ ಬೆನ್ನಲ್ಲೇ ಮತ್ತೊಂದು ಸುದ್ದಿ ಬಂದಿದೆ. ಕನ್ನಡದ ಇಬ್ಬರು ನಿರ್ದೇಶಕರು ಈ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಅನೂಪ್ ಭಂಡಾರಿ, ಗುರುದತ್ತ್ ಗಾಣಿಗ ಅವರು ಸಲ್ಮಾನ್ ಹಾಗೂ ಕಿಚ್ಚನ ಕಾಂಬಿನೇಷನ್ ಚಿತ್ರಕ್ಕೆ ಸಾಥ್ ನೀಡಿದ್ದಾರೆ.

ಸುದೀಪ್‌ ನಟನೆಯ ಕೋಟಿಗೊಬ್ಬ 3 ಚಿತ್ರದ ಸೆಟ್‌ನಲ್ಲಿ ನಡೆದದ್ದೇನು?

ಕನ್ನಡಕ್ಕೆ ಡಬ್ ಆಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಕನ್ನಡ ವರ್ಷನ್ ಡೈಲಾಗ್‌ಗಳನ್ನು ಗುರುದತ್ತ್ ಗಾಣಿಗ ಬರೆಯುತ್ತಿದ್ದಾರೆ. ಮತ್ತೊಬ್ಬ ನಿರ್ದೇಶಕ ಅನೂಪ್ ಭಂಡಾರಿ ಅವರು ಚಿತ್ರದಲ್ಲಿರುವ ಆರು ಹಾಡಿಗೂ ಸಾಹಿತ್ಯ ಬರೆಯುತ್ತಿದ್ದಾರೆ. ಹಾಗಂತ ಇದು ಅನುವಾದ ಅಲ್ಲ. ಸಂಭಾಷಣೆಗಳನ್ನು ಮಾತ್ರ ಹಿಂದಿಯಿಂದ ಕನ್ನಡೀಕರಣ ಮಾಡಲಾಗುತ್ತಿದೆ. ಆದರೆ, ಹಾಡುಗಳ ವಿಚಾರದಲ್ಲಿ ಮಾತ್ರ ಹೊಸದಾಗಿ ಸಾಹಿತ್ಯಬರೆಸುವುದಕ್ಕೆ ಚಿತ್ರತಂಡ ಮುಂದಾಗಿದ್ದು, ಇದಕ್ಕೆ ಅನೂಪ್ ಭಂಡಾರಿ ಅವರಿಂದಲೇ ಎಲ್ಲ ಹಾಡುಗಳನ್ನು ಬರೆಸಲಾಗುತ್ತಿದೆ.

ಬೇರೆ ಹೀರೋಗಳ ಚಿತ್ರಗಳಲ್ಲಿ ನಟಿಸಲು ಭಯವಾಗುತ್ತದೆ: ಸುದೀಪ್‌

ಈ ಚಿತ್ರದ ಕನ್ನಡ ಮತ್ತು ಹಿಂದಿ ಬಿಡುಗಡೆಯ ಹಕ್ಕುಗಳನ್ನು ತೆಗೆದುಕೊಂಡಿರುವುದು ನಿರ್ಮಾಪಕ ಜಾಕ್ ಮಂಜು ಅವರು. ಅವರೇ ಡಿ. 20ರಂದು ರಾಜ್ಯಾದ್ಯಾಂತ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.