- ಹೀಗೆ ಹೇಳಿ ಅಚ್ಚರಿ ಮೂಡಿಸಿದ್ದು ನಟ ಸುದೀಪ್‌. ಇಷ್ಟಕ್ಕೂ ಅವರಿಗೆ ಇಂಥದ್ದೊಂದು ಅಭಿಪ್ರಾಯಕ್ಕೆ ಕಾರಣ ಏನು, ಅವರಲ್ಲಿ ಹೆದರಿಕೆ ಮೂಡಿಸಿದ ಸಿನಿಮಾ ಯಾವುದು ಎಂಬುದನ್ನು ಮುಂದೆ ಅವರ ಮಾತುಗಳಲ್ಲೇ ಕೇಳಿ.

40 ರಿಂದ 38, ತಮ್ಮ ಬಗ್ಗೆ ಯಾರಿಗೂ ಗೊತ್ತಿಲ್ಲದ ತಮ್ಮದೇ ರಹಸ್ಯ ಹೇಳಿದ ಬೆಳಗೆರೆ

ಮಲ್ಟಿಸ್ಟಾರ್‌ ಚಿತ್ರಗಳಲ್ಲಿ ಎಲ್ಲರು ಹೀರೋಗಳಾಗಲು ಆಗಲ್ಲ. ಅಲ್ಲೂ ಒಬ್ಬ ಹೀರೋ ಇರುತ್ತಾರೆ. ಆ ಹೀರೋ ಜತೆ ನಾವು ನಟಿಸಬೇಕು. ಈಗ ‘ಸೈರಾ’ ಚಿತ್ರವನ್ನೇ ತೆಗೆದುಕೊಳ್ಳಿ. ಇದು ಮಲ್ಟಿಸ್ಟಾರ್‌ ಸಿನಿಮಾ. ಚಿರಂಜೀವಿ, ಅಮಿತಾಭ್‌ ಬಚ್ಚನ್‌, ವಿಜಯ್‌ ಸೇತುಪತಿ, ಜಗಪತಿ ಬಾಬು ಹೀಗೆ ಹಲವರು ಇದ್ದಾರೆ. ಎಲ್ಲರು ಹೀರೋಗಳಲ್ಲ. ಅಲ್ಲಿ ನಾವು ಪೋಷಕ ನಟರು. ಒಬ್ಬ ಹೀರೋ ತನ್ನೂರಿನ ಚಿತ್ರರಂಗದಲ್ಲಿ ಸ್ಟಾರ್‌ ಆಗಿ, ಅಭಿಮಾನಿಗಳನ್ನು ಗಳಿಸಿಕೊಂಡು, ತಾನು ಹೀರೋ ಆಗಿ ಚಾಲ್ತಿಯಲ್ಲಿರುವಾಗಲೇ ಮತ್ತೊಬ್ಬ ಸ್ಟಾರ್‌ ಹೀರೋ ಜತೆ ನಾವೇ ಏನೇ ಪಾತ್ರ ಮಾಡಿದರೂ, ಏನೇ ಪ್ರತಿಭೆ ತೋರಿದರೂ ಔಟ್‌ಆಪ್‌ ಫೋಕಸ್‌ನಲ್ಲೇ ಇರುತ್ತೇವೆ. ಯಾಕೆಂದರೆ ನಾನು ಅಲ್ಲಿ ಹೀರೋ ಅಲ್ಲ, ಪೋಷಕ ನಟ. ಹೀಗೆ ಹೀರೋ ಆಗಿದ್ದುಕೊಂಡೇ ಪೋಷಕ ನಟನಾಗುವುದಕ್ಕೂ ಧೈರ್ಯ ಬೇಕು. ಹೆಜ್ಜೆ ಹೆಜ್ಜೆಗೂ ಹೆದರಿಕೆ. ಯಾಕೆಂದರೆ ನಮ್ಮ ಚಿತ್ರರಂಗದಲ್ಲಿ ನಮಗೇ ಅಂತಲೇ ಒಂದು ಮಾರುಕಟ್ಟೆಇದೆ. ನಮ್ಮನ್ನೂ ಆರಾಧಿಸುವ, ಅಭಿಮಾನಿಸುವವರು ಇದ್ದಾರೆ.

ಅಂಬಿ ಬಯೋಪಿಕ್ ನಲ್ಲಿ ಸುದೀಪ್; ಅಭಿಮಾನಿಗಳಿಗೆ ಕೊಟ್ರು ಕ್ಲಾರಿಟಿ!

ವೈಯಕ್ತಿಕವಾಗಿ ನನಗೆ ಯಾವಾಗಲೂ ಈ ಭಯ ಕಾಡುತ್ತಲೇ ಇರುತ್ತದೆ. ಈ ಕಾರಣಕ್ಕೆ ಬೇರೆ ಹೀರೋಗಳ ಚಿತ್ರಗಳಲ್ಲಿ ನಟಿಸುವಾಗ ಪಾತ್ರ, ಕತೆ ಮತ್ತು ಯಾರು ಆ ಸಿನಿಮಾ ಮಾಡುತ್ತಿದ್ದಾರೆ ಎಂಬುದನ್ನು ಮುಖ್ಯವಾಗಿ ಪರಿಗಣಿಸುತ್ತೇನೆ. ಹೀಗಾಗಿ ಮಲ್ಟಿಸ್ಟಾರ್‌ ಸಿನಿಮಾಗಳನ್ನು ಮಾಡುವುದು ನಾವು ಅಂದುಕೊಂಡಷ್ಟುಸುಲಭ ಅಲ್ಲ ಎಂಬುದನ್ನು ಅಂಥ ಚಿತ್ರಗಳಲ್ಲಿ ಕೆಲಸ ಮಾಡಿದವರಿಗೇ ಮಾತ್ರ ಗೊತ್ತು. ಈ ಅನುಭವ ನನಗೆ ಆಗಿದೆ. ಈ ಕಾರಣಕ್ಕೆ ಬೇರೆ ಹೀರೋಗಳ ಚಿತ್ರಗಳಲ್ಲಿ ಪೋಷಕ ನಟನಾಗಬೇಕು ಅಂದರೆ ಭಯ ಆಗುತ್ತದೆ. ಒಂದು ಮೇಳೆ ಮಾಡಲೇಬೇಕು ಎಂದಾಗ ಕತೆಯಲ್ಲಿ ಧಮ್‌ ಇರಬೇಕು, ನಮಗೆ ಭಯ ದೂರವಾಗಿ ಧೈರ್ಯ ಇರಬೇಕು.

ಇಷ್ಟನ್ನು ಹೇಳಿ ‘ಸೈರಾ’ ಚಿತ್ರದಲ್ಲಿ ನಟಿಸಿ, ಅದರಿಂದ ಪಡೆದುಕೊಂಡ ಯಶಸ್ಸನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡರು ಸುದೀಪ್‌. ಇಂಥ ಸಿನಿಮಾಗಳು ತಮ್ಮ ಜೀವನದಲ್ಲಿ ಸಿಗುವ ಒಂದು ಸುಂದರವಾದ ಅವಕಾಶಗಳು ಎಂದು ಬಣ್ಣಿಸಿಕೊಂಡರು. ಹೀಗೆ ಹೇಳುವಾಗ ಪಕ್ಕದಲ್ಲೇ ಕೂತಿದ್ದ ‘ಸೈರಾ’ ಚಿತ್ರದ ನಿರ್ದೇಶಕ ಸುರೇಂದ್ರ ರೆಡ್ಡಿ ಮುಖದಲ್ಲಿ ಧನ್ಯತಾ ಭಾವ ಕಂಡಿತು.