Asianet Suvarna News Asianet Suvarna News

20 ದಿನ 'ಕಿರಾತಕ 2' ಶೂಟಿಂಗ್ ಮಾಡಿದ್ರೂ ಯಶ್ ನಿಲ್ಲಿಸಿದ್ದು ಯಾಕೆ?: ಅನಿಲ್ ಕುಮಾರ್ ಸ್ಪಷ್ಟನೆ

ಇದ್ದಕ್ಕಿದ್ದಂತೆ ಕಿರಾತಕ 2 ಸಿನಿಮಾ ಚಿತ್ರೀಕರಣ ನಿಲ್ಲಿಸಲು ಕಾರಣವೇನು?  ಕಿರಾತಕನ ಪಾತ್ರದಲ್ಲಿ ಯಾರೂ ಕಾಣಿಸಿಕೊಳ್ಳಲ್ಲ?...ನಿರ್ದೇಶಕರ ಮಾತು....
 

Kannada director Anil Kumar says why Yash stopped Kirataka 2 film shooting vcs
Author
First Published Jan 12, 2024, 2:07 PM IST

ಕನ್ನಡ ಸಿನಿ ರಸಿಕರಿಗೆ ಬಹಳ ಬೇಗ ಕನೆಕ್ಟ್‌ ಆಗುವುದು ಮಂಡ್ಯ-ಮೈಸೂರು ಭಾಗದಲ್ಲಿ ನಡೆಯುವ ಕಥೆಗಳು ಮತ್ತು ಅಲ್ಲಿನ ಶೈಲಿಯ ಸಿನಿಮಾಗಳು. ಪಕ್ಕಾ ಮಂಡ್ಯ ಬಾಯ್‌ ರೀತಿ ಕಿರಾತಕ ಸಿನಿಮಾದಲ್ಲಿ ಕಾಣಿಸಿಕೊಂಡ ಯಶ್, ಕಿರಾತಕ ಎರಡನೇ ಭಾಗ ಮಾಡಲು ಮುಂದಾಗಿದ್ದರು. ಕೆಜಿಎಫ್ ಸಿನಿಮಾ ರಿಲೀಸ್‌ಗೂ ಮುನ್ನ ಯಶ್ ಗಡ್ಡ ತೆಗೆದು ಫುಲ್ ರೆಡಿಯಾಗಿ 20 ದಿನ ಚಿತ್ರೀಕರಣ ಮಾಡಿ ಅಲ್ಲಿಗೆ ನಿಲ್ಲಿಸಲು ಕಾರಣವೇನು? ನಿರ್ದೇಶಕ ಅನಿಲ್ ಕುಮಾರ್ ಮಾತು.... 

'ಎಲ್ಲರೂ ಕಿರಾತಕ 2 ಚಿತ್ರದ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಯಶ್ ಮತ್ತು ನಾವು ಸ್ನೇಹಿತರು ಒಟ್ಟಿಗೆ ಕಿರಾತಕ 2 ಸಿನಿಮಾ ಮಾಡಬೇಕಿತ್ತು ಅದು ನಿಜ. ಪದೇ ಪದೇ ಯಶ್ ಅವರ ಹೆಸರು ಹೇಳಿದರೆ...ಅವರ ಹೆಸರನ್ನು ಬಳಸಿಕೊಂಡು ಪಬ್ಲಿಸಿಟಿ ಮಾಡುತ್ತಿದ್ದೀನಿ ಅಂದುಬಿಡುತ್ತಾರೆ ಜನರು. ಕಿರಾತಕ 2 ಚಿತ್ರದ ಕಥೆಯನ್ನು ಯಶ್ ತುಂಬಾ ಪ್ರೀತಿಯಿಂದ ಬರೆಸಿಕೊಂಡರು ಏಕೆಂದರೆ ಮಂಡ್ಯ ಮತ್ತು ಮೈಸೂರು ಭಾಗ, ಅಲ್ಲಿನ ಸ್ನೇಃಹಿತರು ಮತ್ತು ಭಾಷೆ ಯಶ್ ಅವರ ರಕ್ತದಲ್ಲಿ ಇದೆ. ನಾರ್ಮಲ್ ಆಗಿ ನಮ್ಮ ಜೊತೆ ಕುಳಿತುಕೊಂಡರೆ ಆ ಭಾಗದ ಜನರಂತೆ ಅದೇ ಸ್ಲಾಂಗ್‌ನಲ್ಲಿ ಮಾತನಾಡುತ್ತಾರೆ' ಎಂದು ಖಾಸಗಿ ಯುಟ್ಯೂಬ್ ಚಾನೆಲ್‌ನಲ್ಲಿ ಅನಿಲ್ ಕುಮಾರ್ ಮಾತನಾಡಿದ್ದಾರೆ. 

ಕಿರಾತಕ 2 ಸಿನಿಮಾ ಆಗೋದು ಯಶ್‌ ನಿರ್ಧಾರದ ಮೇಲೆ ನಿಂತಿದೆ: ಜಯಣ್ಣ

'ಸ್ನೇಹಿತರ ಮದುವೆ ಮುಗಿಸಿಕೊಂಡು ನಾವು ಮೈಸೂರು ಕಡೆಯಿಂದ ಬೆಂಗಳೂರಿಗೆ ಬರುವಾಗ ಯಶ್ ಕೆಲವೊಂದು ರಸ್ತೆಗಳನ್ನು ತೋರಿಸುತ್ತಿದ್ದರು. ಮುಖ್ಯ ರಸ್ತೆಯಲ್ಲಿ ಹೋಗಬೇಡ ಒಳಗೆ ಒಳಗೆ ಹೋಗು ಎನ್ನುತ್ತಿದ್ದರು. ಯಶ್ ಎಷ್ಟೇ ಎತ್ತರಕ್ಕೆ ಬೆಳೆದಿರಬಹುದು ಆ ಹಳ್ಳಿ ಜೀವನವನ್ನು ತುಂಬಾ ಫೀಲ್ ಮಾಡುತ್ತಾರೆ. ಅಲ್ಲಿ ಪ್ರಯಾಣ ಮಾಡುವಾಗ ಯಾಕೆ ನೀವು ಹಳ್ಳಿ ಸ್ಟೈಲ್‌ನಲ್ಲಿ ಕಥೆ ಬರೆಯಬಾರದು? ರಾಜಹುಲಿ ಮತ್ತು ಕಿರಾತಕ ರೀತಿ ಬರೆಯಬೇಕು ಅಂತ. ಏಕೆಂದರೆ ಯಶ್ ಅವರಿಗೆ ಜನಪ್ರಿಯತೆ ಸಿಕ್ಕಿದ್ದು ಅಲ್ಲಿಂದ ಅಂತ.' ಎಂದು ಅನಿಲ್ ಕುಮಾರ್ ಹೇಳಿದ್ದಾರೆ. 

ಸ್ಕೂಲ್‌ಗೆ ಹೋದ್ರೆ ಹಣ ಮತ್ತು ಸಮಯ ಎರಡೂ ಹಾಳು; ಕಿರಾತಕ ನಟಿ ಓವಿಯಾ ಶಾಕಿಂಗ್ ಉತ್ತರ!

'ಕಿರಾತಕ 2 ಚಿತ್ರಕತೆ ಶುರುವಾಯ್ತು..ಸ್ವಲ್ಪ ದಿನ ಚಿತ್ರೀಕರಣ ಶುರುವಾಯ್ತು. 20 ದಿನಗಳ ಚಿತ್ರೀಕರಣ ಮಾಡಿದರು. ಅದಾದ ಮೇಲೆ ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಯ್ತು ಚಾಪ್ಟರ್ 2 ರಿಲೀಸ್ ಆಯ್ತು ಆಮೇಲೆ ಅವರ ಮಾರ್ಕೆಟ್ ಎಲ್ಲಿಗೋ ಹೋಯ್ತು. ಕಿರಾತಕ 2 ಸಿನಿಮಾ ಕಥೆ ಕರ್ನಾಟಕಕ್ಕೆ ಸೀಮಿತವಾಗಿತ್ತು ಆದರೆ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರು. ಇವತ್ತಿಗೂ ಯಶ್ ನಾನು ಕಿರಾತಕ 2 ಸಿನಿಮಾ ಮಾಡಬೇಕು ಅಂತ ಹೇಳುತ್ತಾರೆ. ಯಶ್ ಹೊರತು ಪಡಿಸಿ ಬೇರೆ ಅವರನ್ನು ಆ ಪಾತ್ರದಲ್ಲಿ ನೋಡಲು ನನಗೆ ಇಷ್ಟ ಇಲ್ಲ. ಏನೇ ಆಗಲಿ ಯಾರಿಗೂ ಕಥೆ ಕೊಡಬೇಡಿ ಸಿನಿಮಾ ಒಂದಲ್ಲ ಒಂದು ದಿನ ಮಾಡ್ತೀನಿ ಅಂತಾನೇ ಯಶ್ ಹೇಳ್ತಾರೆ. ಕಿರಾತಕಾ ರಾಕಿ ಭಾಯ್ ಅಂದ್ರೆ ಯಶ್ ಇರಲೇ ಬೇಕು. ವ್ಯಕ್ತಿ ಬೆಳೆಯುತ್ತಿದ್ದಾರೆ ಅದನ್ನು ನೋಡಿ ಖುಷಿ ಪಡಬೇಕು ನನ್ನ ಸ್ವಾರ್ಥಕ್ಕೆ ಏನೋ ಮಾಡಲು ಹೋಗಬಾರದು' ಎಂದಿದ್ದಾರೆ ಅನಿಲ್ ಕುಮಾರ್. 

Follow Us:
Download App:
  • android
  • ios