ಕೆಲವು ದಿನಗಳ ಹಿಂದೆ ಸ್ಯಾಂಡಲ್‌ವುಡ್‌ ನಿರ್ದೇಶಕ ಜೋಗಿ ಪ್ರೇಮ್ ತಾಯಿಯನ್ನು ಕಳೆದುಕೊಂಡರು. ನೋವಿನಿಂದ ಹೊರ ಬಾರದ ಪ್ರೇಮ್‌ ತಾಯಿಯನ್ನು ನೆನಪಿಸಿಕೊಂಡು, ಬರೆದ ಸಾಲುಗಳು ಎಂಥವರನ್ನೂ ಭಾವುಕರನ್ನಾಗಿಸುತ್ತದೆ. 

ತಿಂಗಳುಗಳಿಂದ ಲ್ಯುಕೇಮಿಯಾದಿಂದ ಬಳಲುತ್ತಿದ್ದ ಪ್ರೇಮ್‌ ತಾಯಿ ಭಾಗ್ಯಮ್ಮ ಬೆಂಗಳೂರಿನ ಶಾಂತಿ ಆಸ್ಪತ್ರೆಯಲ್ಲಿ ಜುಲೈ 17ರಂದು ಕೊನೆ ಉಸಿರೆಳೆದರು. ಭಾಗ್ಯಮ್ಮ ಅವರಿಗೆ ಕೊರೋನಾ ಪರೀಕ್ಷೆಯೂ ಮಾಡಲಾಗಿದ್ದು ವರದಿ ನೆಗೆಟಿವ್ ಎಂದು ತಿಳಿದು ಬಂದಿತ್ತು.

ಸ್ಯಾಂಡಲ್‌ವುಡ್ ನಿರ್ದೇಶಕ ಜೋಗಿ ಪ್ರೇಮ್ ತಾಯಿ ನಿಧನ!

ಪ್ರೇಮ್‌ ಮಾತುಗಳು:
ಜೋಗಿ ಪ್ರೇಮ್‌ ತಾಯಿಯನ್ನು ಎಷ್ಟು ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ಅವರ ಸಿನಿಮಾಗಳೇ ಸಾಕ್ಷಿ. ತಮ್ಮ ಪ್ರತೀ ಸಿನಿಮಾದಲ್ಲಿಯೂ ತಾಯಿಯ ಬಗ್ಗೆ ಬರೆದ ಸಾಲುಗಳು, ಹಾಡುಗಳು ಸೂಪರ್ ಡೂಪರ್‌ ಹಿಟ್‌ ಆಗುತ್ತಿದ್ದವು. 

 

'ನಾನು ಎಷ್ಟೇ ಹೋರಾಟ ಮಾಡಿದರೂ ಕೊನೆಗೂ ನಿನ್ನನ್ನು ಉಳಿಸಿಕೊಳ್ಳಲು ಆಗ್ಲಿಲ್ಲ. ನಿನ್ನ ಋಣ ತೀರ್ಸೋಕೆ ಮತ್ತೆ ನಿನ್‌ ಹೊಟ್ಟೇಲಿ ಹುಟ್ಟಕ್ಕೆ ನಂಗ್ ಒಂದ್ ಅವಕಾಶ ಮಾಡ್ಕೊಡು. ಯಾವತ್ತೂ ಕಾಯ್ತಿರ್ತೀನಿ. ಮಿಸ್‌ ಯು ಅಮ್ಮ' ಎಂದು ಫೋಟೋ ಶೇರ್ ಮಾಡಿಕೊಂಡು ಬರೆದುಕೊಂಡಿದ್ದಾರೆ.

ಅಮ್ಮನ ಕಳೆದುಕೊಂಡ ಪ್ರೇಮ್‌ಗೆ ದುಃಖ ಭರಿಸೋ ಶಕ್ತಿ ದೇವರು ನೀಡಲಿ..