ಬೆಂಗಳೂರು(ಜು.17): ಒಂದೆಡೆ ಕೊರೋನಾ ಹೊಡೆತೆ ಮತ್ತೊಂದೆಡೆ ಸರಣಿ ಆಘಾತ ಸ್ಯಾಂಡಲ್‌ವುಡ್‌ನ್ನು ಬೆಚ್ಚಿ ಬೀಳಿಸುತ್ತಿದೆ. ನಟ ಚಿರಂಜೀವಿ ಸರ್ಜಾ ಅಗಲಿಕೆ, ನಟ ಶ್ರೀನಗರ ಕಿಟ್ಟಿ ಸಹೋದರ ನಿಧನ ಸೇರಿದಂತೆ  ಯುವ ನಟರ ಅಗಲಿಕೆಯ ನೋವಿನಿಂದ ಕನ್ನಡ ಚಿತ್ರರಂಗ ಇನ್ನೂ ಚೇತರಿಸಿಕೊಂಡಿಲ್ಲ. ಇದರ ಬೆನ್ನಲ್ಲೇ ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ತಾಯಿ ನಿಧನರಾಗಿದ್ದಾರೆ.

ಅಮ್ಮ ಎಂಬ ಮಮಕಾರಕ್ಕೆ ನಮಸ್ಕಾರ; ತಾಯಿಯ ಬಗ್ಗೆ ಸೆಲಬ್ರಿಟಿಗಳ ಮಾತು

ಕ್ಯಾನ್ಸರ್ ಹಾಗು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಜೋಗಿ ಪ್ರೇಮಿ ತಾಯಿ ಭಾಗ್ಯಮ್ಮ ಇಂದು(ಜು.17) ಕೊನೆಯುಸಿರೆಳೆದಿದ್ದಾರೆ. ಆರೋಗ್ಯ ಹದೆಗೆಟ್ಟ ಕಾರಣ ಕಳೆದ ಕೆಲದಿನಗಳಿಂದ ಜಯನಗರದ ಶಾಂತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾಗ್ಯಮ್ಮ, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. 

'ವಿಲನ್' ಕಾಂಬಿನೇಷ್‌ ಈಸ್‌ ಬ್ಯಾಕ್‌; ಕಿಚ್ಚ ಸುದೀಪ್‌ - ಜೋಗಿ ಪ್ರೇಮ್‌!

ಸ್ಯಾಂಡಲ್ ವುಡ್ ಗೆ ಕೊರೋನಾದೊಂದಿಗೆ ಒಂದಾದ ಮೇಲೆ ಒಂದು ಆಘಾತವಾಗುತ್ತಿದೆ. ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಚಿತ್ರರಂಗ ಅಗಲಿದ್ದು. ಶ್ರೀನಗರ ಕಿಟ್ಟಿ ಸಹೋದರ ಶಿವ ಶಂಕರ್ ಹಾರ್ಟ್ ಅಟ್ಯಾಕ್ ನಿಂದಲೇ ನಿಧನವಾಗಿದ್ದರು. ಇದೀಗ ಜೋಗಿ ಪ್ರೇಮ್ ತಾಯಿ ಅನಾರೋಗ್ಯದಿಂದ ನಿಧನರಾಗಿದ್ದು, ಸ್ಯಾಂಡಲ್‌ವುಡ್‌ ನೋವು ಇಮ್ಮಡಿಗೊಂಡಿದೆ.