ಬೆಂಗಳೂರು (ಜು. 15) ಸ್ಯಾಂಡಲ್ ವುಡ್ ಗೆ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ.  ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ.

"

ಟ್ವೀಟ್ ಮಾಡಿರುವ ಧ್ರುವ, ನನಗೆ ಹಾಗೂ ನನ್ನ ಪತ್ನಿಗೆ ಕೊರೋನಾ ಸೋಂಕು ದೃಢವಾಗಿದೆ. ಸದ್ಯ ಕೊರೋನಾ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿ ಕಂಡು ಬಂದಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ನಿಮ್ಮೆಲ್ಲರ ಹಾರೈಕೆ ಇರಲಿ ಎಂದು  ಕೇಳಿಕೊಂಡಿದ್ದಾರೆ

ಅಣ್ಣನ ನೆನೆದು ಧ್ರುವ ಹೇಳಿದ ಮಾತುಗಳು

ನಮ್ಮ ಜೊತೆ ಸಂಪರ್ಕದಲ್ಲಿದ್ದವರು ಈ ಕೂಡಲೇ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಸಹ ಮಾಡಿಕೊಂಡಿದ್ದಾರೆ. ಚಿರಂಜಿವಿ ಸರ್ಜಾ ಅಗಲಿಕೆ ನಂತರ ಧ್ರುವ ಸರ್ಜಾ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ವದಂತಿ ಕೇಳಿ ಬಂದಿತ್ತು. 

ಧ್ರುವ ಸರ್ಜಾ ಸಹೋದರ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ  ಅಗಲಿದ್ದರು. ಅದಾದ ಮೇಲೆ ಕುಟುಂಬ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವಾಗ ಕೊರೋನಾ ಆಘಾತ ನೀಡಿದೆ.  ನಟ ನೆನಪಿರಲಿ ಪ್ರೇಮ್ ತಾಯಿ ಅವರಿಗೂ ಕೊರೋನಾ ಸೋಂಕು ದೃಢವಾಗಿತ್ತು. 

"