ಸ್ಯಾಂಡಲ್‌ವುಡ್‌ 'ವಾಯುಪುತ್ರ' ಚಿರಂಜೀವಿ ಸರ್ಜಾ ಅಗಲಿ ಇಂದಿಗೆ ಒಂದು ತಿಂಗಳು. ಈ ಹಿನ್ನಲೆಯಲ್ಲಿಆಪ್ತರು- ಕುಟುಂಬಸ್ಥರು ನೆಲಗುಳಿಯಲ್ಲಿರುವ ಧ್ರುವ ಸರ್ಜಾ ಫಾರ್ಮ್‌ಹೌಸ್‌ನಲ್ಲಿ ಪೂಜೆ ಸಲ್ಲಿಸಿದ್ದಾರೆ. ಧ್ರುವ ಸರ್ಜಾ ಪೂಜೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಧ್ರುವ ಸರ್ಜಾ ಕಣ್ಣೀರಿಟ್ಟಿದ್ದಾರೆ.

ಕಳೆದ ತಿಂಗಳು ಜೂನ್ 7ರಂದು ಹೃದಯಾಘಾತದಿಂದ ಮೃತಪಟ್ಟ ಚಿರಂಜೀವಿ ಸರ್ಜಾ ಎಲ್ಲರಿಂದ ದೈಹಿಕವಾಗಿ ದೂರವಾಗಿದ್ದಾರೆ. ಆದರೆ ಮಾನಸಿಕವಾಗಿ ತಮ್ಮ ಅಭಿನಯದ ಸಿನಿಮಾ ಮತ್ತು ಹಾಡುಗಳ ಮೂಲಕ ಎಲ್ಲರೊಂದಿಗೇ ಇದ್ದಾರೆ. ಅಣ್ಣ ಸದಾ ನಮ್ಮೊಟ್ಟಿಗೆ ಇರಬೇಕೆಂದು  ಕನಕಪುರದ ನೆಲಗುಳಿಯಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಧ್ರುವ ಸರ್ಜಾ ಅಣ್ಣ ಚಿರುವಿನ ಅಂತ್ಯಕ್ರಿಯೆ ಮಾಡಿಸಿಕೊಂಡರು. ಬಿಡುವಿನ ಸಮಯದಲ್ಲಿ ಧ್ರುವ ಮತ್ತು ಪತ್ನಿ ಪ್ರೇರಣಾ ಈ ಫಾರ್ಮ್‌ಹೌಸ್‌ಗೆ ಭೇಟಿ ನೀಡುತ್ತಿರುತ್ತಾರೆ.  

 

 
 
 
 
 
 
 
 
 
 
 
 
 

🙏🙏🙏🙏

A post shared by Vijay Rock (@vijayraj143143) on Jul 6, 2020 at 9:00pm PDT

ಧ್ರುವ ಸರ್ಜಾ ಆರೋಗ್ಯ:
ಇತ್ತೀಚಿಗೆ ನಟ ಧ್ರುವ ಸರ್ಜಾ ಲೋ ಬಿಪಿಯಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಕಾಲ ಚಿಕಿತ್ಸೆ ಪಡೆದು, ಸದ್ಯಕ್ಕೆ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಚಿರು ಅಗಲಿಕೆಯಿಂದ ಮನನೊಂದು ಡಿಪ್ರೆಶನ್‌ಗೆ ಹೋಗಿದ್ದಾರೆ ಎಂದು ಗಾಂಧಿನಗರದಲ್ಲಿ ಸುದ್ದಿಯಾಗುತ್ತಿದೆ. 

ಸದ್ಯಕ್ಕೆ ಅರ್ಜುನ್ ಸರ್ಜಾ ಅಕ್ಕನ ಕುಟುಂಬದ ಕೇರ್ ತೆಗೆದುಕೊಳ್ಳುತ್ತಿದ್ದು, ಧ್ರುವ ಸರ್ಜಾ, ಪತ್ನಿ ಪ್ರೇರಣಾ ಮತ್ತು ಅಕ್ಕ-ಭಾವನನ್ನು ಕೋರಮಂಗಲದ ತಮ್ಮ ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಚಿರು ಅಗಲಿ 1 ತಿಂಗಳು; ಸ್ನೇಹಿತರೆಲ್ಲಾ ಗೆಳೆಯನನ್ನು ಸ್ಮರಿಸಿದ್ದು ಹೀಗೆ!

ಜೂ.7ರಂದ ಭಾನುವಾರದಂದು ಮಧ್ಯಾಹ್ನದ ಊಟ ಮಾಡಿ, ಕುಸಿದು ಬಿದ್ದ ಚಿರಂಜೀವಿ ಸರ್ಜಾರನ್ನು ತಕ್ಷಣವೇ ಅಪೋಲೋ ಆಸ್ಪತ್ರೆಗೆ ದಾಖಲಿಸಿತ್ತಾದರೂ, ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಅತ್ಯಂತ ಚಿಕ್ಕಿ ವಯಸ್ಸಿನಲ್ಲಿಯೇ ಗರ್ಭಿಣಿ ಪತ್ನಿ ಮೇಘನಾ ಹಾಗೂ ಅಪಾರ ಅಭಿಮಾನಿಗಳು ಚಿರು ಅಗಲಿದ್ದಾರೆ.