ಆರ್‌ಆರ್‌ ನಗರ ಚುನಾವಣೆ ನಂತರ ನಟ ದರ್ಶನ್‌ ಹಾಗೂ ರಾಜಕಾರಣಿಯಾದ ನಟ ಬಿ.ಸಿ. ಪಾಟೀಲ್‌ ಅವರನ್ನು ಭೇಟಿ ಮಾಡಿದ್ದಾರೆ. ಕೆಲವು ಸಮಯಗಳ ಕಾಲ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಇಬ್ಬರನ್ನು ಒಟ್ಟಾಗಿ ನೋಡಿದ ಅಭಿಮಾನಿಗಳು ಯಾವುದೋ ಥ್ರಿಲ್ಲಿಂಗ್ ವಿಚಾರ ಕಾದಿದೆ ಎನ್ನುತ್ತಿದ್ದಾರೆ.

ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟ ಡಿ-ಬಾಸ್ ವಿರುದ್ಧ ದೂರು! 

ಆರ್‌ಆರ್‌ ನಗರ ಉಪಚುನಾವಣೆಯಲ್ಲಿ ದರ್ಶನ್‌, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ಮಾಡುವಾಗ ರಾಜಕೀಯ ನಾಯಕ ಬಿ.ಸಿ. ಪಾಟೀಲ್‌ ಕೂಡ ಜೊತೆಗಿದ್ದರು. ಅಲ್ಲದೇ ಕಳೆದ ವರ್ಷ ನಡೆದ ರಾಷ್ಟ್ರೀಯ ಯುವ ಉತ್ಸವದಲ್ಲಿ ದಚ್ಚು 'ಇಳಕಲ್ ಸೀರೆ ಅಂದ್ರೆ ಬಿ.ಸಿ. ಪಾಟೀಲ್ ನೆನಪಾಗುತ್ತಾರೆ' ಎಂದು ವೇದಿಕೆ ಮೇಲೆ ನೆನಪಿಸಿಕೊಂಡಿದ್ದರು.

ಫೋಟೋದಲ್ಲಿ ಪಾಟೀಲ್ ಹಾಗೂ ದರ್ಶನ್‌ ಜೊತೆ ಸಚಿವ ಎಸ್‌ ಟಿ ಸೋಮಶೇಖರ್‌ ಕೂಡ ಇದ್ದರು. ಎಲ್ಲರೂ ಒಟ್ಟಾಗಿ ಸೇರಿ ರಾಜಕೀಯ ಬೆಳವಣಿಗೆ ಹಾಗೂ ಸಿನಿಮಾ ಕ್ಷೇತ್ರದ ಬಗ್ಗೆ ಚರ್ಚಿಸಿದ್ದಾರೆ. ಇನ್ನು ಬಿಸಿ ಪಾಟೀಲ್‌ ಮತ್ತೆ ಸಿನಿಮಾ ಮಾಡುವ ಮನಸ್ಸು ಮಾಡಿದ್ದು, ದರ್ಶನ್‌ ಜೊತೆ  ಕೈ ಜೋಡಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. 

ದರ್ಶನ್‌ ಹಾಗೂ ನಿಖಿಲ್‌ ನಡುವೆ ಏನಾಗಿದೆ?; ವೈರತ್ವಕ್ಕೆ ಉತ್ತರ ಸಿಕ್ತು! 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲರೊಟ್ಟಿಗೆ ಉತ್ತಮ ಸಂಬಂಧ ಹೊಂದಿರುವುದನ್ನು ನೋಡಿ ಅಭಿಮಾನಿಗಳು ಕಾಮೆಂಟ್‌ ಮೂಲಕ ಸಂತಸ ವ್ಯಕ್ತ ಪಡಿಸಿದ್ದಾರೆ.