ಕೆಲವು ವರ್ಷಗಳಿಂದ ಮೂರನೆಯ ಆದಾಯದ ಮೂಲವಾಗಿ ಓಟಿಟಿ ಹಕ್ಕು ಬಂತು. ಈಗ ಥೇಟರ್ ಕಲೆಕ್ಷನ್, ಓಟಿಟಿ ಹಕ್ಕು, ಸ್ಯಾಟಲೈಟ್ ಹಕ್ಕು ಮೂರನ್ನೂ ಕಳೆದುಕೊಂಡು ಸರ್ಕಾರದ ಸಬ್ಸಿಡಿಯೊಂದನ್ನೇ ನಂಬಬೇಕಾದ ಸ್ಥಿತಿಗೆ ಬಂದಿದೆ.
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಮೂರು ಮಾರುಕಟ್ಟೆಗಳನ್ನು ನಂಬಿಕೊಂಡಿತ್ತು. ಥೇಟರ್ ಕಲೆಕ್ಷನ್, ಸ್ಯಾಟಲೈಟ್ ಹಕ್ಕು, ಡಬ್ಬಿಂಗ್ ರೈಟ್. ಕ್ರಮೇಣ ಥೇಟರ್ ಕಲೆಕ್ಷನ್. ಡಬ್ಬಿಂಗ್ ರೈಟ್- ಎರಡನ್ನೇ ನೆಚ್ಚಿಕೊಳ್ಳುವ ಕಾಲ ಬಂತು. ಕೆಲವು ವರ್ಷಗಳಿಂದ ಮೂರನೆಯ ಆದಾಯದ ಮೂಲವಾಗಿ ಓಟಿಟಿ ಹಕ್ಕು ಬಂತು. ಈಗ ಥೇಟರ್ ಕಲೆಕ್ಷನ್, ಓಟಿಟಿ ಹಕ್ಕು, ಸ್ಯಾಟಲೈಟ್ ಹಕ್ಕು ಮೂರನ್ನೂ ಕಳೆದುಕೊಂಡು ಸರ್ಕಾರದ ಸಬ್ಸಿಡಿಯೊಂದನ್ನೇ ನಂಬಬೇಕಾದ ಸ್ಥಿತಿಗೆ ಬಂದಿದೆ. ಇಂಥ ಹೊತ್ತಲ್ಲಿ ಒಂದು ವಿಚಿತ್ರ ಸಂಗತಿ ನಡೆದುಹೋಗಿದೆ. ಮುಂದೆ ಎಲ್ಲವೂ ಸರಿಹೋಗುತ್ತದೆ.
ಸ್ಯಾಟಲೈಟ್ ಹಕ್ಕುಗಳಿಗೆ ಬೆಲೆ ಬರಲಿದೆ ಎಂದು ನಂಬಿರುವ ಚಿತ್ರರಂಗಕ್ಕೆ ಆಘಾತವಾಗುವ ಸುದ್ದಿ ಇದು. ಕೆಲವು ವರ್ಷಗಳಿಂದ ಚಾನಲ್ಲುಗಳು ಸಿನಿಮಾ ಪ್ರಸಾರ ಹಕ್ಕು ಖರೀದಿಸುವುದು ನಿಂತೇಹೋಗಿದೆ. ಸ್ಟಾರ್ ಸಿನಿಮಾಗಳ ಖರೀದಿಸಲು ಪೈಪೋಟಿ ನಡೆಸುತ್ತಿದ್ದ ಚಾನಲ್ಲುಗಳು ಕೂಡ ಈಗ ಸೋತು ಹಿಂದೆಗೆದಿವೆ. ಈ ಪರಿಸ್ಥಿತಿ ಸುಧಾರಿಸುತ್ತದೆ ಎಂದು ನಂಬಿದವರು ಈ ಸುದ್ದಿ ಕೇಳಿ. ಕನ್ನಡದ ಟಿವಿ ವಾಹಿನಿಯೊಂದು ಒಂದು ರೂಪಾಯಿ ಕೊಟ್ಟು ಒಂದು ಕನ್ನಡ ಸಿನಿಮಾ ಪ್ರಸಾರ ಮಾಡುವ ಹಕ್ಕು ಪಡೆದುಕೊಂಡಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ರುಕ್ಮಿಣಿ ವಸಂತ್ ಈಗ ಪ್ಯಾನ್ ಇಂಡಿಯಾ ಹೀರೋಯಿನ್: ಇಲ್ಲಿದೆ ನಟಿಯ ಸಕ್ಸಸ್ ಸ್ಟೋರಿ!
ದುಡ್ಡೇ ನೀಡದೆ ಹಕ್ಕು ಪಡೆಯಲು ಸಾಧ್ಯವಿಲ್ಲದ ಕಾರಣ ಒಂದು ರೂಪಾಯಿ ಮತ್ತು ಜಿಎಸ್‌ಟಿ ನೀಡಿ ಹಕ್ಕು ಪಡೆದಿದೆ ಎನ್ನಲಾಗಿದೆ. ಎರಡು ಸಲ ಸಿನಿಮಾ ಪ್ರಸಾರ ಮಾಡುವ ಕುರಿತು ಒಪ್ಪಂದ ಆಗಿದೆ. ಸ್ಟಾರ್ ನಟರೊಬ್ಬರ ಶಿಫಾರಸ್ಸಿನ ಮೇಲೆ ವಾಹಿನಿಯವರು ಈ ಸಿನಿಮಾ ಕೊಳ್ಳಲು ಮುಂದಾಗಿದೆ ಮತ್ತು ತನ್ನ ಸಿನಿಮಾ ಮಾರಾಟವಾಗಿದೆ ಎಂದು ಹೇಳಿಕೊಳ್ಳುವ ಪ್ರತಿಷ್ಠೆಯ ಕಾರಣಕ್ಕೋ. ಹೇಗಾದರೂ ಜನ ನೋಡಲಿ ಎಂಬ ಕಾರಣಕ್ಕೋ ಚಿತ್ರತಂಡ ಕೂಡ ಒಂದು ರೂಪಾಯಿಗೆ ಎರಡು ಪ್ರಸಾರದ ಹಕ್ಕು ನೀಡಲು ಒಪ್ಪಿಕೊಂಡಿದೆ.
ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ವ್ಯಾಪಾರ ಮಾಡುವಾಗ ಒಂದು ರುಪಾಯಿ ಕೊಡುತ್ತೀನಿ ಅಂತ ಹೇಳುತ್ತಿದ್ದರು. ಅದರ ಅರ್ಥ ಒಂದು ಕೋಟಿ ಎಂದಾಗಿತ್ತು. ಈಗ ಒಂದು ರುಪಾಯಿ ಅಂದರೆ ಕೇವಲ ಒಂದೇ ರುಪಾಯಿ. ಕಾರ್ಪೊರೇಟ್ ಕಂಪನಿಗಳು ಸದಾ ಹೊಸ ಮಾಡೆಲ್‌ಗಳನ್ನು ಹುಡುಕುತ್ತಾ ಇರುತ್ತವೆ. ಅವರಿಗೆ ಈಗ ಒಂದು ರೂಪಾಯಿ ಮಾಡೆಲ್ ಸಿಕ್ಕಿದ್ದು, ಮುಂದೆ ಈ ಮಾಡೆಲ್‌ಗೆ ಪ್ರತಿಷ್ಠೆಯ ಕಾರಣದಿಂದಲೇ ಜಾಸ್ತಿ ಸಿನಿಮಾಗಳು ದೊರೆಯುವ ಸಾಧ್ಯತೆ ಇದೆ. ಒಂದು ರೂಪಾಯಿಗೆ ಸಿನಿಮಾಗಳು ಸಿಕ್ಕರೆ ದೊಡ್ಡ ಮೊತ್ತಕ್ಕೆ ಸ್ಯಾಟಲೈಟ್ ಹಕ್ಕು ಮಾರಾಟವಾಗುವುದು ಕಷ್ಟ. ಇದರಿಂದ ಸಣ್ಣ ಸಿನಿಮಾಗಳಿಗೆ ಏಟು ಬೀಳಲಿದೆ.
ಸ್ಲಾಟ್ ಮಾರಾಟ: ಹಿಂದೆ ದೂರದರ್ಶನ ಟೈಮ್ ಸ್ಲಾಟುಗಳನ್ನು ಮಾರಾಟ ಮಾಡುತ್ತಿತ್ತು. ಅಂದರೆ ಅರ್ಧ ಗಂಟೆಯನ್ನು ಇಂತಿಷ್ಟು ಮೊತ್ತ ಕೊಟ್ಟು ಖರೀದಿಸಿ, ಅಲ್ಲಿ ಧಾರಾವಾಹಿ ಪ್ರಸಾರ ಮಾಡಿ, ಅದರ ಜನಪ್ರಿಯತೆಯ ಮೇಲೆ ಜಾಹೀರಾತು ಕೂಡ ಸಂಗ್ರಹಿಸುವ ಯೋಜನೆ ಜಾರಿಯಲ್ಲಿತ್ತು. ಈಗ ಖಾಸಗಿ ಟಿವಿ ವಾಹಿನಿಯೊಂದು ಸಿನಿಮಾ ಖರೀದಿಸುವ ಬದಲಿಗೆ ಸಿನಿಮಾ ತಂಡಕ್ಕೆ ಸ್ಲಾಟ್ ಕೊಡುವ ಕುರಿತೂ ಆಲೋಚಿಸುತ್ತಿದೆ ಎನ್ನಲಾಗಿದೆ. ಮೂರು ಗಂಟೆ ಸ್ಲಾಟ್ ಅನ್ನು ದುಡ್ಡು ಕೊಟ್ಟು ಖರೀದಿಸಿ.
ಸುದೀಪ್ ರೆಡ್ಡಿ ವಂಗಾ ಸ್ಪಿರಿಟ್ ಟೀಮ್‌ನಿಂದ ದೀಪಿಕಾ ಪಡುಕೋಣೆ ಔಟ್: ಕಾರಣವೇನು ಗೊತ್ತಾ?
ನೀವೇ ಎಷ್ಟು ಬೇಕಾದರೂ ಜಾಹೀರಾತು ಹಾಕಿಕೊಳ್ಳಿ ಎಂಬ ದೂರದರ್ಶನ ಮಾಡೆಲ್ ಅನ್ನು ಜಾರಿಗೆ ತರುವ ಸಾಧ್ಯತೆ ಹೆಚ್ಚಿದೆ ಎಂದು ಟಿವಿ ಜಗತ್ತು ಬಲ್ಲ ಮೂಲಗಳು ಹೇಳುತ್ತಿವೆ. ಹೀಗಾದರೆ ಚಿತ್ರರಂಗದಲ್ಲಿ ಮತ್ತೊಂದು ಬದಲಾವಣೆ ಪರ್ವ ಆರಂಭವಾಗಲಿದೆ. ಅಂದಹಾಗೆ, ಒಂದು ರುಪಾಯಿಗೆ ಮಾರಾಟವಾದ ಕನ್ನಡ ಸಿನಿಮಾ ಯಾವುದು ಎಂದು ತಿಳಿದುಕೊಳ್ಳುವ ಆಸಕ್ತಿಯಿದ್ದರೆ, ಈ ವಾರ ಯಾವ ಚಾನಲ್‌ನಲ್ಲಿ ಪ್ರಸಾರವಾಗುತ್ತದೆ ಎಂದು ಕಾದು ನೋಡಿ! ಅದೇ ಸಿನಿಮಾ ಮತ್ತೆ ಒಂದೇ ಸಲ ಪ್ರಸಾರವಾದರೆ, ಅದನ್ನು ಒಂದು ರುಪಾಯಿ ಸಿನಿಮಾ ಎಂದು ತಿಳಿಯಿರಿ.