- Home
- Entertainment
- Cine World
- ಸುದೀಪ್ ರೆಡ್ಡಿ ವಂಗಾ ಸ್ಪಿರಿಟ್ ಟೀಮ್‌ನಿಂದ ದೀಪಿಕಾ ಪಡುಕೋಣೆ ಔಟ್: ಕಾರಣವೇನು ಗೊತ್ತಾ?
ಸುದೀಪ್ ರೆಡ್ಡಿ ವಂಗಾ ಸ್ಪಿರಿಟ್ ಟೀಮ್‌ನಿಂದ ದೀಪಿಕಾ ಪಡುಕೋಣೆ ಔಟ್: ಕಾರಣವೇನು ಗೊತ್ತಾ?
ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ಅತಿಯಾದ ಬೇಡಿಕೆಯಿಂದ ಬೇಸತ್ತು ಅವರನ್ನು ತಂಡದಿಂದ ಹೊರಹಾಕಲಾಗಿದೆ. ಹೊಸ ನಾಯಕಿಗೆ ಶೋಧ ನಡೆಯುತ್ತಿದೆ.
- FB
- TW
- Linkdin
Follow Us
)
‘ಅನಿಮಲ್’ ಖ್ಯಾತಿಯ ನಿರ್ದೇಶಕ ಸುದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಚಿತ್ರದಿಂದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೊರಬಿದ್ದಿದ್ದಾರೆ.
‘ನಟಿಯ ಅತಿಯಾದ ಬೇಡಿಕೆಯಿಂದ ಬೇಸತ್ತು ಅವರನ್ನು ತಂಡದಿಂದ ಹೊರಹಾಕಲಾಗಿದೆ. ಹೊಸ ನಾಯಕಿಗೆ ಶೋಧ ನಡೆಯುತ್ತಿದೆ’ ಎಂದು ‘ಸ್ಪಿರಿಟ್’ ಸಿನಿಮಾ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
‘ದೀಪಿಕಾ ಅವರು ಸುಮಾರು 40 ಕೋಟಿ ರು.ಗಳಷ್ಟು ಸಂಭಾವನೆ ಪಡೆದಿದ್ದರೂ ಕೇವಲ 6 ಗಂಟೆಯಷ್ಟೇ ಶೂಟ್‌ನಲ್ಲಿ ಭಾಗವಹಿಸುತ್ತಾರಂತೆ, ಸಿನಿಮಾ ಚಿತ್ರೀಕರಣ 100 ದಿನ ದಾಟಿದರೆ ಅವರಿಗೆ ಎಕ್ಸ್ಟ್ರಾ ಸಂಭಾವನೆ ಕೊಡಬೇಕಂತೆ. ನಟಿಯ ಈ ಬೇಡಿಕೆಗಳು ನಿರ್ದೇಶಕ ವಂಗಾ ಅವರಿಗೆ ಬೇಸರ ತರಿಸಿದೆ.
ಹೀಗಾಗಿ ಅವರು ನಿರ್ಮಾಪಕರೊಂದಿಗೆ ಮಾತುಕತೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ’ ಎಂದು ಮೂಲಗಳು ಹೇಳಿವೆ. ‘ಸ್ಪಿರಿಟ್’ ಥ್ರಿಲ್ಲರ್ ಪೊಲೀಸ್ ಸ್ಟೋರಿಯಾಗಿದ್ದು ಪ್ರಭಾಸ್ ನಾಯಕನಾಗಿದ್ದಾರೆ.
ನಟಿ ದೀಪಿಕಾ ಪಡುಕೋಣೆ ಕೂಡ ಈಗ ಮೊದಲಿಗಿಂತ ಹೆಚ್ಚು ಚೂಸಿ ಆಗಿದ್ದಾರೆ. ಅಳೆದು ತೂಗಿ ಪಾತ್ರ ಇಷ್ಟವಾದರೆ ಮಾತ್ರ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಕಾರಣ, ಸಿನಿಮಾ ನಟನೆಗೆ ಬಂದ ಪ್ರಾರಂಭದಲ್ಲಿ ಆಯ್ಕೆಗೆ ಅವಕಾಶ ಇರಲಿಲ್ಲ.
ಬಂದ ಸಿನಿಮಾಗಳನ್ನೆಲ್ಲಾ ಒಪ್ಪಿಕೊಂಡು ಮಾಡುವ ಅನಿವಾರ್ಯತೆ ಇರುತ್ತಿತ್ತು. ಆದರೆ ಈಗ ಹಾಗಲ್ಲ, ಇಷ್ಟವಾದರೆ ಮಾತ್ರ ಒಪ್ಪಿಕೊಂಡು ಮಾಡುವ ಹಂತಕ್ಕೆ ಬೆಳೆದಿದ್ದಾರೆ. ಸದ್ಯ ಅವರು ನಟ ಶಾರುಖ್ ಖಾನ್ ಹಾಗೂ ಪ್ರಭಾಸ್ ಜೋಡಿಯಾಗಿ ಮಾತ್ರ ಸಿನಿಮಾ ಮಾಡುವ ಹಂತಕ್ಕೆ ಬಂದಿದ್ದಾರೆ.