ಈ ಹಿಂದೆ ‘ಆಸ್ಕರ್’ ಹೆಸರಿನಲ್ಲಿ ಸಿನಿಮಾ ಮಾಡಿ ಗಮನ ಸೆಳೆದಿದ್ದ ಆಸ್ಕರ್ ಕೃಷ್ಣ ಅವರ ಮತ್ತೊಂದು ಸಿನಿಮಾ ‘ಚಡ್ಡಿದೋಸ್ತ್’. ಈ ಚಿತ್ರಕ್ಕೆ ಬಹುತೇಕ ಶೂಟಿಂಗ್ ಮುಕ್ತಾಯದ ಹಂತಕ್ಕೆ ಬಂದಿದ್ದೆ.
ನಿರ್ದೇಶನದ ಜತೆಗೆ ತಾನೇ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದಾರೆ ಆಸ್ಕರ್ ಕೃಷ್ಣ. ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುವ ಜತೆಗೆ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ನಟ ಲೋಕೇಂದ್ರ ಸೂರ್ಯ. ಮಲಯಾಳಂ ಬೆಡಗಿ ಗೌರಿ ನಾಯರ್ ಚಿತ್ರದ ನಾಯಕಿಯಾಗಿ ಪಾತ್ರ ನಿರ್ವಹಿಸಿದ್ದು, ನಿರ್ಮಾಪಕ ಸೆವೆನ್ ರಾಜ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ವಸಿಷ್ಠ ಸಿಂಹನ ಕಾಲಚಕ್ರದ ಹಾಡು;ಕೈಲಾಶ್ ಕೇರ್ ಹಾಡಿನ ಹಂಗಾಮ!
ಜತೆಗೆ ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದಾರೆ. ನಿರ್ದೇಶನದ ನಟನೆ, ನಿರ್ಮಾಣದ ಜತೆಗೂ ಅಭಿನಯ, ಬರವಣಿ ಹಾಗೂ ನಟನೆ ಹೀಗೆ ಒಬ್ಬರಿಂದಲೇ ಎರಡೆರಡು ಪಾತ್ರಗಳನ್ನು ಮಾಡಿಸಿರುವ ‘ಚಡ್ಡಿದೋಸ್‌್ತ’ ಚಿತ್ರ ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಲಿದೆ.
ಬೆಂಗಳೂರು, ಕುಣಿಗಲ್ ಮುಂತಾದ ಕಡೆ ಚಿತ್ರೀಕರಣ ಮಾಡಿಕೊಂಡು ಬಂದಿರುವ ಈ ಚಿತ್ರಕ್ಕೆ ಗಗನ ಕುಮಾರ್ ಕ್ಯಾಮೆರಾ, ಅನಂತ್ ಆರ್ಯನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಉಳಿದಂತೆ ಮರಿಸ್ವಾಮಿ ಸಂಕಲನ, ವೈಲೆಂಟ್ ವೇಲು ಸಾಹಸ ನಿರ್ದೇಶನ, ಅಕುಲ… ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ‘ಎಲ್ಲ ವರ್ಗದ ಪ್ರೇಕ್ಷಕರು ನೋಡುವಂತಹ ಸಿನಿಮಾ.
ಐಶ್ವರ್ಯಾಳ ಅಣ್ಣನಾಗಿ ನಟಿಸಲು ಕೇಳಿದಾಗ, ಹೇಗಿತ್ತು ಸಲ್ಮಾನ್ ರಿಯಾಕ್ಷನ್?
ಹಾಸ್ಯ, ಪ್ರೇಮ ಹಾಗೂ ಭಾವುಕ ಸನ್ನಿವೇಶಗಳೇ ಚಿತ್ರದ ಕಥಾವಸ್ತು. ಹೀಗಾಗಿ ಎಲ್ಲರಿಗೂ ಈ ಸಿನಿಮಾ ಇಷ್ಟವಾಗುತ್ತದೆಂಬ ನಂಬಿಕೆ ಇದೆ. ಕೊರೋನಾ, ಲಾಕ್‌ಡೌನ್ ಕಾರಣಕ್ಕೆ ಚಿತ್ರೀಕರಣ ಕೆಲಸ ಮುಗಿಸುವುದು ತಡವಾಯಿತು. ಇಲ್ಲದಿದ್ದರೆ ಈ ಹೊತ್ತಿಗೆ ಸಿನಿಮಾ ಬಿಡುಗಡೆ ಹಂತಕ್ಕೆ ಬರುತ್ತಿತ್ತು. ಈಗ ತಡವಾದರೂ ಅಂದುಕೊಂಡಂತೆ ಸಿನಿಮಾ ಮೂಡಿ ಬಂದಿದೆ’ ಎನ್ನುತ್ತಾರೆ ನಿರ್ದೇಶಕ ಆಸ್ಕರ್ ಕೃಷ್ಣ.
