ಕೇಳುಗರಿಂದ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ ಎಂಬುದು ಚಿತ್ರತಂಡದ ಸಂಭ್ರಮದ ಮಾತು. ಈಗಾಗಲೇ ಚಿತ್ರದ ಪೋಸ್ಟರ್‌ಗಳಿಂದ ಸಾಕಷ್ಟುಗಮನ ಸೆಳೆದಿರುವ ವಸಿಷ್ಠ ಸಿಂಹ ಅವರು ಈ ಚಿತ್ರದ ಟೀಸರ್‌ ಕೂಡ ದೊಡ್ಡ ಮಟ್ಟದಲ್ಲಿ ವೀಕ್ಷಣೆ ಆಗಿದ್ದು, ಹಾಡುಗಳಿಗೂ ಇದೇ ರೀತಿ ಪ್ರತಿಕ್ರಿಯೆ ಬರಲಿದೆ ಎನ್ನುವ ಭರವಸೆಯಲ್ಲಿದೆ ಚಿತ್ರತಂಡ. ಲಾಕ್‌ಡೌನ್‌ಗೂ ಮೊದಲೇ ಸುದೀಪ್‌ ಅವರ ಚಿತ್ರದ ಟೀಸರ್‌ ಬಿಡುಗಡೆ ಮಾಡಿದ್ದರು.

ಮೊಬೈಲ್ ಬಳಸದ ನಟನಿಗೆ ಹುಡುಗಿಯರು ಪ್ರಪೋಸ್ ಮಾಡೋದ್ಹೇಗೆ? ಈ ವಿಡಿಯೋ ನೋಡಿ!

ರಶ್ಮಿ ಫಿಲಂಸ್‌ ಮೂಲಕ ರಶ್ಮಿ ಕೆ ಅವರು ನಿರ್ಮಿಸಿರುವ ‘ಕಾಲಚಕ್ರ’ ಚಿತ್ರದ ‘ತರಗೆಲೆ’ ಹಾಡಿಗೆ ಕೇಳುಗರಿಂದ ಮೆಚ್ಚುಗೆ ಸಿಗುತ್ತಿದೆ. ಸಂತೋಷ್‌ ನಾಯಕ್‌ ಈ ಹಾಡನ್ನು ರಚನೆ ಮಾಡಿದ್ದು, ಗಾಯಕ ಕೈಲಾಶ್‌ ಕೇರ್‌ ಅವರ ಕಂಠದಲ್ಲಿ ಹಾಡಿನ ಸಾಲುಗಳು ಮೂಡಿ ಬಂದಿವೆ. ಗುರುಕಿರಣ್‌ ಅವರು ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಈ ಹಿಂದೆ ‘ನಾಣಿ’ ಹೆಸರಿನ ಚಿತ್ರವನ್ನು ನಿರ್ದೇಶಿಸಿದ ಸುಮಂತ್‌ ಕ್ರಾಂತಿ ಅವರ ಎರಡನೇ ಸಿನಿಮಾ ಈ ‘ಕಾಲಚಕ್ರ’. ವಸಿಷ್ಠ ಸಿಂಹ ಅವರು ಇಲ್ಲಿ ಎರಡು ರೀತಿಯ ಪಾತ್ರ ಮಾಡುತ್ತಿದ್ದಾರೆ. ವಯಸ್ಸಾದ ಅಜ್ಜನಾಗಿ, ಈಗಿನ ಯಂಗ್‌ ಜನರೇಷನ್‌ ಪಾತ್ರ ಅವರಿಗೆ ಸಾಕಷ್ಟುಹೆಸರು ತಂದುಕೊಡುತ್ತದೆಂಬ ನಂಬಿಕೆ ನಿರ್ದೇಶಕರದ್ದು. ಸೈಕಲಾಜಿಕಲ… ಕಥಾ ಹಂದರವಿರುವ ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಎಲ… ಎಂ ಸೂರಿ ಛಾಯಾಗ್ರಹಣ, ಬಿ ಎ ಮಧು ಸಂಭಾಷಣೆ ಈ ಚಿತ್ರಕ್ಕಿದೆ. ರಕ್ಷ, ದೀಪಕ್‌ ಶೆಟ್ಟಿ, ಸುಚೇಂದ್ರ ಪ್ರಸಾದ್‌ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.