ಐಶ್ವರ್ಯಾಳ ಅಣ್ಣನಾಗಿ ನಟಿಸಲು ಕೇಳಿದಾಗ, ಹೇಗಿತ್ತು ಸಲ್ಮಾನ್ ರಿಯಾಕ್ಷನ್?
ಸಲ್ಮಾನ್ ಖಾನ್, ಐಶ್ವರ್ಯಾ ರೈ ಪ್ರೇಮಕಥೆ ಎಲ್ಲರಿಗೂ ತಿಳಿದೆ ಇದೆ. ಅವರ ಅನ್ ಸ್ಕ್ರೀನ್ ಹಾಗೂ ಅಫ್ ಸ್ಕ್ರೀನ್ ಪ್ರೀತಿಗೆ ಫ್ಯಾನ್ಸ್ ಸೇರಿ ಬಾಲಿವುಡ್ ಸಹ ಫಿದಾ ಆಗಿತ್ತು. ಅವರ ಲವ್‌ಸ್ಟೋರಿ ಚಾಲ್ತಿಯಲ್ಲಿದಾಗಲೇ ಒಬ್ಬ ಸಿನಿಮಾ ನಿರ್ಮಾಪಕರು ಸಲ್ಮಾನ್ ಖಾನ್‌ರನ್ನು ಐಶ್ವರ್ಯಾ ರೈ ಅಣ್ಣನಾಗಿ ನಟಿಸಲು ಕೇಳಿದ್ದರು. ಹೇಗಿತ್ತು ಸಲ್ಲುವಿನ ರಿಯಾಕ್ಷನ್?
ಜೋಶ್ ಚಿತ್ರದಲ್ಲಿ ಐಶ್ವರ್ಯಾ ಸಹೋದರನ ಪಾತ್ರದಲ್ಲಿ ನಟಿಸಲು ಸಲ್ಮಾನ್ ಖಾನ್ ಅವರನ್ನು ಕೇಳಲಾಯಿತು, ಇದಕ್ಕೆ ಸಲ್ಮಾನ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? ನಂತರ ಆ ರೋಲ್ ಶಾರುಖ್ ಖಾನ್ ನಿರ್ವಹಿಸಿದರು.
2000ರ ದಶಕದ ಆರಂಭದಲ್ಲಿ, ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಸಂಬಂಧದಿಂದಾಗಿ ಹೆಡ್‌ಲೈನ್‌ಗಳಲ್ಲಿ ಕಾಣಿಸಿಕೊಂಡಿದ್ದರು.
ಸಲ್ಮಾನ್ ಹಮ್ ದಿಲ್ ದೆ ಚುಕೆ ಸನಮ್ ಕೋ ಸ್ಟಾರ್ ಅನ್ನು ಪ್ರೀತಿಸುತ್ತಿದ್ದರು. ಹಾಗೇ ಐಶ್ ಕೂಡ ನಟನನ್ನು ತುಂಬಾ ಇಷ್ಟಪಡುತ್ತಿದ್ದರು.
ಬ್ಲಾಕ್ ಬಸ್ಟರ್ ಹಮ್ ದಿಲ್ ದೆ ಚುಕೆ ಸನಮ್ ಚಿತ್ರದ ಶೂಟಿಂಗ್ ಸಮಯದಲ್ಲಿ ಅವರ ಆಫೇರ್ ಶುರುವಾಯಿತು. ಆ ಸಿನಿಮಾ ಬಾಲಿವುಡ್‌ನ ಬೆಸ್ಟ್ ಸಿನಿಮಾಗಳಲ್ಲಿ ಒಂದು.
ಅದರ ನಂತರ ಸಲ್ಮಾನ್-ಐಶ್ವರ್ಯಾ ಅನೇಕ ಚಲನಚಿತ್ರಗಳಲ್ಲಿ ಲೀಡ್ ರೋಲ್‌ಗಳನ್ನು ನೀಡಲಾಗುತ್ತಿತ್ತು.
ಈ ಕಪಲ್ ಮದುವೆಯಾಗಲಿದ್ದಾರೆಎಂಬ ರೂಮರ್ ಸಹ ಇತ್ತು. ಅತಂಹ ಸಮಯದಲ್ಲಿ ತೆರೆಯ ಮೇಲೆ ಅಣ್ಣ ತಂಗಿ ಪಾತ್ರವನ್ನು ಇವರಿಗೆ ಆಫರ್ ಮಾಡಲಾಗಿತ್ತು.
ಆದರೆ ಆಶ್ಚರ್ಯಕರ ಸಂಗತಿ ಎಂದರೆ ಒಬ್ಬ ಚಲನಚಿತ್ರ ನಿರ್ಮಾಪಕರು ಸಲ್ಮಾನ್‌ರಿಗೆ ಅವರ ಅಂದಿನ ಗರ್ಲ್‌ಫ್ರೆಂಡ್ ಐಶ್ವರ್ಯಾರ ಅಣ್ಣನಾಗಿ ಸಿನಿಮಾದಲ್ಲಿ ನಟಿಸಲು ಪ್ರಸ್ತಾಪಿಸಿದ್ದರು.
2000 ರ ಸಿನಿಮಾ ಜೋಶ್ ನಿರ್ದೇಶಕ ಮನ್ಸೂರ್ ಖಾನ್ ಸಲ್ಮಾನ್ ಅವರಿಗೆ ಐಶ್ವರ್ಯಾರ ರೌಡಿ ಸಹೋದರನಾಗಿ ನಟಿಸುವ ಅವಕಾಶವನ್ನು ನೀಡಿದರು. ಅದನ್ನು ತಿಳಿದ ಸಲ್ಮಾನ್, ಐಶ್ ಸಹೋದರನಾಗಿ ನಟಿಸುವ ಆಲೋಚನೆಯಿಂದ ಆಶ್ಚರ್ಯಚಕಿತರಾದರು. ನಂತರ, ಶಾರುಖ್ ಖಾನ್ ಈ ಪಾತ್ರವನ್ನು ವಹಿಸಿಕೊಂಡರು ಎಂದು ಐಬಿಟೈಮ್ಸ್ ವರದಿ ಮಾಡಿತ್ತು.
'ಆ ಪಾತ್ರಕ್ಕೆ ಒಂದು ಹಂತದಲ್ಲಿ ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಆಗಿರಬೇಕು ಎಂದು ನಾನು ಭಾವಿಸಿದ್ದೆ. ಅಂತಿಮವಾಗಿ ಅದು ಶಾರುಖ್ ಎಂದು ಡಿಸೈಡ್ ಆಯಿತು ಮತ್ತು ಅಮೀರ್ ಚಂದ್ರಚೂರು (ಸಿಂಗ್) ಪಾತ್ರವನ್ನು ನಿರ್ವಹಿಸಬೇಕಾಗಿತ್ತು. ಪಾತ್ರವರ್ಗವು ವಿಭಿನ್ನ ಹಂತಗಳಲ್ಲಿ ಬದಲಾಗುತ್ತಲೇ ಇತ್ತು. ಹಾಗಾಗಿ ಮನ್ಸೂರ್‌ಗೆ ಎಸ್ ಎಂದು ಹೇಳಿದ್ದೆ.' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು ಐಶ್ವರ್ಯಾ.
ಇಲ್ಲಿಯವರೆಗೆ, ಐಶ್ವರ್ಯಾ ಮತ್ತು ಸಲ್ಮಾನ್ ಎಂದಿಗೂ ಎದುರು ಬದುರಾಗಿಲ್ಲ, ಏಕೆಂದರೆ ಅವರ ಬ್ರೇಕ್‌ಅಪ್ ಅಸಹ್ಯ ಮತ್ತು ಬಾಲಿವುಡ್‌ನ ಹೆಚ್ಚು ಚರ್ಚಿಸಲ್ಪಟ್ಟ ವಿವಾದಗಳಲ್ಲಿ ಒಂದು.