Asianet Suvarna News Asianet Suvarna News

ಒಂದೇ ಶೇಡ್‌ಗೆ ತೂಕ ಹೆಚ್ಚು ಮತ್ತೊಂದರಲ್ಲಿ ಕಡಿಮೆ, ನಾನು ಐಟಿ ಕೆಲಸ ಮಾಡಿರುವೆ: ನಟಿ ಬೃಂದಾ ಆಚಾರ್ಯ

ಪ್ರೇಮಂ ಪೂಜ್ಯಂ ಚಿತ್ರದ ಮೂಲಕ ಬೆಳ್ಳಿ ಜರ್ನಿ ಆರಂಭಿಸುತ್ತಿರುವ ಐಟಿ ಉದ್ಯಮಿ. ಧಾರವಾಹಿಯೇ ಇದಕ್ಕೆ ಕಾರಣ.....

Kannada Brinda Acharya talks about debut film premam poojayam vcs
Author
Bangalore, First Published Nov 7, 2021, 1:34 PM IST
  • Facebook
  • Twitter
  • Whatsapp

ನವೆಂಬರ್ (November) ತಿಂಗಳು ಕನ್ನಡ ಚಿತ್ರರಂಗಕ್ಕೆ (Sandalwood) ಹಬ್ಬವಿದ್ದಂತೆ. ಸುಮಾರು 10 ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ. ಇದರ ಪೈಕಿ ನೆನಪಿರಲಿ ಪ್ರೇಮ್ (Prem Nenapirali) ನಟನೆಯ ಪೇಮಂ ಪೂಜ್ಯಂ (Premam Poojyam) ಸಿನಿಮಾ ಕೂಡ ಒಂದು. ಈಗಾಗಲೇ ಹಾಡುಗಳು ಮತ್ತು ಪೋಸ್ಟರ್ ಮೂಲಕ ಕನ್ನಡಿಗರ ಗಮನ ಸೆಳೆದಿರುವ ಈ ಚಿತ್ರ ಇದೇ ನವೆಂಬರ್ 12ರಂದು ಬಿಡುಗಡೆ ಆಗುತ್ತಿದೆ. ಧಾರವಾಹಿ ಮೂಲಕ ಗಮನ ಸೆಳೆದಿರುವ ಬೃಂದಾ ಆಚಾರ್ಯ (Brunda Acharya) ಈ ಚಿತ್ರದ ಮೂಲಕ  ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. 

'ಚಿತ್ರದಲ್ಲಿ ನನ್ನ ಪಾತ್ರಕ್ಕೆ ಎರಡು ಶೇಡ್‌ ಇದೆ. ನಿರ್ದೇಶಕರು (Director) ಹೇಳಿದ ಪ್ರಕಾರ ನಾನು ಒಂದು ಶೇಡ್‌ಗೆ ತೂಕ ಹೆಚ್ಚಿಸಿಕೊಳ್ಳಬೇಕು ಮತ್ತೊಂದು ಶೇಡ್‌ಗೆ ತೂಕ ಇಳಿಸಿಕೊಳ್ಳಬೇಕು. ಪಾತ್ರದ ಬಗ್ಗೆ ಹೆಚ್ಚಾಗಿ ರಿವೀಲ್ ಮಾಡೋಕೆ ಆಗಲ್ಲ ಆದರೆ ಇದು ಸುಮಾರು 20 ವರ್ಷಗಳ ಜರ್ನಿ ಅಂತೆ. ಈ ಚಿತ್ರದಲ್ಲಿ ನನ್ನ ಡೆಬ್ಯೂ (Debut) ಆಗಿರುವುದಕ್ಕೆ ನನಗೆ ಖುಷಿಯಾಗಿದೆ.' ಎಂದು ಖಾಸಗಿ ಸಂದರ್ಶನದಲ್ಲಿ ಮಾತನಾಡಿರುವ ಬೃಂದಾ ವಿದೇಶದಲ್ಲಿ (Vietnam) ಚಿತ್ರೀಕರಣ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 

Master Anand ಕಮ್‌ಬ್ಯಾಕ್: ಪ್ರೀತಿಯಷ್ಟೇ ಸ್ನೇಹಾನೂ ಮುಖ್ಯ ಎಂದ ನಟ

'ಪ್ರೇಮ್ ಅವರು ನಿಜಕ್ಕೂ ಜೆಂಟಲ್‌ಮ್ಯಾನ್ (Gentalman) ತುಂಬಾನೇ ಸಪೋರ್ಟ್ ಮಾಡುತ್ತಾರೆ. ಅವರು ಟೆನ್ಶನ್ ಮಾಡಿಕೊಳ್ಳುವುದಿಲ್ಲ ತುಂಬಾನೇ ಕೂಲ್ (Cool) ಆಗಿರುವ ವ್ಯಕ್ತಿ. ಕ್ಯಾಮೆರಾ ಮುಂದೆ ಕ್ಯಾಮೆರಾ (Camera) ಹಿಂದೆ ಅವರ ಬಗ್ಗೆ ನಾನು ತುಂಬಾನೇ ಕಲಿತಿರುವೆ. ನನ್ನ ಭಾಗ ಚಿತ್ರೀಕರಣ ಇಲ್ಲದಿದ್ದರೂ ನಾನು ಸೆಟ್‌ನಲ್ಲಿರುತ್ತಿದ್ದೆ. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಫ್ಯಾಮಿಲಿಯಿಂದ ನಾನು ಬಂದಿರುವುದು. ನನ್ನ ಪೋಷಕರಿಬ್ಬರು ಟೀಚರ್‌ಗಳು (Teacher). ಬಾಲ್ಯದಿಂದಲೂ ನಾನು ಆರ್ಟ್ಸ್‌ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದೆ.  ಇಂಜಿನಿಯರಿಂಗ್ (Engineering) ಮುಗಿಸಿದ ನಂತರ ನಾನು ಎಲ್ಲರಂತೆ ಕಾರ್ಪೋರೇಟ್ ಕೆಲಸ ಮಾಡಿರುವೆ. ಆದರೂ ಇರಲಿ ಒಂದು ಲಕ್ ಟ್ರೈ ಮಾಡೋಣ ಎಂದು ಧಾರವಾಹಿ ಆಡಿಷನ್‌ನಲ್ಲಿ (Audition) ಭಾಗಿಯಾಗಿದ್ದೆ' ಎಂದು ಬೃಂದಾ ಮಾತನಾಡಿದ್ದಾರೆ.

ಶಿವಣ್ಣನಿಗಾಗಿ 'ಪ್ರೇಮಂ ಪೂಜ್ಯಂ' ತ್ಯಾಗ: ನವೆಂಬರ್ 12ರಂದು ತೆರೆಗೆ

'ಕಾರ್ಪೋರೇಟ್ ಕೆಲಸ (Corporate work) ಮಾಡುತ್ತಲೇ ನಾನು ಮಹಾಕಾಳಿ (Mahakali) ಧಾರಾವಾಹಿಯಲ್ಲಿ ನಟಿಸಿದೆ. ಆನಂತರ ನಮ್ಮ ನಿರ್ದೇಶಕರು ಮತ್ತೊಂದು ಧಾರವಾಹಿ ಶನಿಗೆ (Shani) ಆಫರ್ ನೀಡಿದ್ದರು. ಇದು ಪ್ರಮುಖ ಪಾತ್ರವಾಗಿತ್ತು. ಸಬ್ಯಾಟಿಕಲ್ ರಜೆ ತೆಗೆದುಕೊಂಡು ಚಿತ್ರೀಕರಣ ಮುಗಿಸಿ ಮತ್ತೆ ಕಾರ್ಪೋರೇಟ್ ಕೆಲಸ ಶುರು ಮಾಡಿದೆ. ಈಗ ಪ್ರೇಮಂ ಪೂಜ್ಯಂ ಸಿನಿಮಾ ನನ್ನ ಜರ್ನಿಗೆ ದೊಡ್ಡ ತಿರುವು ನೀಡಲಿದೆ' ಎಂದಿದ್ದಾರೆ.

Follow Us:
Download App:
  • android
  • ios