Asianet Suvarna News Asianet Suvarna News

#MeToo Case:ಅರ್ಜುನ್‌ ಸರ್ಜಾಗೆ ಕ್ಲೀನ್ ಚಿಟ್, ಸರ್ಜಾ ಕುಟುಂಬಸ್ಥರ ಪೋಸ್ಟ್‌ ಇದು!

ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಬಿ ರಿಪೋರ್ಟ್‌ ಸಲ್ಲಿಸಿದ ಕಬ್ಬನ್ ಪಾರ್ಕ್ ಪೊಲೀಸರು. ಸರ್ಜಾ ಕುಟುಂಬಸ್ಥರ ಸೋಷಿಯಲ್ ಮೀಡಿಯಾ ಸ್ಟೇಟಸ್ ವೈರಲ್... 

Kannada Arjun Sarja Sruthi Hariharan me too case police submit B reports to magistrate court vcs
Author
Bangalore, First Published Nov 30, 2021, 4:45 PM IST
  • Facebook
  • Twitter
  • Whatsapp

2018ರಲ್ಲಿ ಇಡೀ ಕರ್ನಾಟಕಕ್ಕೆ (Karnataka) ಶಾಕ್ ತಂದುಕೊಟ್ಟ ವಿಚಾರವೇ ಶ್ರುತಿ ಹರಿಹರನ್ (Sruthi Hariharana) ಮೀ ಟೂ ಆರೋಪ. ಭಾರತೀಯ ಹೆಣ್ಣು ಮಕ್ಕಳು ತಾವು ಲೈಂಗಿಕ ಶೋಷಣೆಗೆ ಗುರುಯಾಗಿರುವುದರ ಬಗ್ಗೆ #MeToo ಅಭಿಯಾನದ ಮೂಲಕ ನೋವನ್ನು ಹಂಚಿಕೊಂಡದ್ದರು. ಈ ವೇಳೆ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದ ನಟಿ ಶ್ರುತಿ ಹರಿಹರನ್ ಕೂಡ ತಮ್ಮ ಧ್ವನಿ ಎತ್ತಿದ್ದರು. ಆರಂಭದಲ್ಲಿ ಬೆಂಬಲವಿಲ್ಲದೆ ಒಂಟಿಯಾಗಿ ಹೋರಾಡಿದ್ದ ನಟಿಗೆ ಚಿತ್ರರಂಗದ ಆಪ್ತರು ಮತ್ತು ಸ್ನೇಹಿತರಿಂದ ಸಾಥ್ ಸಿಕ್ಕಿತ್ತು. ಆದರೀಗ ಶ್ರುತಿ ಹಾಕಿದ ಕೇಸ್‌ಗೆ ಯಾವುದೇ ಸಾಕ್ಷಿ ಇಲ್ಲದ ಕಾರಣ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು (Police) ಬಿ ರಿಪೋರ್ಟ್ ಸಲ್ಲಿಸಿದ್ದಾರೆ.

ವಿಸ್ಮಯ (Vismaya) ಚಿತ್ರದಲ್ಲಿ ಅರ್ಜುನ್ ಸರ್ಜಾ (Arjun Sarja) ಮತ್ತು ಶ್ರುತಿ ಹರಿಹರನ್ ಜೋಡಿಯಾಗಿ ಅಭಿನಯಿಸಿದ್ದಾರೆ. ಥ್ರಿಲಿಂಗ್ ಕ್ರೈಮ್ (Thriller Crime) ಸಿನಿಮಾ ಇದಾಗಿದ್ದು, ಯಾವುದೇ ತಪ್ಪು ಸಂದೇಶ ಸಾರುವ ವಿಚಾರಗಳನ್ನು ತೋರಿಸಿಲ್ಲ ಎಂದು ಚಿತ್ರತಂಡ ಮಾತನಾಡಿತ್ತು. ಆದರೆ ಸಣ್ಣ ರೊಮ್ಯಾನ್ (Romance) ದೃಶ್ಯ ಚಿತ್ರೀಕರಣದಲ್ಲಿ ಅರ್ಜುನ್ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಶ್ರುತಿ ಆರೋಪ ಮಾಡಿದ್ದರು. ಹೀಗಾಗಿ  ಬೆಂಗಳೂರಿನ (Bengaluru) ಹಲವು ಪೊಲೀಸ್ ಠಾಣೆಗಳಲ್ಲಿ ಶ್ರುತಿ ಹರಿಹರನ್ ದೂರು ದಾಖಲಿಸಿ ವಿಚಾರಣೆಯಲ್ಲಿ ಭಾಗಿಯಾಗುವ ಮೂಲಕ ಮೀ ಟೂ ಆರೋಪ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.  ನಟ ಅಂಬರೀಶ್ (Ambareesh) ಮತ್ತು ಕನ್ನಡ ಚಿತ್ರರಂಗದ ವಾಣಿಜ್ಯ ಮಂಡಳಿಯು ಸಭೆ ನಡೆಸಿ ಸಮಸ್ಯೆಯನ್ನು ರಾಜಿ ಮೂಲಕ ಬಗೆಹರಿಸಲು ಯತ್ನಿಸಿದ್ದರು. ಆದರೆ ಯಾವುದಕ್ಕೂ ಜಗ್ಗದ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Kannada Arjun Sarja Sruthi Hariharan me too case police submit B reports to magistrate court vcs

ಕೆಲವು ದಿನಗಳಿಂದ ಈ ಮೀ ಟೂ ಕೇಸ್ ಮತ್ತೆ ಸುದ್ದಿ ಮಾಡುತ್ತಿದೆ. ಕಬ್ಬನ್ ಪಾರ್ಕ್ ಪೊಲೀಸರು (Cubbon Park Police) ಶ್ರುತಿ ಹರಿಹರನ್‌ಗೆ ನೋಟಿಸ್ ನೀಡುವ ಮೂಲಕ ವಿಚಾರಣೆಯಲ್ಲಿ ಭಾಗಿಯಾಗುವಂತೆ ತಿಳಿಸಿದ್ದರು. ನೋಟಿಸ್ ನೀಡಿ ಮೂರು ದಿನಗಳಲ್ಲಿ ವಿಚಾರಣೆಗೆ ಬಾರದಿದ್ದರೆ, ಯಾವುದೇ ಸಾಕ್ಷಿ ಇಲ್ಲವೆಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಬಿ ರಿಪೋರ್ಟ್ (B report) ಸಲ್ಲಿಸುವುದಾಗಿಯೂ ಹೇಳಿದ್ದರು. ಮೂರು ದಿನ ಕಳಿದರೂ ಶ್ರುತಿ ವಿಚಾರಣೆಯಲ್ಲಿ ಭಾಗಿಯಾಗಿರಲಿಲ್ಲ ಹೀಗಾಗಿ ಕಬ್ಬನ್ ಪಾರ್ಕ್ ಪೊಲೀಸರು ಬಿ-ರಿಪೋರ್ಸ್ ಸಲ್ಲಿಸಿದ್ದಾರೆ. ಈ ಮೂಲಕ ಅರ್ಜುನ್ ಯಾವುದೇ ತಪ್ಪು ಮಾಡಿಲ್ಲ, ಶ್ರುತಿ ಬಳಿ ಸಾಕ್ಷಿ ಇಲ್ಲ ಎಂಬುದು ಸಾಬೀತಾಗಿದೆ. ಬಿ-ರಿಪೋರ್ಟ್‌ ಸಲ್ಲಿಸುವುದೆಂದರೆ ಆರೋಪಿ ಯಾವುದೇ ತಪ್ಪು ಮಾಡಿಲ್ಲ ಎಂದರ್ಥ. 

ಶೂಟಿಂಗ್​ ವೇಳೆ ನಡೆದಿದ್ದೇನು? ವಿಸ್ಮಯ ಛಾಯಾಗ್ರಾಹಕ ಬಿಚ್ಚಿಟ್ಟ ಸತ್ಯ

ಕೋರ್ಟ್‌ಗೆ ಬಿ-ರಿಪೋರ್ಟ್‌ ತಲುಪುತ್ತಿದ್ದಂತೆ, ಅರ್ಜುನ್ ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಅಪ್ಲೋಡ್ ಮಾಡಿರುವ ಸ್ಟೇಟಸ್‌ಗಳು ವೈರಲ್ ಆಗುತ್ತಿವೆ. 'Gentleman always' ಎಂದು ಮೇಘನಾ ರಾಜ್ (Meghana Raj) ಬರೆದುಕೊಂಡು ಅರ್ಜುನ್‌ ಅಂಕಲ್‌ರನ್ನು ಟ್ಯಾಗ್ ಮಾಡಿದ್ದಾರೆ.  'ಧರ್ಮೋ ರಕ್ಷತಿ ರಕ್ಷಿತಃ' ಎಂದು ಧ್ರುವ ಸರ್ಜಾ (Dhruva Sarja) ಮತ್ತು ಪತ್ನಿ ಪ್ರೇರಣಾ ಬರೆದುಕೊಂಡಿದ್ದಾರೆ. ಇನ್ನು ನೆಟ್ಟಿಗರು ಕುತೂಹಲ ಹೆಚ್ಚಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಧ್ರುವ ಸರ್ಜಾ ಹಂಚಿಕೊಂಡಿರುವ ವಿಡಿಯೋ ಮತ್ತಷ್ಟೂ ಆಸಕ್ತಿಕರವಾಗಿದೆ. ತಮ್ಮ ಸೊಳ್ಳೆ ಬ್ಯಾಟ್‌ನಿಂದ ಸೊಳ್ಳೆಗಳನ್ನು ಸಾಯಿಸಿ 'ಸೊಳ್ಳೆ ಕ್ರಿಮಿ ಕೀಟ' ಎಂದು ಬರೆದುಕೊಂಡಿದ್ದಾರೆ. ಇದನ್ನು ಮರು ಹಂಚಿಕೊಂಡು, ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ (Aishwarya Arjun) 'ಎಲ್ಲರೂ ಹೇಳುವ ಹಾಗೆ ಪ್ರತಿಯೊಂದು ಸುಳ್ಳಿಗೂ ಅಲ್ಲೊಂದು ಕರ್ಮ ಇರುತ್ತದೆ,' ಎಂದು ಬರೆದುಕೊಂಡಿದ್ದಾರೆ. 

ನಟ ಚೇತನ್​ ಸಿನಿಮಾ ಜೀವನಕ್ಕೆ ಕುತ್ತು ತಂತು MeToo

'ಸೊಳ್ಳೆ ಕ್ರಿಮಿ ಕೀಟ' ಎಂದು ನೀವು ಯಾರಿಗೆ ಹೇಳಿದ್ದೀರಿ? ಈ ಹಿಂದೆ ಅರ್ಜುನ್ ಪರ ನಡೆದ ಪ್ರೆಸ್‌ಮೀಟ್‌ನಲ್ಲಿ ಆರೋಪ ಮಾಡಿದ ವ್ಯಕ್ತಿಗಳನ್ನು ಕ್ರಿಮಿ ಕೀಟ ಎಂದು ಹೊಳಿಸಿದ್ದೀರಿ. ಈಗಲೂ ಇದು ಅವರಿಗೆ ನಾ? ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

Follow Us:
Download App:
  • android
  • ios