Asianet Suvarna News Asianet Suvarna News

ನಟ ಚೇತನ್​ ಸಿನಿಮಾ ಜೀವನಕ್ಕೆ ಕುತ್ತು ತಂತು MeToo

  ಘೋಷಿಸಿದ್ದ ಶ್ರತಿ ಹರಿಹರಿಹರನ್ ಪರ ಬ್ಯಾಟಿಂಗ್ ಮಾಡಿದ ನಟ ಚೇತನ್​ ಅವರ ಸಿನಿಮಾ ಜೀವನಕ್ಕೆ ಮೀಟೂ ಅಭಿಯಾನ ಕುತ್ತು ತಂದಿದೆ. ಏನದು ಅಂತೀರಾ? ಇಲ್ಲಿದೆ ಡಿಟೇಲ್ಸ್.

Arjun Sarjas manager Shivarjun files a complaint against actor Chetan
Author
Bengaluru, First Published Oct 29, 2018, 10:17 PM IST
  • Facebook
  • Twitter
  • Whatsapp

ಬೆಂಗಳೂರು, [ಅ.29]: ನಟ ಅರ್ಜುನ್​ ವಿರುದ್ಧ ಮೀಟೂ ಆರೋಪಕ್ಕೆ ನಟ ಚೇತನ್ ಕೈಜೋಡಿಸಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ಶಿವಾರ್ಜುನ್ ಅವರು ಫಿಲಂ ಚೇಂಬರ್ ಗೆ ನಟ ಚೇತನ್ ವಿರುದ್ಧ ದೂರು ನೀಡಿದ್ದಾರೆ.  ಚೇತನ್ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಅಭಿನಯದ ‘ಪ್ರೇಮಬರಹ’ ಚಿತ್ರಕ್ಕೆ 10 ಲಕ್ಷ ರೂ. ಮುಂಗಡವಾಗಿ ಪಡೆದಿದ್ದರು. 

#MeToo ಗೆ ಟ್ವಿಸ್ಟ್! ಶೃತಿ, ಚೇತನ್ ವಿರುದ್ಧ ಉದ್ಯಮಿಯಿಂದ ಸ್ಫೋಟಕ ಮಾಹಿತಿ!

ಈಗ ಮುಂಗಡ ಹಣವನ್ನ ವಾಪಸ್ ಕೊಡದೇ ಚೇತನ್ ಸತಾಯಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ಶಿವಾರ್ಜುನ್ ಈ ಹಣವನ್ನ ವಾಪಸ್ ಕೊಡಿಸುವಂತೆ ಫಿಲಂ ಚೇಂಬರ್ ಗೆ ಶಿವಾರ್ಜುನ್  ದೂರು ಸಲ್ಲಿಸಿದ್ದಾರೆ.

ಅರ್ಜುನ್ ಸರ್ಜಾ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ ನಟ ಚೇತನ್!

ನಟಿ ಶ್ರುತಿ ಹರಿಹರನ್​ ಮಾಡಿದ್ದ #MeToo ಆರೋಪ ಅವರನ್ನಷ್ಟೇ ಅಲ್ಲ, ಬದಲಾಗಿ ಅವರ ಬೆನ್ನಿಗೆ ನಿಂತವರನ್ನೂ ಬಿಡದೇ ಸುತ್ತಿಕೊಳ್ಳುತ್ತಿದೆ. ಅರ್ಜುನ್​ ಸರ್ಜಾ ಮೇಲಿನ ಲೈಂಗಿಕ ಆರೋಪ ಸಂಬಂಧ ನಟ ಚೇತನ್​ ತಮ್ಮ ಫೈಯರ್​ ಸಂಸ್ಥೆ ಮೂಲಕ ಶ್ರುತಿ ಬೆನ್ನಿಗೆ ನಿಂತಿದ್ದರು. ಇದರಿಂದ ಅವರು ಸರ್ಜಾ ಕುಟುಂಬದವರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೇ ಅವರ ಮೇಲೆ ಹಲವು ಆರೋಪಗಳು ಕೇಳಿಬಂದಿದ್ವು.

Follow Us:
Download App:
  • android
  • ios