ಕನ್ನಡ ಚಿತ್ರರಂಗದಲ್ಲಿ ಬಾಲನಟಿಯಾಗಿ ಮಿಂಚಿ 'ಹೃದಯ ಹೃದಯ' ಚಿತ್ರದ ಮೂಲಕ ನಟಿಯಾಗಿ ಅಭಿನಯಕ್ಕೆ ಪಾದಾರ್ಪಣೆ ಮಾಡಿದ ಅನು ಪ್ರಭಾಕರ್‌, 40ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಎರಡು ಬಾರಿ ರಾಜ್ಯ ಪ್ರಶಸ್ತಿ ಪಡೆದ ಈ ಕನ್ನಡದ ಈ ಪ್ರತಿಭಾನ್ವಿತ ನಟಿ ಅನು ಜನ್ಮದಿನದಂದು ಪತ್ರ ಬರೆದಿದ್ದಾರೆ.

ಅನು ಪ್ರಭಾಕರ್‌- ರಘು ಮುಖರ್ಜಿ ಮುದ್ದು 'ನಂದನ' ಹೀಗಿದ್ದಾಳೆ ನೋಡಿ!

ಅನು ಪತ್ರ:
'ಕೃತಜ್ಞತೆ! ಎಂಬ ಒಂದು ಪದ ಇಂದು ನನ್ನ ಹೃದಯವನ್ನು ತುಂಬುತ್ತದೆ. ನನಗೆ ಈ ಅದ್ಭುತವಾದ ಜೀವನ, ತಂದೆ-ತಾಯಿ, ಕುಟುಂಬ, ಮತ್ತು ಕುಟುಂಬದಂತಿರುವ ಸ್ನೇಹಿತರನ್ನು ನೀಡಿರುವ ದೇವರು ಮತ್ತು ಈ ಪ್ರಪಂಚಕ್ಕೆ ಋಣಿಯಾಗಿದ್ದೇನೆ ಹಾಗೂ ವಂದನೆಗಳನ್ನು ಸಲ್ಲಿಸುತ್ತೇನೆ,' ಎಂದು ಪತ್ರ ಪ್ರಾರಂಭಿಸಿದ್ದಾರೆ.

'ಗಾಯಿತ್ರಿ ಮತ್ತು ಪ್ರಭಾಕರ್ ಮಗಳಾಗಿ, ವಿಕ್ಕಿಯ ತಂಗಿಯಾಗಿ, ಅನ್ನಪೂರ್ಣಳಾಗಿ ನನ್ನ ಬಾಲ್ಯ ಕಳೆದೆ. ಆನಂತರ ಲಕ್ಷಾಂತರ ಕನ್ನಡಿಗರ ಹೃದಯದಲ್ಲಿ ಅನು ಪ್ರಭಾಕರ್‌ ಆಗಿ ನೆಲೆಸಿದೆ. ರಘು ಅವರ ಜೀವನ ಸಂಗಾತಿಯಾಗಿ, ನಂದನಾಳ ಅಮ್ಮನಾಗುವ ಮೂಲಕ ನನ್ನ ಸುಂದರವಾದ ಜೀವನ ನಿಜವಾದ ಅರ್ಥದಲ್ಲಿ ಪರಿಪೂರ್ಣವಾಯಿತು. ಈ ನಲವತ್ತು ವರ್ಷಗಳು ಸ್ಮರಣಯೋಗ್ಯ ಜೀವನವಾಗುವಂತೆ ಮಾಡಿದ ಪ್ರತಿಯೊಬ್ಬರಿಗೂ ನನ್ನ ವಂದನೆಗಳನ್ನು ಅರ್ಪಿಸುತ್ತೇನೆ. ಕೃತಜ್ಞತೆ ತುಂಬಿದ ಜೀವನವನ್ನು ನಡೆಸುವಲ್ಲಿ ನನ್ನ ತಂದೆ ತಾಯಿಗಳು ನನ್ನಲ್ಲಿ ಅಂತರ್ಗತ ಮಾಡಿರುವ ಮೂಲ ತತ್ವಗಳಂತೆ ಸಾಗುತ್ತೇನೆಂದು ನನಗೆ ನಾನೇ ವಾಗ್ದಾನ ಮಾಡಿಕೊಳ್ಳುತ್ತೇನೆ,' ಎಂದು ಬರೆದಿದ್ದಾರೆ.

’ಸ್ನೇಹಲೋಕ’ ಚೆಲುವೆ ಅನು ಪ್ರಭಾಕರ್ ಕಲರ್‌ಫುಲ್ ಫೋಟೋಗಳು

ತಂದೆಯನ್ನು ಮಿಸ್‌ ಮಾಡಿಕೊಳ್ಳುತ್ತಿರುವೆ:
ಅನು ಪ್ರಭಾಕರ್‌ ತಮ್ಮ ತಂದೆ ಜೊತೆ ಕಳೆದ ಕ್ಷಣಗಳ ಬಗ್ಗೆ ಆಗಾಗ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. 'ಅಪ್ಪ- ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೀನಿ, ಆದರೆ ನನಗೆ ಗೊತ್ತು, ಪ್ರತಿಕ್ಷಣವೂ ನೀವು ನನ್ನ ಪಕ್ಕದಲ್ಲಿದ್ದು, ನನ್ನ ಕೈ ಹಿಡಿದು ಆಶೀರ್ವಾದ ಮಾಡಿ ನನ್ನನ್ನು ನಡೆಸುತ್ತೀರಿ ಎಂದು,' ಎಂದು ಬರೆದಿರುವ ಸಾಲುಗಳು ಓದುಗರನ್ನು ಭಾವುಕರನ್ನಾಗಿಸುತ್ತದೆ. 

ಅನು ಬರೆದಿರುವ ಪತ್ರಕ್ಕೆ ನಟಿ ರಕ್ಷಿತಾ 'ಹ್ಯಾಪಿ ಬರ್ತಡೇ ಡಾರ್ಲಿಂಗ್' ಎಂದಿದ್ದಾರೆ. ನಟಿ ರಾಧಿಕಾ ನಾರಾಯಣ್, ಅರ್ಜುನ್ ಸರ್ಜಾ ಕುಟುಂಬ ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ.