ಕನ್ನಡ ಚಿತ್ರರಂಗ ಸಿಂಪಲ್ ನಟಿ ತೇಜಸ್ವಿನಿ ತಂದೆ ಪ್ರಕಾಶ್‌ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಏಪ್ರಿಲ್ 23ರಂದು ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ ಸಾಗರ್ ಅಪೊಲೊದಲ್ಲಿ ಕೊನೆ ಉಸಿರೆಳೆದಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್‌ಗೆ ಪಿತೃ ವಿಯೋಗ, ತಾಯಿಗೆ ಭಾವುಕ ಪತ್ರ!

ಈ ಬಗ್ಗೆ ತೇಜಸ್ವಿನಿ ಫೇಸ್‌ಬುಕ್‌ ಖಾತೆಯಲ್ಲಿ 'RIP appa' ಎಂದು ಬರೆದುಕೊಂಡಿದ್ದಾರೆ. ಅವರ ಅಭಿಮಾನಿಗಳು ಪ್ರಕಾಶ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶ್ರದ್ಧಾಂಜಲಿ ಸಲ್ಲಿಸಿ, ಮೃತರ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. 

 

ಕನ್ನಡ ಚಿತ್ರರಂಗದಲ್ಲಿ ಸರಳ ಜೀವನ ಮೆರೆದ ನಟಿ ತೇಜಸ್ವಿನಿ ಅಭಿನಯಿಸಿರುವ ಸಿನಿಮಾಗಳಲ್ಲವೂ ವೃತ್ತಿ ಜೀವನದಲ್ಲಿ ಹೆಸರು ತಂದು ಕೊಟ್ಟಿದೆ.  2007ರಲ್ಲಿ 'ಮಸಣದ ಮಕ್ಕಳು' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ತಮ್ಮ ಮೊದಲ ಚಿತ್ರಕ್ಕೆ ಬೆಸ್ಟ್‌ ಡೆಬ್ಯೂ ಪ್ರಶಸ್ತಿ ಹಾಗೂ SICS ಬೆಸ್ಟ್‌ ನಟಿ ಪ್ರಶಸ್ತಿ ಪಡೆದುಕೊಂಡರು. ಇತ್ತೀಚಿಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನನ್ನ ಅರಸಿ ರಾಧೆ' ಧಾರಾವಾಹಿಯಲ್ಲಿ ಅಕ್ಕನ ಪಾತ್ರ ನಿಭಾಯಿಸಿದ್ದರು. ಈ ಹಿಂದೆ ತೇಜಸ್ವಿನಿ ಬಿಗ್ ಬಾಸ್‌ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು. ಅಷ್ಟೇ ಅಲ್ಲದೇ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್‌' ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್‌ಗೆ ಪಿತೃ ವಿಯೋಗ, ತಾಯಿಗೆ ಭಾವುಕ ಪತ್ರ!