Asianet Suvarna News Asianet Suvarna News
breaking news image

ಪವಿತ್ರಾಗೆ ಮೆಸೇಜ್ ಮಾಡಿದ್ದಕ್ಕೆ ರೊಚ್ಚಿಗೆದ್ದವ ಅಶ್ವಿನಿ ವಿಚಾರದಲ್ಲಿ ಯಾಕೆ ಸುಮ್ಮನಾದ್ರು?; ದರ್ಶನ ವಿರುದ್ಧ ಸುಷ್ಮಾ ಗರಂ

ತಮ್ಮ ಅಭಿಮಾನಿಗಳು ಒಬ್ಬ ಮುಗ್ಧ ಹೆಣ್ಣು ಮಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದಾಗ ದರ್ಶನ್ ಯಾಕೆ ಸುಮ್ಮನಿದ್ದರು ಎಂದು ಪ್ರಶ್ನೆ ಮಾಡಿದ ಸುಷ್ಮಾ ವೀರ್. 

Kannada actress Sushma veer talks about Darshan fans comment on Ashwini puneethrajkumar vcs
Author
First Published Jul 6, 2024, 4:15 PM IST

ನಟಿ ಹಾಗೂ ರಂಗಭೂಮಿ ಕಲಾವಿದೆ ಸುಷ್ಮಾ ವೀರ್‌ ಡಿ-ಬಾಸ್ ಅಭಿಮಾನಿಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿರುವವರ ವಿರುದ್ಧ ಗರಂ ಆಗಿದ್ದಾರೆ. ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ ವ್ಯಕ್ತಿಗೆ ದರ್ಶನ್ ಶಿಕ್ಷೆ ಕೊಡುವುದಾದರೆ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೇಲೆ ಆರ್‌ಸಿಬಿ ಮ್ಯಾಚ್ ಸೋತಾಗ ಕಾಮೆಂಟ್ ಮಾಡಿದವರಿಗೆ ಯಾಕೆ ಕ್ಲಾಸ್ ತೆಗೆದುಕೊಂಡಿಲ್ಲ. ತಮ್ಮ ಮನೆಯ ಹೆಣ್ಣು ಮಗಳಿಗೆ ಒಂದು ನ್ಯಾಯ ಮತ್ತೊಬ್ಬರ ಮನೆ ಹೆಣ್ಣು ಮಗಳಿಗೆ ಒಂದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ.

'ಡಿ ಬಾಸ್‌ ಅಭಿಮಾನಿಗಳು ಎಂದು ಹೇಳಿಕೊಂಡು ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಕಾಮೆಂಟ್ ಮಾಡಿದ್ದು ಎಷ್ಟು ಸರಿ? ಒಳ್ಳೆ ಹೃದಯ ಮತ್ತು ಒಳ್ಳೆಯ ಮನಸ್ಸು ಇರುವ ವ್ಯಕ್ತಿ ಅಶ್ವಿನಿ ಪುನೀತ್. ಜೀವನದಲ್ಲಿ ಇಂತಹ ದುರಂತ ನೋಡಿದವರು ಸಿನಿಮಾ ಎಲ್ಲಾ ಬೇಡ ಇಬ್ಬರು ಮಕ್ಕಳ ಜೊತೆ ಪ್ಯಾಕ್ ಮಾಡಿಕೊಂಡು ಎಲ್ಲಾದರೂ ಹೊರಬಹುದಿತ್ತು ಆದರೆ ಆಕೆ ಹಾಗೆ ಮಾಡಿಲ್ಲ. ನನ್ನ ಗಂಡ ನಂಬಿದ್ದು ಕನ್ನಡಿಗರನ್ನು ನನ್ನ ಮಾವ ಇದ್ದಿದ್ದೂ ಇದೇ ಕನ್ನಡ ಚಿತ್ರರಂಗದಲ್ಲಿ ಹೀಗಾಗಿ ಈ ಚಿತ್ರರಂಗಕ್ಕೆ ನಾನು ಕೊಡುಗೆ ನೀಡಬೇಕು ಎಂದು ಅಶ್ವಿನಿ ನಿಂತಿದ್ದಾರೆ. ಅಲ್ಲದೆ ಈ ಕೆಲಸದಿಮದ 500-600 ಕುಟುಂಬಗಳಿಗೆ ಊಟ ಹಾಕುತ್ತಿದ್ದಾರೆ. ಇಷ್ಟು ಮಾಡುತ್ತಿರುವ ವ್ಯಕ್ತಿ ಬಗ್ಗೆ ಮಾತನಾಡುವುದಕ್ಕೆ ಈ ಜನರಿಗೆ ಏನು ಅಧಿಕಾರವಿದೆ? ಕಾಮೆಂಟ್ ಮಾಡಿದವರು ಏನು ಸಾಧನೆ ಮಾಡಿದ್ದಾರೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಸುಷ್ಮಾ ವೀರ್ ಮಾತನಾಡಿದ್ದಾರೆ.

ತಾಯಿಗೆ iphone ಗಿಫ್ಟ್‌ ಕೊಟ್ಟ ಯೂಟ್ಯೂಬರ್ ಸಮೀರ್; ಗರ್ಲ್‌ಫ್ರೆಂಡ್ ಕೈ ಕೊಟ್ಮೇಲೆ ಅಮ್ಮ ನೆನಪಾದ್ರಾ ಎಂದ ನೆಟ್ಟಿಗರು

'ಈ ಘಟನೆ ನಡೆದಾಗ ಈ ರೀತಿ ಕಾಮೆಂಟ್ ಮಾಡುವವರು ನನ್ನ ಅಭಿಮಾನಿ ಆಗುವುದಕ್ಕೆ ಸಾಧ್ಯವಿಲ್ಲ, ಒಂದು ಹೆಣ್ಣಿನ ಬಗ್ಗೆ ಇಷ್ಟು ಕೇವಲವಾಗಿ ನೋಡುವವನು ನನ್ನ ಫ್ಯಾನ್ ಆಗುವುದಕ್ಕೆ ಸಾಧ್ಯವಿಲ್ಲ ಎಂತ ಹೇಳಿಬಿಟ್ಟಿದ್ದರೆ ಬೇರೆ ಆಗಿಬಿಟ್ಟಿರುವುದು. ನಾನು ನಂಬುವುದು ಯಥಾ ರಾಜ ತಥಾ ಪ್ರಜಾ. ಈಗ ಎಲ್ಲರೂ ಮಾಡುತ್ತಿರುವ ಸರ್ಕಸ್‌ ಅವರನ್ನು ಮೆಚ್ಚಿಸುವುದಕ್ಕೆ ನಿಜಕ್ಕೂ ಅವರ ಮೇಲೆ ಇರುವ ಕಾಳಜಿಗೆ ಅಲ್ಲ. ಅಣ್ಣಾ ನಿಮಗೋಸ್ಕರ ಹೀಗೆ ಮಾಡ್ತಿದ್ದೀನಿ ಅಣ್ಣಾ ಹೀಗೆ ಮಾಡಿದ್ದೀನಿ...ಇದೆಲ್ಲವೂ ಅವರಿಗೆ ಹೇಳಿಕೊಳ್ಳಲು ಮಾಡುತ್ತಿರುವುದು.  ಕಂಡವರ ಹೆಣ್ಣು ಮಕ್ಕಳನ್ನು ಹೀನಾಯವಾಗಿ ನೋಡುವುದು ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡುವುದು ಸರಿ ಅಲ್ಲ' ಎಂದು ಸುಷ್ಮಾ ವೀರ್ ಹೇಲಿದ್ದಾರೆ. 

15 ಸಾವಿರ ಸಂಬಳಕ್ಕೆ ಇಷ್ಟೋಂದು ಶೋಕಿ ನಾ; ದಿವ್ಯಾ ವಸಂತ ಅರೆ ಬಟ್ಟೆ ಲುಕ್‌ಗೆ ಕಾಲೆಳೆದ ನೆಟ್ಟಿಗರು

'ಯಾಕಪ್ಪ ನಿಮ್ಮ ಮನೆಯಲ್ಲಿ ನಿಮ್ಮ ಬಾಸ್ ನಿಮ್ಮ ಯಜಮಾನರು ಒಬ್ರೆನಾ? ಆ ಹೆಣ್ಣು ಮಕ್ಕಳಿಗೆ ತಂದೆ ಇಲ್ವಾ ಅಣ್ಣ-ತಮ್ಮಂದಿರು ಇಲ್ವಾ? ಅವ್ರು ನಿಮ್ಮನ್ನು ಹಿಡಿದುಕೊಂಡು ಚಚ್ಚ ಬಹುದು. ಅಣ್ಣಾವ್ರ ಫ್ಯಾನ್ಸ್‌ ಯಾವತ್ತಾದರೂ ಹೀಗೆ ಮಾಡಿದ್ದಾರಾ? ಆ ಕ್ಷಣಕ್ಕೆ ಅಲ್ಲವಾದರೂ ಒಂದು ದಿನ ಹೆಣ್ಣು ಮಕ್ಕಳ ಬಗ್ಗೆ ಕಾಮೆಂಟ್ ಮಾಡಬಾರದು ಕೆಟ್ಟದಾಗಿ ಮಾತನಾಡುವವರು ನನ್ನ ಅಭಿಮಾನಿ ಅಲ್ಲ ಎಂದಿದ್ದರೆ ಅಭಿಮಾನಿಗಳು ಬದಲಾಗುತ್ತಿದ್ದರು. ನನಗೆ ಬಹಳ ನೋವಾಗಿದೆ ಏಕೆಂದರೆ ಆಕೆ ಯಾರೋಟ್ಟಿಗೂ ಮಾತನಾಡುವುದಿಲ್ಲ ಅಷ್ಟು ಒಳ್ಳೆಯವರು' ಎಂದಿದ್ದಾರೆ ಸುಷ್ಮಾ. 

Latest Videos
Follow Us:
Download App:
  • android
  • ios