15 ಸಾವಿರ ಸಂಬಳಕ್ಕೆ ಇಷ್ಟೋಂದು ಶೋಕಿ ನಾ; ದಿವ್ಯಾ ವಸಂತ ಅರೆ ಬಟ್ಟೆ ಲುಕ್‌ಗೆ ಕಾಲೆಳೆದ ನೆಟ್ಟಿಗರು
ಎಲ್ಲಿ ನೋಡಿದರೂ 'ಕರ್ನಾಟಕವೇ ಬೆಚ್ಚಿ ಬೀಳಿಸುವ ಸುದ್ದಿ' ಹುಡುಗಿ ಫೋಟೋ ವೈರಲ್. ಮಾಡರ್ನ್ ಲುಕ್ ನೋಡಿ ಎಲ್ಲರೂ ಶಾಕ್....
ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ ಅಂದ್ಮೇಲೆ ಟ್ರೆಂಡ್‌ಗೆ ತಕ್ಕ ಹಾಗೆ ಡ್ರೆಸ್ ಮೇಕಪ್ ಮತ್ತು ಲುಕ್ ಬದಲಾಯಿಸಿಕೊಳ್ಳುವುದು ಕಾಮನ್.
6 ತಿಂಗಳ ಹಿಂದೆಯೇ 15 ಸಾವಿರ ಸಂಬಳಕ್ಕೆ ಗುಡ್ ಬೈ ಹೇಳಿ ಬೇರೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಖ್ಯಾತ ನಿರೂಪಕಿ ಈಗ ಮತ್ತೆ ಟ್ರೋಲ್ ಆಗುತ್ತಿದ್ದಾರೆ.
ಕರ್ನಾಟಕವೇ ಬೆಚ್ಚಿ ಬೀಳಿಸುವ ಸುದ್ದಿ ಕೊಟ್ಟಿದ್ದ ನಿರೂಪಕಿ ದಿವ್ಯಾ ವಸಂತ್ ಈಗ ಕರ್ನಾಟಕವೇ ಬೆಚ್ಚಿ ಬೀಳಿಸುವಂತೆ ಅವರ ಸುದ್ದಿಯೇ ಹರಿದಾಡಲು ಶುರುವಾಗಿದೆ.
72 ಸಾವಿರ ಫಾಲೋವರ್ಸ್ ಹೊಂದಿರುವ ಈ ನಿರೂಪಕಿ ಕೇವಲ 15 ಸಾವಿರ ರೂ. ಸಂಬಳಕ್ಕೆ ಕೆಲಸ ಮಾಡುತ್ತಿದ್ದರಂತೆ. ಆದರೆ ಶೋಕಿ ನೋಡಿದ್ರೆ ಐಷಾರಾಮಿನೇ.
ಇನ್‌ಸ್ಟಾಗ್ರಾಂ ಅಕೌಂಟ್ ಸ್ಕ್ಯಾನ್ ಮಾಡಿರುವ ನೆಟ್ಟಿಗರು ಆಕೆಯ ಮಾಡರ್ನ್ ಲುಕ್ ಡ್ರೆಸ್‌ಗಳನ್ನು ನೋಡಿ ಶಾಕ್ ಆಗಿದ್ದಾರೆ. ಎಲ್ಲಿಂದ ದುಡ್ಡು ಬರುತ್ತೆ ಅನ್ನೋ ಯೋಚನೆ ಕೂಡ ಮಾಡಿದ್ದಾರೆ.
ಪಕ್ಕಾ ಮಿಡಲ್ ಕ್ಲಾಸ್ ಹುಡುಗಿ ಎಂದು ಪದೇ ಪದೇ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ದಿವ್ಯಾ ಹೇಳಿಕೊಳ್ಳುತ್ತಿದ್ದರು. ಅದೇ ಹುಡುಗಿ ಒಮ್ಮೆ ಹಾಕಿದ ಬಟ್ಟೆ ಮತ್ತೊಮ್ಮೆ ಹಾಕಿಲ್ಲ ಅನ್ನೋದನ್ನು ನೋಡಿ ಶಾಕ್ ಆಗಿದ್ದಾರೆ.