Asianet Suvarna News Asianet Suvarna News

ಪ್ರಶ್ನೆಗೆ ಸುಧಾರಾಣಿ ಉತ್ತರ; ಸ್ವಲ್ಪ ತಲೆ ಎತ್ತಿದ್ರೆ ಸಾಕು, ನಮ್ಮಮ್ಮ ಮತ್ತೆ ತಲೆ ಎತ್ತೋಕೇ ಬಿಡ್ತಿರ್ಲಿಲ್ಲ!

'ಆನಂದ್' ಚಿತ್ರದ ಮೂಲಕ ನಾಯಕಿಯಾಗಿ ಬೆಳೆದವರು ನಟಿ ಸುಧಾರಾಣಿ. ಶಿವರಾಜ್‌ಕುಮಾರ್ ನಾಯಕತ್ವದ ಆನಂದ್ ಚಿತ್ರದ ಬಳಿಕ, ಮತ್ತೆ ಅವರ ಜೋಡಿಯಾಗಿ ಮನ ಮೆಚ್ಚಿದ ಹುಡುಗಿ ಚಿತ್ರದಲ್ಲೂ ನಟಿಸಿ ಚಿತ್ರದ ಯಶಸಸ್ಸಿಗೂ ಕಾರಣರಾದರು ಸುಧಾರಾಣಿ..

Kannada actress Sudharani talks about her life and career in rapid rashmi interview srb
Author
First Published Aug 26, 2024, 11:36 AM IST | Last Updated Aug 26, 2024, 12:28 PM IST

ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿ, 'ಆನಂದ್' ಚಿತ್ರದ ಮೂಲಕ ನಾಯಕಿಯಾಗಿ ಬೆಳೆದವರು ನಟಿ ಸುಧಾರಾಣಿ (Sudharani). ಶಿವರಾಜ್‌ಕುಮಾರ್ ನಾಯಕತ್ವದ ಆನಂದ್ ಚಿತ್ರದ ಬಳಿಕ, ಮತ್ತೆ ಅವರ ಜೋಡಿಯಾಗಿ ಮನ ಮೆಚ್ಚಿದ ಹುಡುಗಿ ಚಿತ್ರದಲ್ಲೂ ನಟಿಸಿ ಚಿತ್ರದ ಯಶಸಸ್ಸಿಗೂ ಕಾರಣರಾದರು ಸುಧಾರಾಣಿ, ಬಳಿಕ ರಣರಂಗ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಶಿವರಾಜ್‌ಕುಮಾರ್ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. 

ಪಂಚಮ ವೇದ, ಮೈಸೂರು ಮಲ್ಲಿಗೆ, ಸಪ್ತಪದಿ, ಮನೆ ದೇವ್ರು ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಂದಿನ ಸ್ಟಾರ್ ನಟರೊಂದಿಗೆ ನಟಿಸಿ ಮೆಚ್ಚುಗೆ ಪಡೆದ ನಟಿ ಸುಧಾರಾಣಿ. 'ಪಂಚಮವೇದ' ಸಿನಿಮಾಗೆ ರಾಜ್ಯ ಪ್ರಶಸ್ತಿ ಕೂಡ ಸುಧಾರಾಣಿ ಅವರಿಗೆ ಲಭಿಸಿದೆ. ಈಗ ಸಿನಿಮಾರಂಗದಲ್ಲಿ ಮಾತ್ರವಲ್ಲದೇ ಕಿರುತೆರೆಯಲ್ಲಿ ಕೂಡ ನಟಿ ಸುಧಾರಾಣಿ ಸಕ್ರಿಯರಾಗಿದ್ದಾರೆ. ಸಿನಿವೃತ್ತಿಯಲ್ಲಿ ಇದ್ದಾಗ ಅಥವಾ ಈಗಲೂ ಕೂಡ ಯಾವುದೇ ವಿವಾದಗಳಿಗೆ ಸಿಲುಕಿಕೊಳ್ಳದೇ ನಟಿ ಸುಧಾರಾಣಿ ಎಲ್ಲರ ಮೆಚ್ಚುಗೆ ಪಡೆದವರಾಗಿದ್ದಾರೆ. 

ಡಾ ರಾಜ್ 'ಗಂಧದಗುಡಿ'ಗೆ ಬೆಂಗಳೂರಲ್ಲಿ ಪವನ್ ಕಲ್ಯಾಣ್ ಬಹುಪರಾಕ್, ಟಾಲಿವುಡ್‌ನಲ್ಲಿ ಸ್ಟಾರ್ ವಾರ್!

ಇಂಥ ನಟಿ ಸುಧಾರಾಣಿ ಅವರನ್ನು ರಾಪಿಡ್ ರಶ್ಮಿ ತಮ್ಮ ಸ್ಟುಡಿಯೋಗೆ ಕರೆದು ಸಂದರ್ಶನ ಮಾಡಿದ್ದಾರೆ. ಅಲ್ಲಿ ಸುಧಾರಾಣಿ ಅವರು ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಹಲವು ಸಂಗತಿಗಳನ್ನು ಬಹಿರಂಗ ಪಡಿಸಿದ್ದಾರೆ. ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ತಮ್ಮದೇ ರೀತಿಯಲ್ಲಿ ಹಲವು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ, ನಟಿ ಸುಧಾರಾಣಿ ರಾಪಿಡ್ ರಶ್ಮಿ ಸ್ಟುಡಿಯೋದಲ್ಲಿ ಅದೇನು ಮಾತನಾಡಿದ್ದಾರೆ, ನೋಡೋಣ.. 

ನಟಿ ಸುಧಾರಾಣಿ ಅವರಿಗೆ ರಾಪಿಡ್ ರಶ್ಮಿ ಅವರು 'ನಿಮಗೆ ಆಗ ಟೀನ್ ಏಜ್. ನೀವು ನಟಿಸಿರೋ ಫಸ್ಟ್ ಸಿನಿಮಾನೇ ಸೂಪರ್ ಸಕ್ಸಸ್ ಕಾಣುತ್ತೆ.. ಹ್ಯಾಟ್ರಿಕ್ ಹೀರೋ ಅಂತ ಅವ್ರಿಗೆ ಬಂದ ಎಲ್ಲಾ ಸಿನಿಮಾಗಳಲ್ಲಿ ನೀವೂ ಇದೀರಾ.. ಆವತ್ತಿನ ಸಕ್ಸಸ್‌ಗಳನ್ನೆಲ್ಲಾ ನೀವು ಹೇಗೆ ಸೆಲೆಬ್ರೇಟ್ ಮಾಡ್ತಾ ಇದ್ರಿ?..' ಅಂತ ಕೇಳಿದ್ದಾರೆ. ಅದಕ್ಕೆ ಸುಧಾರಾಣಿ ಅವರು 'ಅವೆಲ್ಲಾ ಏನೂ ಇರ್ಲಿಲ್ಲ. ನಾನು ಸ್ವಲ್ಪ ತಲೆ ಎತ್ತಿದ್ರೆ ಸಾಕು, ನಮ್ಮಮ್ಮ ಮತ್ತೆ ತಲೆ ಎತ್ತೋಕೇ ಬಿಡ್ತಿರ್ಲಿಲ್ಲ.. ನಮ್ಮಮ್ಮ ನನ್ನನ್ನು ತುಂಬಾ ಗ್ರೌಂಡೆಡ್ ಲೆವಲ್‌ನಲ್ಲೇ ಇಟ್ಟಿದ್ರು..' ಅಂದಿದ್ದಾರೆ.

ಈ ಸೀಕ್ರೆಟ್ ಗೊತ್ತಾ ನಿಮ್ಗೆ..? ಡಾ ರಾಜ್‌ಕುಮಾರ್ ಜೊತೆ ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸಿದ್ದಾರೆ...!

ಜೊತೆಗೆ, ನಟಿ ಸುಧಾರಾಣಿ ಅವರು 'ಮೇಲೆ ಹೋಗಿರೋ ಚಕ್ರ ಕೆಳಗೆ ಬರ್ಲೇಬೇಕು. ಅಂದ್ರೆ, ಲೈಫ್ ಈಸ್ ಅ ಸರ್ಕಲ್.. ಈ ಅಟಿಟ್ಯೂಡ್ ತೋರ್ಸೋದಾಗ್ಲಿ, ತುಂಬಾ ಏನೋ. ಏನೂ ಮಾಡೋಕೇ ಬಿಡ್ತಾ ಇರ್ಲಿಲ್ಲ. ಅಲ್ಲೇ ಬಾಲ ಕಟ್ ಮಾಡಿ ಬಿಡೋರು.. ನೀನು ಇಲ್ಲಿ ಬಂದಿರೋದು ಕೆಲಸ ಮಾಡೋದಕ್ಕೆ.. ನಿನ್ನ ಎಲ್ಲಾ ಗಮನ ಕೆಲಸದ ಮೇಲೆ ಇರ್ಬೇಕು.. ಕೆಲ್ಸ ಮಾಡು, ಆಮೇಲೆ ಮನೆ, ಅಷ್ಟೇ..' ಎಂದು ತಮ್ಮ ವೃತ್ತಿ ಜೀವನ ಹಾಗು ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ. 

Latest Videos
Follow Us:
Download App:
  • android
  • ios