Asianet Suvarna News Asianet Suvarna News

ಡಾ ರಾಜ್ 'ಗಂಧದಗುಡಿ'ಗೆ ಬೆಂಗಳೂರಲ್ಲಿ ಪವನ್ ಕಲ್ಯಾಣ್ ಬಹುಪರಾಕ್, ಟಾಲಿವುಡ್‌ನಲ್ಲಿ ಸ್ಟಾರ್ ವಾರ್!

ಮೆಗಾ ಸ್ಟಾರ್ ಚಿರಂಜೀವಿ ತಮ್ಮ, ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಈಗ ಆಂಧ್ರದ ಡಿಸಿಎಂ ಹುದ್ದೆ ಅಲಂಕರಿಸಿದ್ದಾರೆ. ಜೊತೆಗೆ, ಅವರು ಅಲ್ಲಿನ ಸರ್ಕಾರದಲ್ಲಿ ಅರಣ್ಯ ಮಂತ್ರಿ ಕೂಡ ಆಗಿದ್ದಾರೆ. ಮೊದಲಿನಿಂದಲೂ ನಟ ಪವನ್ ಕಲ್ಯಾಣ್ ಅವರು ನಟ ಅಲ್ಲೂ ಅರ್ಜುನ್ ಅವರಿಂದ ಸ್ವಲ್ಪ ಅಂತರ ಕಾಯ್ದುಕೊಂಡೇ ಬಂದಿದ್ದಾರೆ..

Pawan Kalyan talk in Bengaluru about Dr Rajkumar movie created star war in tollywood srb
Author
First Published Aug 25, 2024, 7:55 PM IST | Last Updated Aug 25, 2024, 8:22 PM IST

ಟಾಲಿವುಡ್ ಚಿತ್ರರಂಗದ ಎರಡು ಪ್ರತಿಷ್ಠಿತ ಕುಟುಂಬಗಳ ಮಧ್ಯೆ ಮತ್ತೆ ಬೆಂಕಿ ಹೊತ್ತಿಕೊಂಡಿದೆ. ಲೋಕಸಭೆ ಚುನಾವಣೆ ವೇಳೆ ಸ್ಪರ್ಧಿಸಿದ್ದ ಪವನ್ ಕಲ್ಯಾಣ್ (Pawan Kalyan) ಪರ ಪ್ರಚಾರಕ್ಕೆ ಬಾರದ ನಟ ಅಲ್ಲು ಅರ್ಜುನ್ (Allu Arjun), ಪವನ್ ಕಲ್ಯಾಣ್ ವಿರುದ್ಧ ನಿಂತಿದ್ದ ಅಬ್ಯರ್ಥಿ ಪರ ಚುನಾವಣೆ ಪ್ರಚಾರ ಕೈಗೊಂಡು ಮೆಗಾ ಸ್ಟಾರ್ ಫ್ಯಾಮಿಲಿ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಸಂಗತಿ ಬಹುತೇಕರಿಗೆ ಗೊತ್ತಿದೆ. ಅಲ್ಲು ಅರ್ಜುನ್ ಫ್ಯಾಮಿಲಿ ಹಾಗು ಮೆಗಾ ಸ್ಟಾರ್ ಚಿರಂಜೀವಿ ಫ್ಯಾಮಿಲಿ ಎರಡೂ ಹತ್ತಿರದ ಸಂಬಂಧಿಗಳು. 

ಆದರೆ, ಮೆಗಾ ಸ್ಟಾರ್ ಚಿರಂಜೀವಿ (Chiranjeevi) ತಮ್ಮ, ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಈಗ ಆಂಧ್ರದ ಡಿಸಿಎಂ ಹುದ್ದೆ ಅಲಂಕರಿಸಿದ್ದಾರೆ. ಜೊತೆಗೆ, ಅವರು ಅಲ್ಲಿನ ಸರ್ಕಾರದಲ್ಲಿ ಅರಣ್ಯ ಮಂತ್ರಿ ಕೂಡ ಆಗಿದ್ದಾರೆ. ಮೊದಲಿನಿಂದಲೂ ನಟ ಪವನ್ ಕಲ್ಯಾಣ್ ಅವರು ನಟ ಅಲ್ಲೂ ಅರ್ಜುನ್ ಅವರಿಂದ ಸ್ವಲ್ಪ ಅಂತರ ಕಾಯ್ದುಕೊಂಡೇ ಬಂದಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ, ಈಗ ಪವನ್ ಕಲ್ಯಾಣ್ ನೀಡಿರುವ ಹೇಳಿಕೆಯೊಂದು ಈ ಎರಡೂ ಕುಟುಂಬಗಳ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದೆ.

ಈ ಸೀಕ್ರೆಟ್ ಗೊತ್ತಾ ನಿಮ್ಗೆ..? ಡಾ ರಾಜ್‌ಕುಮಾರ್ ಜೊತೆ ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸಿದ್ದಾರೆ...!

ಹಾಗಿದ್ರೆ ಏನಾಗ್ತಿದೆ ಅಲ್ಲಿ? ಅಲ್ಲು ಅರ್ಜುನ್ ಮಾವ ಕಂಚಾರ್ಲ ಚಂದ್ರಶೇಖರ್ ರೆಡ್ಡಿ ನಟ ಹಾಗೂ ಮಂತ್ರಿ ಪವನ್ ಕಲ್ಯಾಣ ಬೆಂಗಳೂರಿನಲ್ಲಿ ನೀಡಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಅಲ್ಲೂ ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ತಂದೆಯಾಗಿರುವ  ಕಂಚಾರ್ಲ ಚಂದ್ರಶೇಖರ್ ರೆಡ್ಡಿ ಆಂಧ್ರದ ರಾಜಕೀಯ ರಂಗದಲ್ಲಿ ಗುರುತಿಸಿಕೊಂಡಿದ್ದು, 'ಪವನ್ ಕಲ್ಯಾಣ್ ತಾವು ನೀಡಿರುವ ಹೇಳಿಕೆಗೆ ಸ್ಪಷ್ಟನೆ ನೀಡಬೇಕು' ಎಂದು ಆಗ್ರಹಿಸಿದ್ದಾರೆ. 

ಹಾಗಿದ್ದರೆ ನಟ, ಹಾಗು ಸದ್ಯ ಆಂಧ್ರ ಸರ್ಕಾರದಲ್ಲಿ ಮಂತ್ರಿ ಪಟ್ಟದಲ್ಲಿರುವ ಪವನ್ ಕಲ್ಯಾಣ್ ಅದೇನು ಹೇಳಿದ್ದಾರೆ ಗೊತ್ತೇ? ಇತ್ತೀಚೆಗೆ ಬೆಂಗಳೂರಿನಲ್ಲಿ ಮಾತನಾಡಿದ್ದ ಆಂಧ್ರ ಡಿಸಿಎಂ ಹಾಗು ನಟ ಪವನ್ ಕಲ್ಯಾಣ್ ಅವರು 'ನಾನು ಅರಣ್ಯ ಸಚಿವನಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಕನ್ನಡದಲ್ಲಿ ಡಾ ರಾಜ್‌ಕುಮಾರ್ ನಟಿಸಿರುವ 'ಗಂಧದಗುಡಿ' ಚಿತ್ರ ನೋಡಿ ನನಗೆ ಅರಣ್ಯದ ಬಗ್ಗೆ ಕಾಳಜಿ ಮೂಡಿದೆ. ಅರಣ್ಯ ಉಳಿಸುವಿಕೆ ಮಹತ್ವದ ಬಗ್ಗೆ ಅರಿವು ಮೂಡಿದೆ. 

ಕನ್ನಡದಲ್ಲಿ ಡಾ ರಾಜ್‌ಕುಮಾರ್ (Dr Rajkumar) ನಟಿಸಿರುವ 'ಗಂಧದ ಗುಡಿ' ಚಿತ್ರವು ಅರಣ್ಯ ರಕ್ಷಣೆ ಕುರಿತಾದ ಸಿನಿಮಾ. ಆ ಚಿತ್ರದಲ್ಲಿ ಅರಣ್ಯಾಧಿಕಾರಿ, ಡಿಎಫ್​ಓ ಪಾತ್ರದಲ್ಲಿ ನಾಯಕ ಡಾ ರಾಜ್‌ಕುಮಾರ್ ಅವರು ಅರಣ್ಯ ಕಳ್ಳಸಾಗಣೆದಾರರಿಂದ ಅರಣ್ಯವನ್ನು ರಕ್ಷಣೆ ಮಾಡುತ್ತಾರೆ. ಆದರೆ ಇಂದು ಸಂಸ್ಕೃತಿ ಹೇಗೆ ಬದಲಾಗಿದೆ ನೋಡಿ..! ಅರಣ್ಯದಲ್ಲಿ ಶ್ರೀಗಂಧದ ಕಳ್ಳಸಾಗಣೆ ಮಾಡುವವನೇ ಸಿನಿಮಾದಲ್ಲಿ ನಾಯಕ ಆಗಿದ್ದಾರೆ..' ಎಂದು 'ಪುಷ್ಪ' ಸಿನಿಮಾ ಹೆಸರು ಹೇಳದೇ ಪರೋಕ್ಷವಾಗಿ ಟೀಕಿಸಿದ್ದಾರೆ.

ಪುನೀತ್-ಶಿವಣ್ಣ ಬಗ್ಗೆ ಹೊಸ ಸೀಕ್ರೆಟ್ ಹೇಳಿ ಭಾರೀ ಮೆಚ್ಚುಗೆ ಪಡೆದ್ರಾ ನಟ ವಿನೋದ್ ರಾಜ್..!? 

ಪವನ್ ಕಲ್ಯಾಣ್ ಅವರ ಈ ಮಾತಿನಿಂದ ತೀವ್ರ ಆಕ್ರೋಶ ಗೊಂಡಿರುವ 'ಪುಷ್ಪ' ಚಿತ್ರದ ನಾಯಕ ಆಗಿರುವ ಅಲ್ಲೂ ಅರ್ಜುನ್ ಮಾವ ಕಂಚಾರ್ಲ ಚಂದ್ರಶೇಖರ್ ರೆಡ್ಡಿ 'ನಮ್ಮ ಅಳಿಯ ಅಲ್ಲು ಅರ್ಜುನ್‌ ಅವರಿಗೆ ಕಾಡಿನ ಬಗ್ಗೆ ಕಾಳಜಿ ಇದೆ. 'ಪುಷ್ಪ' ಚಿತ್ರದ ಪಾತ್ರದಲ್ಲಿ ನಟಿಸಿದ್ದಾರೆ ಅಷ್ಟೇ ಹೊರತೂ ಅವರೇನೂ ಅರಣ್ಯ ಸಂಪತ್ತಿನ ಕಳ್ಳ ಸಾಗಾಣಿಕೆ ಮಾಡಿಲ್ಲ.. ಪಾತ್ರದಲ್ಲಿ ನಟಿಸಿದ್ದೂ ತಪ್ಪು ಎನ್ನಬಾರದು. 

'ಪುಷ್ಪ' ಚಿತ್ರವನ್ನು ಹೆರಸಿಸದೆಯೂ ಹೇಳಿಕೆ ನೀಡಿರುವ ಪವನ್ ಕಲ್ಯಾಣ್ ಮಾತನ್ನು ಕಂಚಾರ್ಲ ಚಂದ್ರಶೇಖರ್ ರೆಡ್ಡಿ ಕಟುವಾಗಿ  ಖಂಡಿಸಿದ್ದಾರೆ. ಒಬ್ಬ ನಟರಾಗಿ ಅಲ್ಲು ಅರ್ಜುನ್ 'ಪುಷ್ಪ' ಚಿತ್ರದ ರೋಲ್‌ನಲ್ಲಿ ನಟಿಸಿದ್ದಾರೆ. ನಿಜಜೀವನದಲ್ಲಿ ಅವರು ಯಾವುದೇ ಅಪರಾಧ ಎಸಗಿಲ್ಲ. ಅಲ್ಲು ಅರ್ಜುನ್ ನಿಜ ಜೀವನದಲ್ಲಿ ಶ್ರೀಗಂಧ, ರಕ್ತಚಂದನಗಳ ಸ್ಮಗ್ಲಿಂಗ್ ಮಾಡಿದರೆ ಅದು ತಪ್ಪು ಕಾರ್ಯ ಆಗುತ್ತದೆ. ಆದರೆ ಒಂದು ಚಿತ್ರದ ಪಾತ್ರದಲ್ಲಿ ನಟಿಸಿದರೇ ತಪ್ಪೇನು? 

ಈ ಬಗ್ಗೆ ದಯವಿಟ್ಟು ಪವನ್ ಕಲ್ಯಾಣ್ ತಾವು ನೀಡಿರುವ ಹೇಳಿಕೆಯನ್ನು ದೊಡ್ಡ ಮನಸ್ಸಿನಿಂದ ವಾಪಸ್ ಪಡೆಯಬೇಕು. ಅಥವಾ, ತಾವು ಅದನ್ನು ನಟ ಅಲ್ಲು ಅರ್ಜುನ್ ಉದ್ದೇಶಿಸಿ ಆ ಮಾತು ಹೇಳಲಿಲ್ಲ ಎಂದು ಸೂಕ್ತ ಆಧಾರ ಕೊಟ್ಟು ಸ್ಪಷ್ಟನೆ ನೀಡಬೇಕು. 'ಪುಷ್ಪ' ಚಿತ್ರದ ಶ್ರೇಷ್ಠ ನಟನೆಗಾಗಿ ಅಲ್ಲು ಅರ್ಜುನ್‌ ಅವರಿಗೆ ನ್ಯಾಷನಲ್ ಅವಾರ್ಡ್ ಸಹ ಸಿಕ್ಕಿದೆ. ಅಂದರೆ, ನಟ ಪವನ್ ಕಲ್ಯಾಣ್  ಪ್ರಕಾರ, ಎನ್‌ಡಿಎ ಸರ್ಕಾರದ ಈ ನಿರ್ಧಾರ ತಪ್ಪು ಎಂದಿದಿಯೇ?' ಎಂದು ಚಂದ್ರಶೇಖರ್ ರೆಡ್ಡಿ ಪ್ರಶ್ನಿಸಿ ತಮ್ಮ ತೀವ್ರ ಆಕ್ರೋಶ ಹೊರಹಾಕಿದ್ದಾರೆ. 

ಕೈ ತುಂಬ ಇದ್ದೋನೆ ಯೋಗಿ, ಕಡೆವರೆಗು ಬೇಡೋನೆ ಜೋಗಿ ಸದ್ಯ ಟ್ರೆಂಡಿಂಗ್ ಆಗ್ತಿರೋದು ಯಾಕೆ?

ಒಟ್ಟಿನಲ್ಲಿ, ಡಾ ರಾಜ್‌ಕುಮಾರ್ ಹೆಸರನ್ನು ಹೇಳಿ ಬೆಂಗಳೂರಿನಲ್ಲಿ ನೀಡಿರುವ ಪವನ್ ಕಲ್ಯಾನ ಹೇಳಿಕೆ ಈಗ ಆಂಧ್ರದ ರಾಜಕೀಯ ಹಾಗು ಟಾಲಿವುಡ್ ಸಿನಿ ಪಡಸಾಲೆಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಮೊದಲೇ ಹೊತ್ತಿದ್ದ ಮೆಗಾಸ್ಟಾರ್ ಹಾಗು ಅಲ್ಲೂ ಫ್ಯಾಮಿಲಿ ಮಧ್ಯೆ ಕಿಡಿ ಈಗ ಬೆಂಕಿಯಾಗಿ ಬದಲಾಗಿದೆ. ಮುಂದೆ ಈ ಬೆಂಕಿಯ ಪರಿಣಾಮ ಏನಾಗಲಿದೆ ಎಂಭುದನ್ನು ಕಾಲವೇ ನಿರ್ಧರಿಸಲಿದೆ ಎನ್ನಬಹುದು!

Latest Videos
Follow Us:
Download App:
  • android
  • ios