ಮೀ ಟೂ ಪ್ರಕರಣ ಎಲ್ಲಿಗೆ ಬಂತು? ನನ್ನ ಫ್ಯಾಮಿಲಿ ನನ್ನ ಬಿಗ್ ಸಪೋರ್ಟ್‌ ಎಂದ ಶ್ರುತಿ ಹರಿಹರನ್.......

ಲೂಸಿಯಾ, ರಾಟೆ, ಬ್ಯೂಟಿಫುಲ್ ಮನಸುಗಳು, ಊರ್ವಿ, ಹ್ಯಾಪಿ ನ್ಯೂ ಇಯರ್, ತಾರಕ್, ನಾತಿಚರಾಮಿ ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಶ್ರುತಿ ಹರಿಹರನ್‌ ವಿಸ್ಮಯಾ ಸಿನಿಮಾ ಚಿತ್ರೀಕರಣದ ವೇಳೆ ಎದುರಿಸಿದ ಸಂಕಷ್ಟವನ್ನು ಹಂಚಿಕೊಂಡರು. ಸೂಪರ್ ಸ್ಟಾರ್ ನಟನೆ ಮೇಲೆ ಮೀ ಟೂ ಆರೋಪ ಮಾಡಿದ್ದರು. ಆ ಸಮಯದಲ್ಲಿ ಫ್ಯಾಮಿಲಿ ಸಪೋರ್ಟ್ ಹೇಗಿತ್ತು ಆಮೇಲೆ ಏನಾಯ್ತು ಎಂದು ಶ್ರುತಿ ಹಂಚಿಕೊಂಡಿದ್ದಾರೆ.

'ನನ್ನ ಜೀವನದಲ್ಲಿ ಆ ನಾಲ್ಕೈದು ವರ್ಷ ತುಂಬಾ ಕಷ್ಟಗಳನ್ನು ನೋಡಿರುವೆ. 2018ರಲ್ಲಿ ನಾನು ಮೀ ಟೂ ಸ್ಟೋರಿ ಹೇಳಿಕೊಂಡ ನಂತರ ಎದುರಿಸಿದ ಮಾನಸಿಕ ಕಷ್ಟಗಳು ಒಂದೆರಡಲ್ಲ. ಈ ಘಟನೆ ಬೆನ್ನಲೆ ನಾನು ಪ್ರೆಗ್ನೆಂಟ್ ಆಗಿಬಿಟ್ಟಿ. ಪ್ರೆಗ್ನೆನ್ಸಿ ಪ್ಲ್ಯಾನ್ ಮಾಡಿರಲಿಲ್ಲ ...ಅದರ ಜೊತೆ ಕೊರೋನಾ ಪ್ಯಾಂಡಮಿಕ್ ಎದುರಾಗಿತ್ತು. ಮಗುವಿನ ಜೊತೆ ಹೆಚ್ಚಿಗೆ ಸಮಯ ಕಳೆಯುವುದಕ್ಕೆ ಆಗ ತೆಗೆದುಕೊಂಡ ಬ್ರೇಕ್ ಅಗತ್ಯವಿತ್ತು. ಪ್ಯಾಂಡಮಿಕ್‌ ಸಮಯಲ್ಲಿ ಕೆಲಸ ಇಲ್ಲದೆ ಕೂತಿದ್ದು ಕೂಡ ಸಹಾಯ ಆಯ್ತು...ಏಕೆಂದರೆ ಮಗು ಜೊತೆ ಸಂಪೂರ್ಣ ದಿನ ಕಳೆಯಬಹುದು. ನನ್ನ ಮಗಳು ಜಾನಕಿ 8 ತಿಂಗಳು ಇದ್ದಾಗ ಸಾರಾಂಶ ಸಿನಿಮಾ ಶೂಟಿಂಗ್ ಶುರು ಮಾಡಿದೆ ಅದಾದ ಮೇಲೆ ಹೆಡ್‌ಬುಷ್‌ ಚಿತ್ರೀಕರಣ ನಡೆಯುತ್ತಿದೆ. ಪ್ರತಿ ಸಿನಿಮಾ ಶೂಟಿಂಗ್‌ ಸೆಟ್‌ಗೆ ಮಗಳನ್ನು ಕರೆದುಕೊಂಡು ಹೋಗಿದ್ದೆ...ಬ್ರೇಕ್‌ಗಳ ನಡುವೆ ಹಾಲು ಕುಡಿಸುತ್ತಿದ್ದೆ. ಈಗ ನಿರ್ದೇಶನ ಕ್ಷೇತ್ರದಲ್ಲಿ ಸಖತ್ ಬ್ಯುಸಿಯಾಗಿದ್ದೀನಿ' ಎಂದು ಖಾಸಗಿ ಯುಟ್ಯೂಬ್ ಚಾನೆಲ್‌ನಲ್ಲಿ ಶ್ರುತಿ ಮಾತನಾಡಿದ್ದಾರೆ. 

ದೇಸಿ ಲುಕ್‌ನಲ್ಲಿ ಶ್ರುತಿ ಹರಿಹರನ್… ನೋಡಿ ಮಿರ್ಚಿ ಮಿರ್ಚಿ ಎಂದ ಫ್ಯಾನ್ಸ್!

ನನ್ನ ಕಥೆ ಹೇಳಿಕೊಳ್ಳಲು ಒಂದು ಕಾರಣ ಇದೆ ಏಕೆಂದರೆ ಬದಲಾವಣೆ ಅಗತ್ಯವಿದೆ. ಈಗಲೂ ಮೀ ಟೂ ಕೇಸ್ ನಡೆಯುತ್ತಿದೆ. ಈ ರೀತಿ ವಿಚಾರಗಳಲ್ಲಿ ತೀರ್ಮಾನ ತೀರ್ಪು ಕೊಡಲು ಸಾಲಲ್ಲ. ಧೈರ್ಯದಿಂದ ನಾನು ಧ್ವನಿ ಎತ್ತಿದ ಖುಷಿ ಇದೆ ಏಕೆಂದರೆ ನಮ್ಮ ಮಕ್ಕಳಿಗೆ ನಮ್ಮ ಭವಿಷ್ಯಕ್ಕೆ ಸುರಕ್ಷಿತ ಜಾಗ ಬೇಕಿದೆ. ಪಬ್ಲಿಸಿಟಿಗೆ ಈ ರೀತಿ ಮಾಡಿದೆ ಎಂದು ಅನೇಕರು ಕಾಮೆಂಟ್ ಮಾಡಿದ್ದರು. ನಿಜ ಹೇಳಬೇಕು ಅಂದ್ರೆ ಮೀ ಟೂ ಪ್ರಕರಣದಿಂದ ನನಗೆ ಒಳ್ಳೆಯದಾಗಿದೆ. ಇವತ್ತು ಗಂಡಸರು ಅಲ್ಲ ಜೆನರಲ್‌ ಆಗಿ ಎಲ್ಲರೂ ವರ್ತಿಸುವ ಮುನ್ನ ಎರಡು ಸಲ ಯೋಚನೆ ಮಾಡುತ್ತಾರೆ. ಆ ಫೇಸ್‌ ನನ್ನ ಕಂಟ್ರೋಲ್‌ನಲ್ಲಿ ಇರಲಿಲ್ಲ ಎಂದು ಶ್ರುತಿ ಹೇಳಿದ್ದಾರೆ. 

ನಾನು ತಮಿಳು, ನನ್ನ ಪತಿ ಮಲಯಾಳಿ ಆದರೆ ಮಗಳ ಜತೆಗೆ ಕನ್ನಡದಲ್ಲೇ ಮಾತನಾಡುತ್ತೇನೆ: ಶ್ರುತಿ ಹರಿಹನ್‌

ನನ್ನ ಫ್ಯಾಮಿಲಿ ತುಂಬಾ ಸಪೋರ್ಟ್ ಮಾಡಿತ್ತು ಆದರೂ ನನ್ನ ಬಗ್ಗೆ ಸಾಕಷ್ಟು ಭಯ ಇತ್ತು. ಏನೇ ಮಾಡಿದರೂ ಒಳ್ಳೆಯ ಹೆಸರು ಮಾಡಬೇಕು ಎಂದು ಹೇಳಿ ಅಮ್ಮ ನಮ್ಮನ್ನು ಬೆಳೆಸಿದ್ದು. ಈ ಘಟನೆಗಳ ಬಗ್ಗೆ ಅಮ್ಮನ ಜೊತೆ ಮಾತನಾಡಿ ನಾನು ಮುಂದೆ ಬಂದಿರುವುದು. ಯಾವ ಪರಿಸ್ಥಿತಿ ಎದುರಾದರೂ ನನ್ನನ್ನು ಮನೆಯಿಂದ ಹೊರ ಹಾಕಿಲ್ಲ. ಮತ್ತೆ ಆಕ್ಟಿಂಗ್ ಮಾಡಬೇಡ ಎಂದು ಯಾರೂ ನನಗೆ ಹೇಳಿಲ್ಲ. ಇಂಡಸ್ಟ್ರಿ ನನಗೆ ತುಂಬಾ ಮುಖ್ಯವಾಗುತ್ತದೆ ಎಂದಿದ್ದಾರೆ ಶ್ರುತಿ.