Asianet Suvarna News Asianet Suvarna News
breaking news image

ಮೀ ಟೂ ಶ್ರುತಿ ಹರಿಹರನ್‌ ಎಂದು ಕಾಲೆಳೆದ ಗುರು ಪ್ರಸಾದ್; ವ್ಯಂಗ್ಯ ತಿರುಗೇಟು ಕೊಟ್ಟ ನಟಿ

ಮತ್ತೆ ಮೀ ಟೂ ವಿಚಾರಕ್ಕೆ ಸುದ್ದಿಯಲ್ಲಿರುವ ಶ್ರುತಿ ಹರಿಹರನ್. ಗುರು ಪ್ರಸಾದ್‌ ಟೀಕೆಗೆ ಉತ್ತರ ಕೊಡ್ತಾರಾ ನಟಿ? 
 

Kannada actress Sruthi Hariharan does not respond to director Guru prasad comment vcs
Author
First Published May 8, 2024, 3:29 PM IST

ಕನ್ನಡ ಚಿತ್ರರಂಗದ ಬಬ್ಲಿ ನಟಿ ಶ್ರುತಿ ಹರಿಹರನ್ ಮದರ್‌ಹುಡ್, ಫಿಟ್ನೆಸ್‌ ಮತ್ತು ಸಿನಿಮಾ ಪ್ರಾಜೆಕ್ಟ್‌ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ನಡುವೆ 28 ಕೆಜಿ ಇಳಿಸಿಕೊಂಡು ಅನೇಕರಿಗೆ ಸ್ಫೂರ್ತಿಯಾದ ಶ್ರುತಿ, ಈ ಹಿಂದೆಯೂ ಹೆಣ್ಣು ಮಕ್ಕಳು ಧ್ವನಿ ಎತ್ತಲು ಸ್ಫೂರ್ತಿಯಾಗಿದ್ದರು. ಅದೇ ಮೀ ಟೂ ಅಭಿಯಾನ. ವಿಸ್ಮಯ ಸಿನಿಮಾ ಚಿತ್ರೀಕರಣದಲ್ಲಿ ಎದುರಿಸಿದ ಘಟನೆಯನ್ನು ಬಿಚ್ಚಿಟ್ಟ ಶ್ರುತಿಗೆ ಬೆಂಬಲ ನೀಡಿದವರಿಗಿಂತ ಟೀಕೆ ಮಾಡುತ್ತಿದ್ದವರೇ ಹೆಚ್ಚಿದ್ದರು. ಈ ವಿಚಾರದ ಬಗ್ಗೆ ಗುರು ಪ್ರಸಾದ್‌ ಕೂಡ ಮಾತನಾಡಿದ್ದರು.

'ನಟಿ ಶ್ರುತಿ ಹರಿಹರನ್ ಮೂಲ ಕನ್ನಡ ಅಲ್ಲ ಎಲ್ಲಿಂದಲೋ ಬಂದು ಕನ್ನಡದಲ್ಲಿ ರಾಡಿ ಎಬ್ಬಿಸಿದ್ದರು. ಆ ಘಟನೆಗಳ ಸಂಪೂರ್ಣ ಮಾಹಿತಿ ನನಗೆ ಗೊತ್ತು ಸೀಕ್ರೆಟ್‌ ಕೂಡ ಗೊತ್ತಿತ್ತು. ಹಾಗಾಗಿ ಕೋಪ ತ್ತು ಆದರೆ ಅದನ್ನು ತೀರಿಸಿಕೊಳ್ಳಲು ಅವಕಾಶ ಬೇಕಿತ್ತು. ನನ್ನ ಮಾಧ್ಯಮ ಸಿನಿಮಾ ಆಗಿರುವುದರಿಂದ ಆಕೆಯ ಧೋರಣೆಗೆ ದಿಕ್ಕರ ಕೂಗಬೇಕಿತ್ತು. ಹಾಗಾಗಿ ಮೀ ಟೂ ಶ್ರುತಿ ಅಂತ ಬೇಕು ಅಂತಲೇ ಹಾಡಿನಲ್ಲಿ ತಂದಿರೋದು' ಎಂದು ನಿರ್ದೇಶಕ ಗುರು ಪ್ರಸಾದ್ ಗಾಳಿ ತಂಗಾಳಿ ಹಾಡಿನ ಬಗ್ಗೆ ಹೇಳಿದ್ದರು.

8 ತಿಂಗಳಲ್ಲಿ 28 ಕೆಜಿ ತೂಕ ಕಳೆದುಕೊಂಡ ಶ್ರುತಿ ಹರಿಹರನ್; ನಿಂಬೆ ಜ್ಯೂಸ್ ಸಹಾಯ ಮಾಡಿದೆ!

ಈ ವಿಚಾರದ ಬಗ್ಗೆ ಶ್ರುತಿ ಹರಿಹರನ್ ಪ್ರತಿಕ್ರಿಯೆ ನೀಡಿದ್ದಾರೆ. 'ಕೆಲವೊಂದು ವಿಚಾರಗಳನ್ನು ಹಾಗೂ ಕೆಲವರನ್ನು ಹಾಗೆ ಸುಮ್ಮನೆ ಬಿಟ್ಟು ಬಿಡಬೇಕು. ಈ ವಿಚಾರದ ಬಗ್ಗೆ ಮಾತನಾಡಲು ನನಗೆ ಮನಸಿಲ್ಲ' ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಶ್ರುತಿ ಮಾತನಾಡಿದ್ದಾರೆ. ಗುರು ಪ್ರಸಾದ್ ಅವರ ಗಾಳಿ ತಂಗಾಳಿ ಹಾಡನ್ನು ನೋಡಿದ್ದೀನಿ ನನಗೆ ಎಲ್ಲವೂ ಗೊತ್ತಿದೆ ಅಷ್ಟೇ ಅಲ್ಲ ನಾನು ಉಳ್ಳಾಡಿ ಉಳ್ಳಾಡಿ ನಕ್ಕಿದ್ದೀನಿ ಎಂದು ಹೇಳಿದ್ದರು.

Me too ಕೇಸ್ ಮುಗಿದಿಲ್ಲ, ನನ್ನನ್ನು ಗಂಡ ಮನೆಯಿಂದ ಹೊರ ಹಾಕಿಲ್ಲ: ಶ್ರುತಿ ಹರಿಹರನ್

ಮೀಟೂ ಪ್ರಕರಣದಲ್ಲಿ ಶ್ರುತಿ ಹರಿಹರನ್‌ಗೆ ಹಿನ್ನಡೆಯಾಗಿದೆ ಎಂದು ಅನೇಕರು ಅಂದುಕೊಂಡಿದ್ದರು ಆದರೆ ಅದು ಸುಳ್ಳು, ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಇದೆ ಎಂದು ನಟಿ ಸ್ಪಷ್ಟನೆ ಕೊಟ್ಟರು. 

Latest Videos
Follow Us:
Download App:
  • android
  • ios