Asianet Suvarna News Asianet Suvarna News
breaking news image

ಯುವ ಪತ್ನಿ ಆರೋಪಕ್ಕೆ ಕೆರಳಿದ ನಟಿ ಸಪ್ತಮಿ, ಕಾನೂನು ಹೋರಾಟಕ್ಕೆ ಮುಂದಾದ ಕಾಂತಾರ ನಟಿ!

ಯುವ ರಾಜ್‌ಕುಮಾರ್ ಡಿವೋರ್ಸ್ ಹಾಗೂ ಜಟಾಪಟಿ ಭಾರಿ ಸದ್ದು ಮಾಡುತ್ತಿದೆ. ಯುವ ಪತ್ನಿ ಶ್ರೀದೇವಿ ಭೈರಪ್ಪ ಉತ್ತರಿಸಿದ ಲೀಗಲ್ ನೋಟಿಸ್‌ನಲ್ಲಿ ನಟಿ ಸಪ್ತಮಿ ಹೆಸರು ಉಲ್ಲೇಖಿಸಿದ್ದರು. ಯುವ ಹಾಗೂ ಸಪ್ತಮಿ ನಡುವೆ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಇದು ಸಪ್ತಮಿ ಗೌಡ ಕೆರಳಿಸಿದೆ. ಇದೀಗ ಶ್ರೀದೇವಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಸಜ್ಜಾಗಿದ್ದಾರೆ. 
 

Kannada Actress Sapthami gowda set to file defamation case against Yuva rajkumar Wife sridevi byrappa ckm
Author
First Published Jun 11, 2024, 5:10 PM IST

ಬೆಂಗಳೂರು(ಜೂ.11) ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ವಿಚ್ಚೇದನ ಜಟಾಪಟಿ ಭಾರಿ ಕೋಲಾಹಲ ಸೃಷ್ಟಿಸಿದೆ ಯವ ಆರೋಪಕ್ಕೆ ಲೀಗಲ್ ನೋಟಿಸ್ ಮೂಲಕ ಉತ್ತರಿಸಿರುವ ಶ್ರೀದೇವಿ ಗಂಭೀರ ಆರೋಪ ಮಾಡಿದ್ದಾರೆ. ಯುವ ರಾಜ್‌ಕುಮಾರ‌್‌ಗೆ ನಟಿ ಸಪ್ತಮಿ ಗೌಡ ಜೊತೆ ಸಂಬಂಧವಿದೆ ಎಂದು ಆರೋಪಿಸಿದ್ದಾಳೆ. ಶ್ರೀದೇವಿ ಲೀಗಲ್ ನೋಟಿಸ್‌ನಲ್ಲಿ ನಟಿ ಸಪ್ತಮಿ ಗೌಡ ಹೆಸರು ಉಲ್ಲೇಖಿಸಿರುವುದಕ್ಕೆ ಕಾಂತಾರ ನಟಿ ಹಾಗೂ ಕುಟುಂಬಸ್ಥರು ಗರಂ ಆಗಿದ್ದಾರೆ. ಇದೀಗ ಶ್ರೀದೇವಿ ಭೈರಪ್ಪ ವಿರುದ್ದ ಮಾನಹಾನಿ ಕೇಸ್ ದಾಖಲಿಸಲು ಮುಂದಾಗಿದ್ದಾಳೆ.

ಶ್ರೀದೇವಿ ಭೈರಪ್ಪಗೆ ರಾಧಯ್ಯ ಅನ್ನೋ ವ್ಯಕ್ತಿ ಜೊತೆ ಸಂಬಂಧ ಇದೆ ಎಂದು ಯುವ ರಾಜ್‌ಕುಮಾರ್ ವಕೀರಲು ಆರೋಪಿಸಿದ್ದರು. ಈ ಕುರಿತು ಶ್ರೀದೇವಿಗೆ ಲೀಗಲ್ ನೋಟಿಸ್ ಕಳುಹಿಸಿದ್ದರು. ಶ್ರೀದೇವಿ ಭೈರಪ್ಪ ವ್ಯಕ್ತಿತ್ವ ಕುರಿತು ಹೇಳಿಕೆ ನೀಡಿ ನೋಟಿಸ್ ಕಳುಹಿಸಿದ ಯುವ ರಾಜ್‌ಕುಮಾರ್ ವಿರುದ್ಧ ಶ್ರೀದೇವಿ ಗಂಭೀರ  ಆರೋಪ ಮಾಡಿದ್ದರು. ಯುವ ರಾಜ್ ಕುಮಾರ್ ಹಾಗೂ ನಟಿ ಸಪ್ತಮಿ ಗೌಡ ರಿಲೇಶನ್‌ಶಿಪ್‌ನಲ್ಲಿದ್ದಾರೆ. ಇವರಿಬ್ಬರು ಒಂದೇ ರೂಮ್‌ನಲ್ಲಿ ತಂಗಿದ್ದಾರೆ ಎಂದು ಲೀಗಲ್ ನೋಟಿಸ್‌ಗೆ ಶ್ರೀದೇವಿ ಉತ್ತರಿಸಿದ್ದರು. ಶ್ರೀದೇವಿ ಮಾಡಿದ ಗಂಭೀರ ಆರೋಪ ಭಾರಿ ಕೋಲಾಹಲ ಸೃಷ್ಟಿಸಿತ್ತು. 

ಶ್ರೀದೇವಿ ಭೈರಪ್ಪ ಆರೋಪಗಳಿಂದ ನಟಿ ಸಪ್ತಮಿ ಗೌಡ ಹಾಗೂ ಸಪ್ತಮಿ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ. ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ನಡುವಿನ ವಿಚ್ಚೇದನದಲ್ಲಿ ನಮ್ಮ ಪುತ್ರಿಯನ್ನು ಎಳೆದು ತಂದಿದ್ದೇಕೆ? ಯಾವ ಆಧಾರದಲ್ಲಿ ಸಪ್ತಮಿ ಗೌಡ ಹೆಸರು ಉಲ್ಲೇಖಿಸಿದ್ದಾರೆ ಎಂದು ಸಪ್ತಮಿ ಪೋಷಕರು ಆಕ್ರೋಶಗೊಂಡಿದ್ದಾರೆ. ಸಪ್ತಮಿ ಗೌಡ ಜೊತೆ ಸಮಾಲೋಚಿಸಿ ಕಾನೂನು ಹೋರಾಟಕ್ಕೆ ಸಪ್ತಮಿ ಕುಟುಂಬ ನಿರ್ಧರಿಸಿದೆ.

ಶ್ರೀದೇವಿ ಭೈರಪ್ಪ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಸಪ್ತಮಿ ಪೋಷಕರು ಮುಂದಾಗಿದ್ದಾರೆ. ಇಲ್ಲ ಸಲ್ಲದ ಆರೋಪ ಮಾಡಿ ಸಪ್ತಮಿ ಹಾಗೂ ನಮ್ಮ ಘನತೆ ಧಕ್ಕೆ ತಂದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಹೀಗಾಗಿ ಕಾನೂನು ರೀತಿಯಲ್ಲೇ ಹೋರಾಟ ಮಾಡುವುದಾಗಿ ಸಪ್ತಮಿ ಗೌಡ ಪೋಷಕರು ಹೇಳಿದ್ದಾರೆ.

ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ವಿಚ್ಚೇದನಕ್ಕಿಂತ ಇವರಿಬ್ಬರ ಜಟಾಪಟಿ, ಆರೋಪಗಳೇ ಭಾರಿ ಸಂಚಲನ ಸೃಷ್ಟಿಸಿದೆ. ಯುವ ಪರ ವಕೀರಲು ಬಹಿರಂಗ ಹೇಳಿಕೆ ನೀಡಿದ್ದರು. ಶ್ರೀದೇವಿ ಅಕ್ರಮ ಸಂಬಂಧದಿಂದ ದಾಂಪತ್ಯ ಜೀವನ ಮುರಿದು ಬಿದ್ದಿದೆ ಎಂದು ಆರೋಪಿಸಿದ್ದರು. ಆದರೆ ಕಳೆದ ಒಂದು ವರ್ಷದಿಂದ ಯುವ ರಾಜ್‌ಕುಮಾರ್ ಹಾಗೂ ಸಪ್ತಮಿ ಗೌಡ ಸಂಬಂಧ ಹೊಂದಿದ್ದಾರೆ. ನನ್ನನ್ನು ಮನೆಯಿಂದ ಹೊರಹಾಕಲು ಪ್ರಯತ್ನಿಸಿದ್ದಾರೆ.  ಹೊಟೆಲ್‌ನಲ್ಲಿ ಸಪ್ತಮಿ ಗೌಡ ಜೊತೆ ಇರುವಾಗಲೇ ಯುವ ರಾಜ್‌ಕುಮಾರ್ ಸಿಕ್ಕಿಬಿದ್ದಿದ್ದರು. ಇವರ ಗುಟ್ಟಾದ ರಹಸ್ಯ ಬಹಿರಂಗವಾದ ಬಳಿಕ ನನ್ನ ಮೇಲೆ ಆರೋಪ ಮಾಡಲ ಆರಂಭಿಸಿದ್ದಾರೆ ಎಂದು ಶ್ರೀದೇವಿ ಲೀಗಲ್ ನೋಟಿಸ್‌ನಲ್ಲಿ ಆರೋಪಿಸಿದ್ದಾರೆ.

Latest Videos
Follow Us:
Download App:
  • android
  • ios