ವಸಿಷ್ಠ ಚಿತ್ರದಲ್ಲಿ ಕಿರುತೆರೆ ಜನಪ್ರಿಯ ನಟಿ ಚೇತನ್ ಕೇಶವ್‌ ಆಕ್ಷನ್‌ ಕಟ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾ

ವಸಿಷ್ಠ ಸಿಂಹ ನಟನೆಯ ‘ಲವ್‌ಲಿ’ (Love Li) ಚಿತ್ರಕ್ಕೆ ಮಲೆನಾಡಿನ ಬೆಡಗಿ ಸಮೀಕ್ಷಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅವರ ನಟನೆಯ ‘ಜೇಮ್ಸ್‌’ (James), ‘99’ ಹಾಗೂ ‘ಫ್ಯಾನ್‌’ ಚಿತ್ರಗಳಲ್ಲಿ ನಟಿಸಿದ್ದ ಸಮೀಕ್ಷಾ (Samikshaa) ಈ ಚಿತ್ರದಲ್ಲಿ ಕಾರ್ಪೊರೇಟ್‌ ಹುಡುಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚೇತನ್‌ ಕೇಶವ್‌ ನಿರ್ದೇಶನದ, ಎಂ ಆರ್‌ ರವೀಂದ್ರ ಕುಮಾರ್‌ ನಿರ್ಮಾಣದ ಚಿತ್ರ ಇದು.

ವಸಿಷ್ಠ ಸಿಂಹ ಮುಂದೆ 'Love...ಲಿ' ಸಿನಿಮಾ: ಮತ್ತೊಂದು ಚಿತ್ರಕ್ಕೆ ಹೀರೋ ಆದ ಕಂಚಿನ ಕಂಠದ ನಟ

ವಸಿಷ್ಠಿ ಸಿನಿಮಾ:

ಕಂಚಿನ ಕಂಠದ ನಟ ವಸಿಷ್ಠ ಸಿಂಹ (Vasishta Simha) ಮತ್ತೊಂದು ಚಿತ್ರಕ್ಕೆ ಹೀರೋ ಆಗಿದ್ದಾರೆ. ಅವರು ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರದ ಹೆಸರು ‘ಲವ್‌ ಲಿ’ (Loveli) ಎಂಬುದು. ಈಗಷ್ಟೆ ಚಿತ್ರಕ್ಕೆ ಮುಹೂರ್ತ ಆಗಿದೆ. ಕನ್ನಡ, ತೆಲುಗು ಎರಡೂ ಭಾಷೆಗಳಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿರುವ ವಸಿಷ್ಠ ಸಿಂಹ ಅವರ ಈ ಹೊಸ ಚಿತ್ರವನ್ನು ಚೇತನ್‌ ಕೇಶವ್‌ (Chetan Keshav) ನಿರ್ದೇಶನ ಮಾಡುತ್ತಿದ್ದಾರೆ. ‘ಮಫ್ತಿ’ ನರ್ತನ್‌ ಜತೆಗೆ ಕೆಲಸ ಮಾಡಿರುವ ಅನುಭವ ಇರುವ ಚೇತನ್‌ ಕೇಶವ್‌ ಈಗ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಮಾಡಲು ಹೊರಟಿದ್ದಾರೆ. ರವೀಂದ್ರ ಕುಮಾರ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಹರೀಶ್‌ಕೊಂಬೆ ಕ್ಯಾಮೆರಾ, ಅನೂಪ್‌ ಸಿಳೀನ್‌ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಅಭಿಮಾನಿಗಳ ಪ್ರೀತಿ, ಚಪ್ಪಾಳೆ ಗಳಿಸಿದ್ರು, ಈಗ ಭಕ್ತಿನೂ ಸಂಪಾದನೆ ಮಾಡಿದ್ರು- ಅಪ್ಪು ಬಗ್ಗೆ ವಸಿಷ್ಠ ಮಾತು

ಸಿಂಹಾ ಆಡಿಯೋ ಸಂಸ್ಥೆ (Vasishta Audio) ಸ್ಥಾಪಿಸಿದ ವಸಿಷ್ಠ ಸಿಂಹ: ವಸಿಷ್ಠ ಸಿಂಹ ತಮ್ಮ ಬಹುದಿನಗಳ ಕನಸಾಗಿದ್ದ ಸಿಂಹಾ ಆಡಿಯೋ ಸಂಸ್ಥೆಯನ್ನು ಆರಂಭಿಸಿದ್ದಾರೆ. ಹಂಸಲೇಖ, ಧನಂಜಯ ಸಿಂಹಾ ಆಡಿಯೋ ಸಂಸ್ಥೆಯ ಲೋಗೋವನ್ನು ಅನಾವರಣ ಮಾಡಿ ಸಂಸ್ಥೆಗೆ ಚಾಲನೆ ನೀಡಿದ್ದಾರೆ. ಸಿಂಹಾ ಆಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿ ಮೊದಲ ಹಾಡಾಗಿ ವಸಿಷ್ಠ ಸಿಂಹ ನಾಯಕನಾಗಿ ನಟಿಸಿರುವ ‘ಕಾಲಚಕ್ರ’ ಚಿತ್ರದ ನೀನೇ ಬೇಕು ಹಾಡು ಬಿಡುಗಡೆಯಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಂಸಲೇಖ, ‘ವಸಿಷ್ಠ ನನ್ನ ವಿದ್ಯಾರ್ಥಿಯಾಗಿದ್ದ. ಕಂಠ ಚೆನ್ನಾಗಿದೆ ನಟನೆ ಕಡೆಗೂ ಆಸಕ್ತಿ ತೋರಿಸು ಎಂದಿದ್ದೆ.