Asianet Suvarna News Asianet Suvarna News

ರಶ್ಮಿಕಾ ಮಂದಣ್ಣಗೆ ಪದೇ ಪದೇ ಕಿರಿಕಿರಿ ಮಾಡುದ್ರೆ ಹೀಗೆ ಮಾಡ್ತಾರಂತೆ!

ಪಂಚಿಂಗ್​ ಬ್ಯಾಗ್​ಗೆ ಕಿಕ್ ಮಾಡುತ್ತಿರುವ ರಶ್ಮಿಕಾ, 'ನನಗೆ ತುಂಬಾ ಕಿರಿಕಿರಿಯಾಗಿದ್ದಾಗ ಇದನ್ನೇ ಮಾಡೋದು' ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

Kannada Actress Rashmika Mandanna Instagram Post Viral
Author
Bangalore, First Published Oct 23, 2021, 5:18 PM IST
  • Facebook
  • Twitter
  • Whatsapp

ಚಮಕ್ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ತಮ್ಮ ಸಿನಿಮಾಗಳ ಚಿತ್ರೀಕರಣಗಳಲ್ಲಿ ಬ್ಯುಸಿಯಾಗಿದ್ದಾರೆ. ಇವರು ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ಲೈಫ್ ಸ್ಟೈಲ್‌ ಸೇರಿದಂತೆ ಸಿನಿಮಾದ ಮಾಹಿತಿಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಯಾರು ಎಷ್ಟೇ ಟ್ರೋಲ್​ ಮಾಡಿದರೂ ಅದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೂ ಆಗಾಗ ಟ್ರೋಲ್‌ಗಳಿಗೆ ರಶ್ಮಿಕಾ ಒಳಗಾಗುತ್ತಿರುತ್ತಾರೆ.

ಇತ್ತಿಚೆಗಷ್ಟೇ, ನಾನು ತಡ ಮಾಡಿದ್ದೇನೆ ಎಂದು ಹೇಳುವ ಮೂಲಕವೇ ವಿಭಿನ್ನವಾಗಿ ದಸರಾ ಶುಭಾಶಯವನ್ನು ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳಿಗೆ ತಿಳಿಸಿದ್ದರು. ಇದೀಗ ಅವರು ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಪಂಚಿಂಗ್​ ಬ್ಯಾಗ್​ಗೆ ಕಿಕ್ ಮಾಡುತ್ತಿರುವ ವಿಡಿಯೋವೊಂದನ್ನು (Video) ಹಂಚಿಕೊಂಡಿದ್ದಾರೆ. 
 


ವಿಡಿಯೋದಲ್ಲಿ ಕಿಕ್​ ಪ್ರಾಕ್ಟೀಸ್​ ಮಾಡುತ್ತಿರುವ ರಶ್ಮಿಕಾ, 'ನನಗೆ ತುಂಬಾ ಕಿರಿಕಿರಿಯಾಗಿದ್ದಾಗ ಇದನ್ನೇ ಮಾಡೋದು' ಅಂತ ಕ್ಯಾಪ್ಷನ್ ಬೇರೆ ಕೊಟ್ಟಿದ್ದಾರೆ. ಇನ್ನು ವಿಡಿಯೋಗೆ ನೆಟ್ಟಿಗರು, 'ಈ ವಿಡಿಯೋ ನೋಡಿದ ನಂತರ ನಿಮ್ಮ ಸಿನಿಮಾದ ನಿರ್ದೇಶಕರು ರೀ-ಟೇಕ್ ಹೇಳೋದೇ ಇಲ್ಲ ಎಂದು ಕಾಮೆಂಟ್ ಮಾಡಿದರೆ ಲವ್ (Love), ಹಾರ್ಟ್ (Heart) ಎಮೋಜಿಗಳು ಸೇರಿದಂತೆ ತರೇಹವಾರಿ ಕಾಮೆಂಟ್‌ಗಳನ್ನು ಮಿಕ್ಕ ನೆಟ್ಟಿಗರು ಮಾಡುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಯಶ್‌ ಹಿಂದಿಕ್ಕಿದ ರಶ್ಮಿಕಾ  ನಂಬರ್ 1!

ರಶ್ಮಿಕಾ, ವಿಕ್ಕಿ ಕೌಶಲ್ (Vicky Kaushal) ಜೊತೆಗೆ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳಿಗೆ ಒಳಗಾಗಿದ್ದರು. ಹಾಗೂ ಇತ್ತೀಚೆಗೆ ಬಾಲಿವುಡ್‌ ನಟ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಜೊತೆ ತಮ್ಮ ಮೊದಲ ಚಿತ್ರ 'ಮಿಷನ್ ಮಜ್ನು' (Mission Majnu) ಚಿತ್ರೀಕರಣವನ್ನು ಮುಗಿಸಿ, 'ಗುಡ್​​ಬೈ' (Good bye) ಚಿತ್ರದ ಕೆಲಸಗಳಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಅಲ್ಲದೇ ಮಾಲಿವುಡ್ (Mollywood) ಸ್ಟಾರ್ ದುಲ್ಖರ್​ ಸಲ್ಮಾನ್ (Dulquer Salmaan)​ ನಟನೆಯ ಹೊಸ ಚಿತ್ರದಲ್ಲಿ ರಶ್ಮಿಕಾ ಅತಿಥಿ ಪಾತ್ರ ಮಾಡುತ್ತಾರೆ ಎಂಬ ಮಾಹಿತಿ ಕೂಡ ಕೇಳಿಬರುತ್ತಿದೆ. 

ಲೇಟಾಗಾದರೂ ಲೇಟೆಸ್ಟಾಗಿ ದಸರಾ ವಿಶ್ ಮಾಡಿದ ರಶ್ಮಿಕಾ ಮಂದಣ್ಣ

ಸುಕುಮಾರ್ (Sukumar) ನಿರ್ದೇಶನದ ಅಲ್ಲು ಅರ್ಜುನ್ (Allu Arjun) ಜೊತೆ 'ಪುಷ್ಪ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಡಿಸೆಂಬರ್ 17ರಂದು ಚಿತ್ರ ಬಿಡುಗಡೆ ಆಗಲಿದೆ. ಶ್ರೀವಲ್ಲಿ ಎಂಬ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದು, ಈ ಹಿಂದೆ ಶ್ರೀವಲ್ಲಿ ಪಾತ್ರದ ಪೋಸ್ಟರ್ ಮತ್ತು ಹಾಡು ಬಿಡುಗಡೆಯಾಗಿತ್ತು. ಪೋಸ್ಟರ್‌ನಲ್ಲಿ, ಶ್ರೀವಲ್ಲಿ (Srivalli) ತನ್ನ ಕಿವಿಯೋಲೆಗಳಲ್ಲಿ ಒಂದನ್ನು ಧರಿಸಿ ಏನಕ್ಕೋ ಸಿದ್ಧವಾಗುತ್ತಿರುವಂತೆ ರಶ್ಮಿಕಾ ಪೋಸ್ ಕೊಟ್ಟಿದ್ದರು.

Follow Us:
Download App:
  • android
  • ios