Asianet Suvarna News Asianet Suvarna News

ರಾಕಿಂಗ್ ಸ್ಟಾರ್ ಯಶ್‌ ಹಿಂದಿಕ್ಕಿದ ರಶ್ಮಿಕಾ  ನಂಬರ್ 1!

* ರಾಕಿಂಗ್ ಸ್ಟಾರ್ ಯಶ್ ಅವರನ್ನು ಹಿಂದಕ್ಕೆ ಹಾಕಿದ ರಶ್ಮಿಕಾ ಮಂದಣ್ಣ
* ದಕ್ಷಿಣ ಭಾರತದ ನಟ-ನಟಿಯರ ಪಟ್ಟಿಯಲ್ಲಿರಶ್ಮಿಕಾಗೆ ಅಗ್ರಸ್ಥಾನ
* ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚಿನ ಫಾಲೋವರ್ ಸಂಪಾದನೆ 

Forbes most influential actors Rashmika Mandanna beats Rocking Star Yash to take top spot mah
Author
Bengaluru, First Published Oct 19, 2021, 3:48 AM IST
  • Facebook
  • Twitter
  • Whatsapp

ಬೆಂಗಳೂರು(ಅ.  19) ಕನ್ನಡದ(Sandalwood) ಕಿರಿಕ್ ಪಾರ್ಟಿ (Kirik Party) ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶ ಮಾಡಿ ನಂತರ ಟಾಲಿವುಡ್(Tollywood) ನಲ್ಲಿ ಮುಂಚಿ ಈಗ ಬಾಲಿವುಡ್ (Bollywood)ಗೂ ಹಾರಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ರಾಕಿಂಗ್ ಸ್ಟಾರ್ ಯಶ್ (Yash) ಅವರನ್ನು ಹಿಂದಕ್ಕೆ ಹಾಕಿದ್ದಾರೆ. 

ಸೋಶಿಯಲ್ ಮೀಡಿಯಾದಲ್ಲಿಯೂ(Social Media) ರಶ್ಮಿಕಾ ಸದಾ ಆಕ್ಟೀವ್. ಸೌತ್ ಇಂಡಿಯನ್  ನಟ-ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಯಾರು ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ಎಂಬ ಪಟ್ಟಿಯನ್ನು ಫೋರ್ಬ್ಸ್ (Forbes most influential actors) ಬಿಡುಗಡೆ ಮಾಡಿದ್ದು ರಾಕಿಂಗ್ ಸ್ಟಾರ್ ಯಶ್ ಅವರನ್ನು ರಶ್ಮಿಕಾ ಹಿಂದಕ್ಕೆ ಹಾಕಿದ್ದಾರೆ.  ಅತಿ ಹೆಚ್ಚು ಪ್ರಭಾವಶಾಲಿ ನಟ-ನಟಿಯರು ಪಟ್ಟಿಯಲ್ಲಿ ದಕ್ಷಿಣ ಭಾರತದ ಲೆಕ್ಕಾಚಾರ ತೆಗೆದುಕೊಂಡರೆ ರಶ್ಮಿಕಾಗೆ ಅಗ್ರ ಸ್ಥಾನ ಸಿಕ್ಕಿದೆ. 

ಇಸ್ಟಾಗ್ರ್ಯಾಮ್ ನಲ್ಲಿ ರಶ್ಮಿಕಾ 22.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಕೆಜೆಎಫ್ (KGF) ಸ್ಟಾರ್ ಯಶ್ 5.2  ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.   ರಶ್ಮಿಕಾ ತೆಲುಗಿನಲ್ಲಿಯೂ ಸೂಪರ್  ಹಿಟ್ ಸಿನಿಮಾಗಳನ್ನು ನೀಡಿದವರು.  ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಅತಿ ಹೆಚ್ಚಿನ ಟ್ರೋಲ್ ಗೂ ಒಳಗಾಗುತ್ತಾರೆ.

ಗೋವಾ ಬೀಚ್ ನಲ್ಲಿ ವಿಜಯ್ ದೇವರಕೊಂಡ ಜತೆ ರಶ್ಮಿಕಾ ಸುತ್ತಾಟ

ಯಾರು ಹೆಚ್ಚು ಬೆಂಬಲಿಗರನ್ನು ಹೊಂದಿದ್ದಾರೆ? ಯಾರ ಪೋಸ್ಟ್ ಗೆ ಹೆಚ್ಚಿನ ಲೈಕ್ ಬರುತ್ತದೆ? ಹೀಗೆ ಹಲವಾರು ಅಂಶಗಳ ಆಧಾರದಲ್ಲಿ ಪಟ್ಟಿ ಸಿದ್ಧ ಮಾಡಲಾಗಿದ್ದು ರಶ್ಮಿಕಾ ಮುಂದಕ್ಕೆ ಸಾಗಿದ್ದಾರೆ. 

ರಶ್ಮಿಕಾ 9.88 ಪಾಯಿಂಟ್ ಸಂಪಾದನೆಯೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ವಿಜಯ್ ದೇವರಕೊಂಡ (Vijay Deverakonda) 9.67  ಅಂಕ ಸಂಪಾದನೆಯೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ ಯಶ್ ಅವರ ಗಳಿಕೆ 9.54  ಇದ್ದು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಸಮಂತಾ ಮತ್ತು ಅಲ್ಲು ಅರ್ಜುನ್ ನಂತರದ ಸ್ಥಾನಗಳಲ್ಲಿ ಇದ್ದಾರೆ. ಕನ್ನಡ,  ತಮಿಳು, ತೆಲಗು ಮತ್ತು ಮಲಯಾಳಂ ಸಿನಿಮಾ ಲೋಕದ ಆಧಾರದ ಮೇಲೆ ಪಟ್ಟಿ ಬಿಡುಗಡೆ ಮಾಡಲಾಗಿದೆ. 

ಜಾಹೀರಾತು ವಿವಾದ; ರತಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದ ಜಾಹೀರಾತೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗೆ ಗುರಿಯಾಗಿತ್ತು.  ವಿಕ್ಕಿ ಕವಶಲ್ ಮತ್ತು ರಶ್ಮಿಕಾ ಒಳಉಡುಪಿನ ಜಾಹೀರಾತಿನಲ್ಲಿದ್ದರು. 

 

 
 
 
 
 
 
 
 
 
 
 
 
 
 
 

A post shared by Yash (@thenameisyash)

Follow Us:
Download App:
  • android
  • ios