Asianet Suvarna News Asianet Suvarna News

ಲೇಟಾಗಾದರೂ ಲೇಟೆಸ್ಟಾಗಿ ದಸರಾ ವಿಶ್ ಮಾಡಿದ ರಶ್ಮಿಕಾ ಮಂದಣ್ಣ

* ತಡವಾಗಿ ದಸರಾ ಶುಭಾಶಯ ಕೋರಿದ ರಶ್ಮಿಕಾ
* ನಿಮ್ಮ ಮುಖದಲ್ಲಿ ಖುಷಿ ಮೂಡಿಸಲು ನಾನು ಬಯಸುತ್ತೇನೆ
* ನೀವೆಲ್ಲರೂ ನನ್ನ ಪಾಲಿನ ಬೆಸ್ಟ್ ವ್ಯಕ್ತಿಗಳೆಂದ ಕಿರಿಕ್ ಬೆಡಗಿ

Late and Latest Dasara wished By Sandalwood actress Rashmika Mandanna rbj
Author
Bengaluru, First Published Oct 16, 2021, 6:44 PM IST
  • Facebook
  • Twitter
  • Whatsapp

ಸಿನಿಮಾ ಸೆಲೆಬ್ರಿಟಿಗಳು (Celebrities) ತಮ್ಮ ಅಭಿಮಾನಿಗಳಿಗೆ ಹಬ್ಬದ ಶುಭಾಶಯಗಳನ್ನು ಅಂದಿನ ದಿನವೇ ತಿಳಿಸುವುದು ವಾಡಿಕೆ. ಆದರೆ ಇಲ್ಲೊಬ್ಬ ನಟಿ ಹಬ್ಬದ ದಿನ ಬಿಟ್ಟು, ನವರಾತ್ರಿ ಆಗಿ, ದಶಮಿ ಕಳೆದ ನಂತರ ದಸರಾ ಶುಭಾಶಯವನ್ನು (Wish) ಅಭಿಮಾನಿಗಳಿಗೆ (Fans) ತಿಳಿಸಿದ್ದಾರೆ.

ಹೌದು! ಚಮಕ್ ಬೆಡಗಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ನಾನು ತಡ ಮಾಡಿದ್ದೇನೆ ಎಂದು ಹೇಳುವ ಮೂಲಕವೇ ವಿಭಿನ್ನವಾಗಿ ದಸರಾ ಶುಭಾಶಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ತಿಳಿಸಿದ್ದಾರೆ. ಈ ಬಗ್ಗೆ 'ನಾನು ತಡ ಮಾಡಿದ್ದೇನೆ ಎಂಬುವುದು ಗೊತ್ತು. ಆದರೂ ದಸರಾ ಹಬ್ಬದ ಶುಭಾಶಯಗಳು. ಹಬ್ಬ ಎಂದರೆ ನಗು ಮತ್ತು ಸಂಭ್ರಮ.

ಹಬ್ಬದಲ್ಲಿ ಮಾತ್ರವಲ್ಲದೇ ಸದಾ ಕಾಲ ಖುಷಿ ನೀಡಲು ಬಯಸುತ್ತೇನೆ. ನನ್ನನ್ನು ಅಥವಾ ನನ್ನ ಕೆಲಸವನ್ನು ನೋಡಿದಾಗ ನಿಮ್ಮ ಮುಖದಲ್ಲಿ ಖುಷಿ ಮೂಡಿಸಲು ನಾನು ಬಯಸುತ್ತೇನೆ. ಇದನ್ನು ಹೇಳಬೇಕು ಎನಿಸಿತು. ನೀವೆಲ್ಲರೂ ನನ್ನ ಪಾಲಿನ ಬೆಸ್ಟ್ ವ್ಯಕ್ತಿಗಳು ಎಂದು ಅಭಿಮಾನಿಗಳಿಗೆ ರಶ್ಮಿಕಾ ವಿಶ್ (Wish) ಮಾಡಿ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. 

ರಶ್ಮಿಕಾ ತಡವಾಗಿ ದಸರಾ (Dasara) ಶುಭಾಶಯಗಳನ್ನು ಪೋಸ್ಟ್ ಮಾಡಿದಕ್ಕೆ ಕೆಲವು ನೆಟ್ಟಿಗರು ಮೈ ಶ್ರೀವಲ್ಲಿ ನೀನು ತುಂಬಾ ಮುದ್ದಾಗಿದ್ಯಾ, ಕ್ಯೂಟ್ ಡಾಲ್ (ಮುದ್ದು ಗೊಂಬೆ), ಯೂ ಆರ್ ಸೋ ಸ್ವೀಟ್ ಸೇರಿದಂತೆ ಲವ್ (Love), ಹಾರ್ಟ್ (Heart) ಎಮೋಜಿಗಳನ್ನು ನೆಟ್ಟಿಗರು ಪೋಸ್ಟ್ ಮಾಡಿದ್ದಾರೆ.

ಸುಕುಮಾರ್ (Sukumar) ನಿರ್ದೇಶನದ ಅಲ್ಲು ಅರ್ಜುನ್ (Allu Arjun) ಜೊತೆ ರಶ್ಮಿಕಾ ಮಂದಣ್ಣ  ನಟಿಸಿರುವ 'ಪುಷ್ಪ' ಚಿತ್ರ ಡಿಸೆಂಬರ್ 17ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಅವರು ಶ್ರೀವಲ್ಲಿ ಎಂಬ ಪಾತ್ರ ಮಾಡಿದ್ದಾರೆ. ಇತ್ತೀಚೆಗೆ ಶ್ರೀವಲ್ಲಿ ಪಾತ್ರದ ಪೋಸ್ಟರ್ ಮತ್ತು ಸಾಂಗ್ ಬಿಡುಗಡೆ ಆಗಿತ್ತು.

ಹೈದರಾಬಾದ್, ಮುಂಬೈ ಆಯ್ತು ಈಗ ಗೋವಾದಲ್ಲೂ ಮನೆ ತಗೊಂಡ ರಶ್ಮಿಕಾ?

ಪೋಸ್ಟರ್‌ನಲ್ಲಿ, ಶ್ರೀವಲ್ಲಿ (Srivalli) ತನ್ನ ಕಿವಿಯೋಲೆಗಳಲ್ಲಿ ಒಂದನ್ನು ಧರಿಸಿ ಏನಕ್ಕೋ ಸಿದ್ಧವಾಗುತ್ತಿರುವಂತೆ ಪೋಸ್ ಕೊಟ್ಟಿದ್ದರು. 'ಪುಷ್ಪ'ವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲಾಗುವುದು ಎನ್ನಲಾಗಿದ್ದು, 'ಪುಷ್ಪ: ದಿ ರೈಸ್' (Pushpa: The Rise) ಎಂಬ ಶೀರ್ಷಿಕೆಯ ಮೊದಲ ಭಾಗ ಕ್ರಿಸ್‌ಮಸ್  (Christmas) ವೇಳೆ 2021 ರಲ್ಲಿ ಬಿಡುಗಡೆಯಾಗಲಿದೆ.

ರಶ್ಮಿಕಾಗೆ ಈಗಾಗಲೇ ಬಾಲಿವುಡ್‌ನಿಂದ (Bollywood) ಆಫರ್ ಬಂದಿದ್ದು, ಇತ್ತೀಚೆಗೆ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಜೊತೆ ತಮ್ಮ ಮೊದಲ ಚಿತ್ರ 'ಮಿಷನ್ ಮಜ್ನು' (Mission Majnu) ಚಿತ್ರೀಕರಣವನ್ನು ಮುಗಿಸಿ, 'ಗುಡ್​​ಬೈ' (Good bye) ಚಿತ್ರದ ಕೆಲಸಗಳಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ.

ರಶ್ಮಿಕಾ ದಕ್ಷಿಣದ ಶ್ರೀಮಂತ ನಟಿ? ಟಾಪ್ ಸಿಟಿಗಳಲ್ಲಿ ಆಸ್ತಿ ಖರೀದಿ

ಮಾಲಿವುಡ್ (Mollywood) ಸ್ಟಾರ್ ದುಲ್ಖರ್​ ಸಲ್ಮಾನ್ (Dulquer Salmaan)​ ನಟನೆಯ ಹೊಸ ಚಿತ್ರದಲ್ಲಿ ರಶ್ಮಿಕಾ ಅತಿಥಿ ಪಾತ್ರ ಮಾಡುತ್ತಾರೆ ಎಂಬ ಮಾಹಿತಿ ಕೂಡ ಕೇಳಿಬರುತ್ತಿದೆ. ಇತ್ತಿಚೆಗಷ್ಟೇ ರಶ್ಮಿಕಾ ವಿಕ್ಕಿ ಕೌಶಲ್ (Vicky Kaushal) ಜೊತೆಗೆ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳಿಗೆ ಒಳಗಾಗಿದ್ದರು. ಸದಾ ಟ್ರೋಲ್‌ಗೆ ಗುರಿಯಾಗುವ ಗೀತ ಗೋವಿಂದಂ ನಟಿ ಈ ಸಾರಿ ವಿಜಯ ದಶಮಿ ಮುಗಿದ ಮೇಲೆ ದಸರಾ ವಿಶ್ ಮಾಡಿದ್ದಕ್ಕೆ ಇನ್ನು ಹೇಗೆ ಟ್ರೋಲ್ ಆಗುತ್ತಾರೋ ಕಾದು ನೋಡಬೇಕು.

Follow Us:
Download App:
  • android
  • ios