Asianet Suvarna News Asianet Suvarna News

ಸೌಂಡ್‌ ಇಲ್ಲದೆ ಸೀಟಿ ಹೊಡೆದ ರಮ್ಯಾ.. ಇಷ್ಟೊಂದು ಖುಷಿಗೆ ಏನ್ ಕಾರಣ?

ಸೀಟಿ ಹೊಡೆದ ಮೋಹಕ ತಾರೆ/ ಯಾರನ್ನು  ನೋಡಿ ರಮ್ಯಾ ಸೀಟಿ ಹೊಡೆದ್ರು? ಮುದ್ದಿನ ಶ್ವಾನದೊಂದಿಗೆ ನೆಚ್ಚಿನ ಚಿತ್ರ/ ನೀವು ನನ್ನ ಜತೆ ಸೇರಿ ಸೀಟಿ ಹೊಡೆಯಿರಿ ಎಂದು ಕೇಳಿಕೊಂಡ ನಟಿ

Actres  Ramya divya spandana with her dog video goes viral  mah
Author
Bengaluru, First Published Mar 7, 2021, 6:55 PM IST

ಬೆಂಗಳೂರು(ಮಾ.  07) ​ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಿಂದ ದೂರ ಉಳಿದು ಅದೇನು ಮಾಡುತ್ತಿದ್ದಾರೆ ಎಂಬುದಾಗಿ ಮಾತ್ರ ಯಾರಿಗೂ ಗೊತ್ತಿಲ್ಲ.   ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್.. ರಮ್ಯಾ ಸೀಟಿ ಹೊಡೆದಿದ್ದಾರೆ ಆದರೆ ಸೌಂಡ್ ಮಾತ್ರ ಬಂದಿಲ್ಲ.

ತಮ್ಮ ಮುದ್ದಿನ ಶ್ವಾನದ ಜತೆಗಿನ ವಿಡಿಯೋ ಒಂದನ್ನು ಹಂಚಿಕೊಂಡಿರುವ ರಮ್ಯಾ ಸೀಟಿ ಹೊಡೆದಿದ್ದಾರೆ. ದೆಹಲಿಯಲ್ಲಿ ವಾಸವಿರುವ ರಮ್ಯಾ ತಮ್ಮ ಶ್ವಾನಗಳ ಜೊತೆ ಹೆಚ್ಚಿನ ಸಮಯ ಕಳೆಯುತ್ತಾರೆ. ಸದಾ ಅವುಗಳ ಜೊತೆ ಇನ್‌ಸ್ಟಾಗ್ರಾಂ ಸ್ಟೋರಿ ಹಾಕುತ್ತಿದ್ದ ನಟಿ ಇದೀಗ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. 

ದೂರ ಉಳಿದ ರಮ್ಯಾ ಈ ಮೂವರಿಗೆ ತುಂಬಾ ಹತ್ತಿರ

ಯಾರು ಯಾರು ನನ್ನ ನೆನಪಿನಲ್ಲಿ ಇಟ್ಟುಕೊಂಡಿದ್ದೀರಿ.. ಯೆಸ್ ನನಗೆ ಶಬ್ದ ಮರೆತುಗೋಗಿದೆ. ಆದರೆ ಸೀಟಿ ಶಬ್ದ ಹೇಗಿರುತ್ತದೆ ಎಂಬುದು ನಿಮ್ಮೆಲ್ಲರಿಗೂ ಗೊತ್ತೆ ಇದೆ. ನನ್ನ ಜತೆ ಸೇರಿ ಸೀಟಿ ಹೊಡೆಯಿರಿ. ನಾನು ಚಾಂಪಿಯನ್(ಶ್ವಾನ) ಗಮನ ಸೆಳೆಯುವ ಯತ್ನ ಮಾಡಿ ವಿಫಲಳಾಗಿದ್ದೇನೆ...

ಹೀಗೆಂದು ಬರೆದುಕೊಂಡಿರುವ ರಮ್ಯಾ ತಮ್ಮ ಶ್ವಾನ ಪ್ರೀತಿ ಮೆರೆದಿದ್ದಾರೆ. ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಉಸ್ತುವಾರಿಯನ್ನು ಒಂದು ಕಾಲದಲ್ಲಿ ನೋಡಿಕೊಳ್ಳುತ್ತಿದ್ದ ರಮ್ಯಾ ಇದೀಗ ಸ್ವಲ್ಪ ದೂರವೇ ಉಳಿದಿದ್ದಾರೆ.

 

 

Follow Us:
Download App:
  • android
  • ios