Who the Hell Said I died?; ಸ್ಪಷ್ಟನೆ ಕೊಟ್ಟ ರಮ್ಯಾ, ನಾಳೆ ಬೆಂಗಳೂರಿಗೆ ವಾಪಸ್!
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ನಟಿ ರಮ್ಯಾ ಇನ್ನಿಲ್ಲ ಎಂದು. ತಮಿಳು ವಾಹಿನಿ ಮಾಡಿದ ತಪ್ಪಿಗೆ ರಮ್ಯಾ ಗರಂ.....

ಕನ್ನಡ ಚಿತ್ರರಂಗ ಮೋಹಕ ತಾರೆ ರಮ್ಯಾ ಕಳೆದ ಒಂದು ವಾರದಿಂದ ವಿಶೇಷ ಪ್ರವಾಸದಲ್ಲಿದ್ದಾರೆ. ತಮ್ಮ ಆಪ್ತ ಬಳಗದ ಜೊತೆ ಎಂಜಾಯ್ ಮಾಡುತ್ತಿರುವ ಬೆಳ್ಳಂಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿತ್ತು. ಒಂದು ನಿಮಿಷ ಇಡೀ ಕರ್ನಾಟಕದ ಜನತೆಯ ಹಾರ್ಟ್ ಬೀಟ್ ಸ್ಟಾಪ್ ಆಯ್ತು...ಪ್ರತಿಯೊಬ್ಬರಿಗೂ ಕರೆ ಮಾಡಿದ ವಿಚಾರಿಸುವುದು...ಇದು ನಿಜವೇ ಇದು ಸತ್ಯವೇ ಎಂದು...ಆದರೆ ನಿಜಕ್ಕೂ ನಡೆದಿರುವುದೇ ಬೇರೆ.
ರಮ್ಯಾ ಸ್ಪಷ್ಟನೆ:
ಸದ್ಯ Genevaದಲ್ಲಿರುವ ರಮ್ಯಾ ಪತ್ರಕರ್ತರೊಬ್ಬರು ಕರೆ ಮಾಡಿದ್ದಾರೆ. ರಮ್ಯಾ ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ. 'ನಾನು ಈಗಷ್ಟೆ ರಮ್ಯಾ ಜೊತೆ ಮಾತನಾಡಿದೆ ಆಕೆ ಜೆನಿವಾದಲ್ಲಿದ್ದಾರೆ ನಾನ್ ಸ್ಟಾಪ್ ಕರೆ ಬರುವವರೆಗೂ ನೆಮ್ಮದಿಯಾಗಿ ನಿದ್ರೆ ಮಾಡುತ್ತಿದ್ದರು. ಯಾರು ಈ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ನಾಚಿಕೆ ಆಗಬೇಕು ನಿಮಗೆ ಕ್ಷಮೆ ಕೇಳಬೇಕು'ಎಂದು ಮೊದಲು ಟ್ವೀಟ್ ಮಾಡುತ್ತಾರೆ.
'ಗಿಚ್ಚಿ ಗಿಲಿಗಿಲಿ' ಚಂದ್ರಪ್ರಭ ಕಾರು ಡಿಕ್ಕಿ, ಕುಡಿದು ಚಲಾಯಿಸುತ್ತಿದ್ದರು ಎಂದ ಆರೋಪ; ಕಾರು ವಶಕ್ಕೆ ಪಡೆಯದ ಪೊಲೀಸರು
ಮತ್ತೊಂದು ಟ್ವೀಟ್‌ನಲ್ಲಿ ' ಖಂಡಿತ ರಮ್ಯಾ ಜೊತೆ ಈಗ ನಡೆದ ಸಂಭಾಷನೆ ತುಂಬಾ ವಿಚಿತ್ರವಾಗಿತ್ತು. ರಮ್ಯಾಗೆ ನಾನ್‌ಸ್ಟಾಪ್ ಕರೆ ಮಾಡುತ್ತಿದ್ದೆ ಅವರು ಪಿಕ್ ಮಾಡದ ಕಾರಣ ನನಗೆ ಸಹಜವಾಗಿ ಎಲ್ಲರಂತೆ ಗಾಬರಿ ಆಗಿತ್ತು. ಕೊನೆ ಪ್ರಯತ್ನದ ಕರೆಯನ್ನು ಸ್ವೀಕರಿಸಿದ್ದರು..ಸದ್ಯ ನೀವು ಬದುಕಿದ್ದೀರಿ ಎಂದು ನಾನು ಹೇಳಿಕೆ ಅದಕ್ಕೆ ರಮ್ಯಾ who the hell is saying I died ಎಂದರು' ಎಂದು ಬರೆದುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹಠಾತ್ ಟ್ರೆಂಡ್ ಆದ ರಮ್ಯಾ ನಿಧನ ಸುದ್ದಿ, ನಿಜಾಂಶ ಏನು?
ಎಸ್‌ಎಸ್ ಮ್ಯೂಸಿಕ್, ದಿನಕರನ್ ಹಾಗೂ ಕೆಲವೊಂದು ಅಧಿಕೃತ ಟ್ವಿಟರ್ ಪೇಜ್‌ಗಳು ಕೂಡ ನಟಿ ರಮ್ಯಾ ಅವರ ಚಿತ್ರಗಳನ್ನು ಪೋಸ್ಟ್ ಮಾಡಿ ಕಾರ್ಡಿಯಾಕ್ ಅರೆಸ್ಟ್‌ನಿಂದ ನಿಧನರಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದವು. ಆದರೆ, ಮೂಲಗಳ ಪ್ರಕಾರ ತಮಿಳಿನಲ್ಲಿ ರಮ್ಯಾ ಹೆಸರಿನ ಸಣ್ಣ ನಟಿಯೊಬ್ಬರು ನಿಧನರಾಗಿದ್ದು, ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಮೋಹಕತಾರೆ ರಮ್ಯಾ ಅವರು ನಿಧನರಾಗಿದ್ದಾರೆ ಎಂದು ಸುದ್ದಿ ಮಾಡಲಾಗಿತ್ತು. ಏಷ್ಯಾನೆಟ್ ಸುವರ್ಣ ನ್ಯೂಸ್ ಈ ಕುರಿತಾಗಿ ಮಾಹಿತಿ ಪಡೆದಿದ್ದು ರಮ್ಯಾ ಸಾವಿನ ಸುದ್ದಿ ಫೇಕ್. ಇನ್ನು ರಮ್ಯಾ ಜೊತೆ ಸ್ವಿಜರ್ಲೆಂಡ್‌ನ ಜಿನೇವಾದಲ್ಲಿರುವ ಪತ್ರಕರ್ತೆ ಚಿತ್ರಾ ಸುಬ್ರಮಣ್ಯಂ ಕೂಡ ಟ್ವೀಟ್ ಮಾಡಿ ರಮ್ಯಾ ಅವರಿಗೆ ಏನೂ ಆಗಿಲ್ಲ ಎಂದು ಖಚಿತಪಡಿಸಿದ್ದಾರೆ. 'ಈಗ ತಾನೆ ನಾನು ರಮ್ಯಾ ಅವರ ಜೊತೆ ಮಾತನಾಡಿದೆ. ಆಕೆ ಚೆನ್ನಾಗಿಯೇ ಇದ್ದಾರೆ. ಈಗ ಜೆಕ್ ಗಣರಾಜ್ಯದ ಪ್ರೇಗ್‌ಗೆ ತೆರಳುತ್ತಿದ್ದು, ಆ ಬಳಿಕ ಬೆಂಗಳೂರಿಗೆ ವಾಪಾಸಾಗುತ್ತಿದ್ದೇವೆ' ಎಂದು ಬರೆದುಕೊಂಡಿದ್ದಾರೆ.