'ಗಿಚ್ಚಿ ಗಿಲಿಗಿಲಿ' ಚಂದ್ರಪ್ರಭ ಕಾರು ಡಿಕ್ಕಿ, ಕುಡಿದು ಚಲಾಯಿಸುತ್ತಿದ್ದರು ಎಂದ ಆರೋಪ; ಕಾರು ವಶಕ್ಕೆ ಪಡೆಯದ ಪೊಲೀಸರು
ದ್ವಿಚಕ್ರ ವಾಹನಕ್ಕೆ ಗುದ್ದಿದ್ದರೂ ಸಹಾಯ ಮಾಡಿದ ಚಂದ್ರಪ್ರಭ. ಕಾರು ವಶಕ್ಕೆ ಪಡೆಯದ ಪೊಲೀಸರು..

ಮಹಾ ಭಾರತ ಮತ್ತು ಗಿಚಿ ಗಿಲಿಗಿಲಿ ಕಾಮಿಡಿ ರಿಯಾಲಿಟಿ ಶೋ ಮೂಲಕ ಕರ್ನಾಟಕದ ಜನತೆಗೆ ಪರಿಚಯವಾಗಿರುವ ಚಂದ್ರಪ್ರಭ ಸಕಲೇಶಪುರದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿಗೆ ಹಿಂತಿರುಗುವಾಗ ರಸ್ತೆ ಅಪಘಾತವಾಗಿದೆ. ವೇಗದಲ್ಲಿ ಕಾರು ಓಡಿಸಿಕೊಂಡು ಬರುತ್ತಿದ್ದ ಚಂದ್ರಪ್ರಭ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿ ಅಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು. ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದ್ವಿಚಕ್ರ ವಾಹನ ಸವಾರರ ಮಾಲ್ತೇಶ್ ಸ್ಥಿತಿ ಗಂಭೀರವಾಗಿ ಎಂದು ಕುಟುಂಬಸ್ಥರು ಮತ್ತು ಸ್ನೇಹಿತರು ಆತಂಕದಲ್ಲಿದ್ದಾರೆ.
'ಸಕಲೇಶಪುರದಿಂದ ನಾನು ಚಿತ್ರೀಕರಣ ಮುಗಿಸಿಕೊಂಡು ಬರುತ್ತಿದ್ದೆ ನನ್ನ ಕಾರಿನಲ್ಲಿ ಸುಮಾರು 30 ಸ್ಪೀಡ್‌ನಲ್ಲಿ ಹೋಗುತ್ತಿದ್ದೆ ಮಾಲ್ತೇಶ್ ಅನ್ನೋ ವ್ಯಕ್ತಿ ಕುಡಿದಿದ್ದರು ಅನಿಸುತ್ತದೆ ನನ್ನ ಕಾರಿನ ಲೆಫ್ಟ್ ಸೈಡ್‌ಗೆ ಅವರು ಗಾಡಿಯಲ್ಲಿ ಗುದ್ದಿದ್ದರು ಆಗ ನಾನು ಏನಾಯ್ತು ಯಾವ ಗಾಡಿ ಅಂತ ಕಾರು ನಿಲ್ಲಿಸಿ ನೋಡಿದೆ. ಅವರು ಬಿದ್ದಿದ್ದರು ಅಂತ ಆಟೋ ಮಾಡಿಕೊಂಡು ಅಲ್ಲಿದ್ದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿ ನನ್ನ ಕಾರ್ಯಕ್ರಮಕ್ಕೆ ತಡವಾಗುತ್ತದೆ ಎಂದು ನಾನು ಪೊಲೀಸರಿಗೆ ತಿಳಿಸಿ ಹೊರಟೆ. ಗಾಡಿಗೆ ಗುದ್ದಿದ ತಕ್ಷಣ ನಾನು ನನ್ನ ಸ್ನೇಹಿತರೇ ಅವರನ್ನು ಆಟೋದಲ್ಲಿ ಆಸ್ಪತ್ರೆಗೆ ಸೇರಿಸಿ ಬಂದಿರುವೆ. ಪೊಲೀಸರಿಗೆ ತಿಳಿಸಿದಾಗ ಚಂದ್ರಪ್ರಭ ಅವರೆ ನೀವು ಆಗಾಗ ವಿಚಾರಣೆಗೆ ಬರಬೇಕು ಎಂದು ಹೇಳಿದರು ಶೂಟಿಂಗ್ ಇರುವ ಕಾರಣ ಎರಡು ದಿನ ಬಿಟ್ಟು ಬರುವುದಾಗಿ ನಾನು ಹೇಳಿದೆ. ಆ ವ್ಯಕ್ತಿ ಕುಡಿದಿದ್ದ ಕಾರಣ ಎಚ್ಚರಿಕೆ ಇರಲಿಲ್ಲ ಅನಿಸುತ್ತದೆ ಆದರೆ ಯಾವ ದೊಡ್ಡ ಗಾಯ ಆಗಿರಲಿಲ್ಲ ಸಣ್ಣ ಪುಟ್ಟಗಾಯಗಳಿದ್ದವು. ಆಗ ಯಾವ ರೀತಿ ಪೊಲೀಸ್ ಕಂಪ್ಲೇಂಟ್ ಆಗಿರಲಿಲ್ಲ, ಘಟನೆ ನಡೆದಾಗ ಅಲ್ಲಿದ್ದ ವ್ಯಕ್ತಿಗಳು ನಿಮ್ಮದು ಏನೂ ತಪ್ಪಿಲ್ಲ ಎಂದು ಹೇಳುತ್ತಿದ್ದರು. ನನ್ನ ಜೊತೆ ನನ್ನ ಮಜಾ ಭಾರತ್ ಕಲಾವಿದ ನಿತಿನ್ ಇದ್ದರೂ ಅಲ್ಲಿದ್ದ ಜನರು ಕೂಡ ನೋಡಿದ್ದಾರೆ' ಎಂದು ಚಂದ್ರಪ್ರಭ ಕನ್ನಡ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ನಕಲಿ ಆಧಾರ್ ಕಾರ್ಡ್ ಬಳಸಿ ವಯಸ್ಸು ನಂಬಿಸಿ ಮದ್ವೆ ಆದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ; ಸತ್ಯ ಬಯಲು!
'ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ನಾನೇ ಆಟೋದಲ್ಲಿ ಕರೆದುಕೊಂಡು ಹೋಗಿರುವೆ. ಸಿಸಿಟಿವಿಯಲ್ಲಿ ನಾನೇ ಗಾಡಿ ನಿಲ್ಲಿಸಿ ಸಹಾಯ ಮಾಡುತ್ತಿರುವೆ ಆ ದೃಶ್ಯ ನೋಡಿ. ನಾನು ಯಾರೋ ಹೇಳಿದಕ್ಕೆ ನಾನು ಅವರು ಕುಡಿದಿದ್ದಾರೆ ಅಂತ ಹೇಳುತ್ತಿಲ್ಲ ಮೆಡಿಕಲ್ ಟೆಸ್ಟ್ ಮಾಡಿಸಬೇಕು. ಬೇರೆ ಅವರ ತರ ನಾನು ಗುದ್ದಿ ಹೋಗಿಲ್ಲ ಮಾನವೀಯತೆ ಮರೆದು ಸಹಾಯ ಮಾಡಿ ಹೊರಟಿರುವೆ. ಘಟನೆ ನಡೆದಾಗ ಇಬ್ಬರು ಪೊಲೀಸರು ಅಲ್ಲಿದ್ದರು ಅವರು ಕೂಡ ಈ ಘಟನೆಗೆ ಸಾಕ್ಷಿ' ಎಂದು ಚಂದ್ರಪ್ರಭ ಹೇಳಿದ್ದಾರೆ.
ಗುಟ್ಟಾಗಿ ಮದುವೆ ಆದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ; ಹೆಂಡ್ತಿ ಸುಂದರವಾಗಿದ್ರೂ ಮದ್ವೆ ಆಗಿಲ್ಲ ಅನ್ನೋದು ಯಾಕೆ?
'ಕಾರಿನಲ್ಲಿ ನಾನು ನನ್ನ ಸ್ನೇಹಿತ ನಿತಿನ್ ಇದ್ದೆವು ಘಟನೆ ನಡೆದಾಗ ನಾನು ಕಾರಿನಲ್ಲಿ ಹೊರಟೆ ಆದರೆ ನನ್ನ ಸ್ನೇಹಿತ ನಿತಿನ್ ಅಲ್ಲಿದ್ದು ನೋಡಿಕೊಂಡಿದ್ದಾರೆ. ಪೊಲೀಸರು ಏನೇ ತನಿಖೆಗೆ ನನ್ನನ್ನು ಕರೆದರೂ ನಾನು ಅಲ್ಲಿಗೆ ಹೋಗುವೆ. ನನ್ನ ಸ್ನೇಹಿತರು ಪೊಲೀಸರಿಗೆ ಫೋನ್ ಮಾಡಿ ಮಾಲ್ತೇಶ್ ಆರೋಗ್ಯ ಬಗ್ಗೆ ವಿಚಾರಿಸಿದ್ದಾರೆ. ನಾನು ಕೂಡ ವಿಚಾರಣೆ ಮಾಡಿಕೊಂಡಿರುವೆ. ನನ್ನ ಪ್ರಕಾರ ಈ ಅಪಘಾತಕ್ಕೆ ಕಾರಣ ಗೊತ್ತಿಲ್ಲ ಮುಂದೆಯಿಂದ ನಾನು ಗುದ್ದಿದ್ದರೆ ಅದು ನನ್ನ ತಪ್ಪು ಆದರೆ ಅವರು ಕುಡಿದುಕೊಂಡು ವಾಲಾಗುತ್ತಿದ್ದರು ಹೀಗಾಗಿ ಅವರೇ ಗುದ್ದಿ ಬಿದ್ದಿರುವುದು' ಎಂದಿದ್ದಾರೆ ಚಂದ್ರಪ್ರಭ.